ಸಹಕಾರ ಬ್ಯಾಂಕ್'ಗಳ ಹಳೇ ನೋಟಿಗೆ ಮುಕ್ತಿ: ಜು.20 ರವರೆಗೂ ಜಮೆ ಮಾಡಲು ಚಾನ್ಸ್

By Suvarna Web DeskFirst Published Jun 22, 2017, 10:12 AM IST
Highlights

ಅಪನಗದೀಕರಣದ ಅವಧಿ ಯಲ್ಲಿ ಗ್ರಾಹಕರಿಂದ ಸಂಗ್ರಹಿಸಿದ್ದ 500 ರು. ಹಾಗೂ 1000 ರು. ಮೌಲ್ಯದ ಹಳೆಯ ನೋಟುಗಳನ್ನು ತನ್ನಲ್ಲಿ ಜಮೆ ಮಾಡಲು ಆರ್‌ಬಿಐ, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು, ವಾಣಿಜ್ಯ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಿಗೆ ಜುಲೈ 20ರವರೆಗೆ ಅವಕಾಶ ನೀಡಿದೆ.

ನವದೆಹಲಿ(ಜೂ.22): ಅಪನಗದೀಕರಣದ ಅವಧಿ ಯಲ್ಲಿ ಗ್ರಾಹಕರಿಂದ ಸಂಗ್ರಹಿಸಿದ್ದ 500 ರು. ಹಾಗೂ 1000 ರು. ಮೌಲ್ಯದ ಹಳೆಯ ನೋಟುಗಳನ್ನು ತನ್ನಲ್ಲಿ ಜಮೆ ಮಾಡಲು ಆರ್‌ಬಿಐ, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು, ವಾಣಿಜ್ಯ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಿಗೆ ಜುಲೈ 20ರವರೆಗೆ ಅವಕಾಶ ನೀಡಿದೆ.

ಆರ್‌ಬಿಐನ ಈ ನಿರ್ಧಾರದಿಂದಾಗಿ ಅಪನಗದೀಕರಣದ ನಂತರ ಸಾವಿರಾರು ಕೋಟಿ ರು.ಹಣವನ್ನು ಖಜಾನೆಯಲ್ಲಿ ನಿರುಪಯುಕ್ತವಾಗಿ ಇಟ್ಟುಕೊಂಡಿದ್ದ ಸಹ ಕಾರ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಆದರೆ ಬ್ಯಾಂಕ್‌, ಅಂಚೆ ಕಚೇರಿಗಳು ಮೊದಲ ಗಡುವಿನೊಳಗೆ ಯಾಕೆ ನೋಟು ಠೇವಣಿ ಮಾಡಲಿಲ್ಲ ಎಂಬು ದನ್ನು ಜಮೆ ವೇಳೆ ಸ್ಪಷ್ಟಪಡಿಸಬೇಕಾಗುತ್ತದೆ.

ಎರಡನೇ ಅವಕಾಶ: ಹಳೆಯ ನೋಟು ಜಮೆ ಮಾಡಲು ವಾಣಿಜ್ಯ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಿಗೆ 2016ರ ಡಿ.31ರ ಗಡುವು ನೀಡಲಾಗಿತ್ತು. ಆದರೆ ಸಹಕಾರಿ ಬ್ಯಾಂಕ್‌ಗಳಿಗೆ ಅವಕಾಶ ನೀಡಿರಲಿಲ್ಲ. ಕಾರಣ ಅಪನಗದೀಕರಣ ಘೋಷಣೆಯಾದ ಒಂದು ವಾರದಲ್ಲೇ ಸಹಕಾರಿ ಬ್ಯಾಂಕ್‌ಗಳಲ್ಲಿ ಭಾರಿ ಪ್ರಮಾಣದ ರದ್ದಾದ ನೋಟುಗಳು ಸಂಗ್ರಹವಾಗಿದ್ದವು. ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐನ ನೇರ ಅಧೀನಕ್ಕೆ ಒಳಪಡದ ಕಾರಣ ಇಲ್ಲಿ ಕಾಳಧನವು ರದ್ದಾದ ನೋಟುಗಳ ರೂಪದಲ್ಲಿ ಜಮೆ ಯಾಗುತ್ತಿದೆ ಎಂಬ ಗುಮಾನಿ ಇತ್ತು. ಹೀಗಾಗಿ ಇಲ್ಲಿ ರದ್ದಾದ ನೋಟಿನ ಜಮೆ ಮತ್ತು ವಿನಿಮಯವನ್ನು ಸ್ತಬ್ಧಗೊಳಿಸು ವಂತೆ ಆರ್‌ಬಿಐ ಸೂಚಿಸಿತ್ತು ಹಾಗೂ ಈ ನೋಟು ಜಮೆಗೆ ನಿರಾಕರಿಸಿತ್ತು.

ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ ಹಳೆಯ ನೋಟುಗಳ ರೂಪದಲ್ಲಿದ್ದ 473 ಕೋಟಿ ರು. ಹಣವು ಆರ್‌ಬಿಐನಲ್ಲಿ ಜಮೆಯಾಗದೇ ಹಾಗೇ ಕೊಳೆಯುತ್ತಿತ್ತು. 

click me!