ಕೇಜ್ರಿವಾಲ್'ಗೆ ದಂಡ ಹಾಕಿದ ದಿಲ್ಲಿ ಹೈಕೋರ್ಟ್

By Suvarna Web DeskFirst Published Sep 4, 2017, 5:58 PM IST
Highlights

ಅರುಣ್ ಜೇಟ್ಲಿ ದಾಖಲಿಸಿರುವ ಹತ್ತು ಕೋಟಿ ರೂ ಮಾನಹಾನಿ ಮೊಕದ್ದಮೆ ವಿಚಾರದಲ್ಲಿ ಸರಿಯಾದ ಸಮಯಕ್ಕೆ ಕೋರ್ಟ್'ಗೆ ಉತ್ತರ ಸಲ್ಲಿಸದೇ ವಿಳಂಬ ಮಾಡಿದ್ದಕ್ಕಾಗಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್'ಗೆ ದಿಲ್ಲಿ ಹೈಕೋರ್ಟ್ 5 ಸಾವಿರ ರು. ದಂಡ ವಿಧಿಸಿದೆ. ಕೋರ್ಟ್'ನ ಸಮಯ ಹಾಳು ಮಾಡಿದ್ದಕ್ಕಾಗಿ ಈ ದಂಡ ಹಾಕಲಾಗಿದೆ. ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತಾ ಅವರು 5 ಸಾವಿರ ರೂಪಾಯಿಯನ್ನು ಸೇನಾ ಕಲ್ಯಾಣ ನಿಧಿಗೆ ಕೊಡುವಂತೆ ಕೇಜ್ರಿವಾಲ್'ಗೆ ಸೂಚನೆ ನೀಡಿದ್ದಾರೆ.

ನವದೆಹಲಿ(ಸೆ. 04): ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎರಡನೇ ಬಾರಿ ಕೋರ್ಟ್'ನಿಂದ ದಂಡ ಪಡೆದಿದ್ದಾರೆ. ಅರುಣ್ ಜೇಟ್ಲಿ ದಾಖಲಿಸಿರುವ ಹತ್ತು ಕೋಟಿ ರೂ ಮಾನಹಾನಿ ಮೊಕದ್ದಮೆ ವಿಚಾರದಲ್ಲಿ ಸರಿಯಾದ ಸಮಯಕ್ಕೆ ಕೋರ್ಟ್'ಗೆ ಉತ್ತರ ಸಲ್ಲಿಸದೇ ವಿಳಂಬ ಮಾಡಿದ್ದಕ್ಕಾಗಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್'ಗೆ ದಿಲ್ಲಿ ಹೈಕೋರ್ಟ್ 5 ಸಾವಿರ ರು. ದಂಡ ವಿಧಿಸಿದೆ. ಕೋರ್ಟ್'ನ ಸಮಯ ಹಾಳು ಮಾಡಿದ್ದಕ್ಕಾಗಿ ಈ ದಂಡ ಹಾಕಲಾಗಿದೆ. ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತಾ ಅವರು 5 ಸಾವಿರ ರೂಪಾಯಿಯನ್ನು ಸೇನಾ ಕಲ್ಯಾಣ ನಿಧಿಗೆ ಕೊಡುವಂತೆ ಕೇಜ್ರಿವಾಲ್'ಗೆ ಸೂಚನೆ ನೀಡಿದ್ದಾರೆ.

ಜುಲೈ 26ರೊಳಗೆ ಕೋರ್ಟ್ ಸೂಚನೆಗೆ ಉತ್ತರ ಕೊಡಬೇಕಿದ್ದರೂ ಕೇಜ್ರಿವಾಲ್ ಎರಡು ವಾರ ವಿಳಂಬ ಮಾಡಿದರು. ದಿಲ್ಲಿ ಸಿಎಂ ಬೇಕಂತಲೇ ವಿಳಂಬ ಮಾಡುತ್ತಿದ್ದಾರೆ, ಎಂದು ಅರುಣ್ ಜೇಟ್ಲಿ ಪರ ವಕೀಲ ಮಾಣಿಕ್ ಡೋಂಗ್ರಾ ಅವರು ಹೈಕೋರ್ಟ್'ನಲ್ಲಿ ವಾದಿಸಿದರು. ಹೈಕೋರ್ಟ್ ರಿಜಿಸ್ಟ್ರಿಯಿಂದ ಎರಡು ಸಂದರ್ಭದಲ್ಲಿ ತಾಂತ್ರಿಕ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಲಿಖಿತ ಉತ್ತರ ಸಲ್ಲಿಸುವಲ್ಲಿ ವಿಳಂಬವಾಗಿದ್ದು, ಮನ್ನಿಸಬೇಕು ಎಂದು ಕೇಜ್ರಿವಾಲ್ ಪರ ವಕೀಲರು ಮನವಿ ಮಾಡಿಕೊಂಡರು. ವಾದ ಪ್ರತಿವಾದವನ್ನು ಆಲಿಸಿದ ಕೋರ್ಟ್, ಕೇಜ್ರಿವಾಲ್ 5 ಸಾವಿರ ರೂ ಹಣವನ್ನು ಭರಿಸಬೇಕಾಗುತ್ತದೆ ಎಂದು ತೀರ್ಪು ನೀಡಿತು.

Latest Videos

click me!