ಆಫೀಸು, ಅಂಗಡಿಗಳಲ್ಲಿ ಸಿಸಿಟೀವಿ ಕಡ್ಡಾಯ!: ಸಿಸಿಟೀವಿ ಅಳವಡಿಕೆ ಎಲ್ಲೆಲ್ಲಿ ಕಡ್ಡಾಯ?

Published : Jun 22, 2017, 09:51 AM ISTUpdated : Apr 11, 2018, 12:35 PM IST
ಆಫೀಸು, ಅಂಗಡಿಗಳಲ್ಲಿ ಸಿಸಿಟೀವಿ ಕಡ್ಡಾಯ!: ಸಿಸಿಟೀವಿ ಅಳವಡಿಕೆ ಎಲ್ಲೆಲ್ಲಿ ಕಡ್ಡಾಯ?

ಸಾರಾಂಶ

ಬೆಂಗಳೂರು ಸೇರಿ ರಾಜ್ಯದ ಎಲ್ಲಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಸ್ಥೆಗಳು ಸಾರ್ವಜನಿಕ ಸುರಕ್ಷತೆಗಾಗಿ ಸಿಸಿಟೀವಿ ಅಳವಡಿ ಸುವುದು ಇನ್ನುಮುಂದೆ ಕಡ್ಡಾಯವಾಗಲಿದೆ.

ಬೆಂಗಳೂರು(ಜೂ.22): ಬೆಂಗಳೂರು ಸೇರಿ ರಾಜ್ಯದ ಎಲ್ಲಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಸ್ಥೆಗಳು ಸಾರ್ವಜನಿಕ ಸುರಕ್ಷತೆಗಾಗಿ ಸಿಸಿಟೀವಿ ಅಳವಡಿ ಸುವುದು ಇನ್ನುಮುಂದೆ ಕಡ್ಡಾಯವಾಗಲಿದೆ.

ಅಷ್ಟೇ ಅಲ್ಲ. ಸಿಸಿಟೀವಿಯಲ್ಲಿ ಸೆರೆಯಾಗುವ ದೃಶ್ಯಗಳನ್ನು 1 ತಿಂಗಳು ಕಾಲ ಸಂಗ್ರಹಿಸಿಟ್ಟು ಅದನ್ನು ಪೊಲೀಸರು ಕೇಳಿದರೆ ಒದಗಿಸಬೇಕು. ಇಲ್ಲವಾದರೆ ಅಂತಹ ವಾಣಿಜ್ಯ ಸಂಸ್ಥೆಗಳ ಪರವಾನಗಿಯನ್ನು ಸರ್ಕಾರ ರದ್ದುಗೊಳಿಸಲಿದೆ. ಅಲ್ಲದೆ ಯಾವುದೇ ಸ್ಥಳದಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆಗಳು ಅಳವಡಿಸಿದ ಸಿಸಿಟೀವಿಯಲ್ಲಿ ಸೆರೆಯಾದ ದೃಶ್ಯಗಳ ಮೇಲೆ ಸರ್ಕಾರ ಹಕ್ಕು ಹೊಂದಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬುಧವಾರ ವಿಧಾನಸಭೆಯಲ್ಲಿ ಮಂಡನೆಯಾದ ಕರ್ನಾಟಕ ಸಾರ್ವಜನಿಕ ಸುರಕ್ಷೆಯ (ಕ್ರಮಗಳ) ಜಾರಿ ವಿಧೇಯಕ 2017 ಅನ್ನು ಅಂಗೀಕರಿಸಲಾಗಿದೆ. ಇದಕ್ಕೆ ಸದ್ಯದಲ್ಲೇ ನಿಯಮಾವಳಿ ರಚನೆಯಾಗಿ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಇದು ಎಲ್ಲಾ ನಗರ ಪಾಲಿಕೆಗಳಲ್ಲಿ ಜಾರಿಯಾಗಲಿದೆ.

ಗೃಹಮಂತ್ರಿ ಡಾ.ಜಿ. ಪರಮೇಶ್ವರ್‌ ಪರವಾಗಿ ಕಾನೂನು ಸಚಿವ ಜಯಚಂದ್ರ ವಿಧೇಯಕವನ್ನು ಮಂಡಿಸಿದರು. ನಂತರ ಅಂಗೀಕಾರಕ್ಕೆ ವಿನಂತಿಸಿದಾಗ ಪ್ರತಿಪಕ್ಷ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಲವು ಕೇಸುಗಳಲ್ಲಿ ಕೋರ್ಟ್‌ಗೆ ಹೋಗಿದ್ದ ಪರಿಣಾಮ ಈ ವಿಧೇಯಕ ತರಲಾಗಿದೆಯಯೇ? ಎಂದರು.

ಇದಕ್ಕೆ ಉತ್ತರಿಸಿದ ಸಚಿವ ಟಿ.ಬಿ. ಜಯಚಂದ್ರ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಅಪರಾಧ ಪ್ರಮಾಣವನ್ನು ಇನ್ನೂ ಕಡಿಮೆ ಮಾಡಲು ವಿಧೇಯಕ ತರಲಾಗಿದೆ. ವಾಣಿಜ್ಯ ಸಂಸ್ಥೆಗಳು ಸಿಸಿಟೀವಿಗಳನ್ನು ಅಳವಡಿಸಲು .8000ರಿಂದ .10,000 ವರೆಗೂ ವೆಚ್ಚವಾಗಲಿದೆ ಎಂದರು.

ಸಿಸಿಟೀವಿ ಅಳವಡಿಕೆ ಎಲ್ಲೆಲ್ಲಿ ಕಡ್ಡಾಯ?

ರಾಜ್ಯದ ವಾಣಿಜ್ಯ ಕಾರ್ಯಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ರೈಲ್ವೆ ನಿಲ್ದಾಣಗಳು, ಬಸ್‌ ನಿಲ್ದಾಣಗಳು, ಸಂಘಟಿತ ಧಾರ್ಮಿಕ ಕೂಟಗಳು ಸೇರುವ ಸ್ಥಳ ಗಳು ಸೇರಿ ಪ್ರಮುಖ ಸ್ಥಳಗಳಲ್ಲಿ ಅವುಗಳ ಮಾಲೀಕರು ಸಿಸಿಟೀವಿ ಅಳವಡಿಸಬೇಕು. ಅಪರಾಧಗಳ ತನಿಖೆಗೆ ಅನುಕೂಲ ವಾಗುವಂತೆ ನಿಯೋಜಿತ ಪೊಲೀಸ್‌ ಅಧಿಕಾರಿಗಳಿಗೆ 30 ದಿನಗಳ ಅವಧಿಯ ದೃಶ್ಯಗಳನ್ನು ನೀಡುವುದಕ್ಕೆ ಸಂಗ್ರಹವಾಗಿಡಬೇಕು. ಸಿಸಿಟೀವಿ ಗಳನ್ನು ಅಳವಡಿಸಿ, ದೃಶ್ಯಗಳನ್ನು ಸಂಗ್ರಹಿಸಿಡುವಲ್ಲಿ ವಿಫಲವಾ ಗುವ ಸಂಸ್ಥೆಗಳ ಮಾಲೀಕರಿಗೆ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು. ಇದು ಬಿಬಿಎಂಪಿ ಮತ್ತು ರಾಜ್ಯದ ಇತರ ನಗರ ಪಾಲಿಕೆಗಳಿಗೆ ಅನ್ವಯಿಸಲಿದೆ. ಹಾಗೆಯೇ ಮುಂದೆ ಗುರುತಿಸಬಹುದಾದ ಸ್ಥಳಗಳಿಗೂ ಇದು ಅನ್ವಯವಾಗಲಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು