
ನವದೆಹಲಿ(ಡಿ. 15): ಮೊಬೈಲ್ನಲ್ಲಿ ಕೆಲವು ಆ್ಯಪ್'ಗಳ ಮೂಲಕ ಹ್ಯಾಕರ್ಸ್'ಗಳು ನಿಮ್ಮ ಖಾತೆಯ ಮಾಹಿತಿಗಳನ್ನ ಕದಿಯಬಹುದು. ಇಂಥದ್ದೊಂದು ಎಚ್ಚರಿಕೆ ಸಂದೇಶ ರವಾನಿಸಿರೋದು ಕೇಂದ್ರ ಗೃಹ ಸಚಿವಾಲಯ. ಇಂಥ ನಾಲ್ಕು ಅಪಾಯಕಾರಿ ಆ್ಯಪ್'ಗಳನ್ನು ಸಚಿವಾಲಯವು ಪಟ್ಟಿ ಮಾಡಿದೆ. ಆ ನಾಲ್ಕು ಆ್ಯಪ್'ಗಳನ್ನ ನಿಮ್ಮ ಮೊಬೈಲ್ನಿಂದ ಈಗಲೇ ಡಿಲೀಟ್ ಮಾಡಿಬಿಡಿ.
ಯಾವುದು ಈ ಆ್ಯಪ್'ಗಳು?
1) vdjunkie - ವಿಡಿಯೋ ಆ್ಯಪ್
2) Talking Frog - ಎಂಟರ್ಟೈನ್ಮೆಂಟ್ ಆ್ಯಪ್
3) TOP GUN - ಗೇಮ್ ಆ್ಯಪ್
4) MPJUNKIE - ಸಂಗೀತದ ಆ್ಯಪ್
ಏನು ಅಪಾಯ ಮಾಡುತ್ತವೆ?
ಈ ಆ್ಯಪ್'ಗಳು ನಿಮ್ಮ ಸ್ಮಾರ್ಟ್'ಫೋನ್'ನಲ್ಲಿದ್ದರೆ, ಅವುಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯೂ ಸೇರಿದಂತೆ, ನಿಮ್ಮ ಖಾಸಗಿ ವಿಚಾರಗಳನ್ನು ಕದಿಯುವುದು ಹ್ಯಾಕರ್ಸ್'ಗಳಿಗೆ ಸುಲಭವಾಗಲಿದೆ. ಹೀಗೆ ಆ್ಯಪ್'ಗಳ ಮೂಲಕ ಮಾಹಿತಿ ಕದಿಯುತ್ತಿರುವ ಕುತಂತ್ರ ನಡೆಸುತ್ತಿರುವುದು ಪಾಕಿಸ್ತಾನದ ಐಎಸ್'ಐ. ಹೀಗಾಗಿ ಇವು ದೇಶದ ಭದ್ರತೆಗೂ ಒಳ್ಳೆಯದಲ್ಲ. ಈಗಲೇ ಈ ಆ್ಯಪ್'ಗಳನ್ನ ಡಿಲೀಟ್ ಮಾಡಿ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.