ವೋಟರ್‌ ಐಡಿಗೂ ಇನ್ಮುಂದೆ ಆಧಾರ್‌ ಲಿಂಕ್‌?

By Web DeskFirst Published Oct 9, 2019, 8:08 AM IST
Highlights

ಮತದಾರ ಪಟ್ಟಿಯಲ್ಲಿ ಹೊಸದಾಗಿ ನಕಲಿ ಹೆಸರು ನೋಂದಾಯಿಸಿಕೊಳ್ಳುವುದನ್ನು ತಡೆಯಲು ಹಾಲಿ ಇರುವ ಹಾಗೂ ಹೊಸ ವೋಟರ್‌ ಐಡಿಗಳಿಗೆ ಆಧಾರ್‌ ನಂಬರ್‌ ಜೋಡಣೆ | ವೋಟರ್‌ ಐಡಿಗೂ ಇನ್ಮುಂದೆ ಆಧಾರ್‌ ಲಿಂಕ್‌?

ನವದೆಹಲಿ[ಅ.09]: ಬ್ಯಾಂಕ್‌ ಖಾತೆ, ಗ್ಯಾಸ್‌, ಪಾಸ್‌ಪೋರ್ಟ್‌ ಹಾಗೂ ಪಾನ್‌ ಕಾರ್ಡ್‌ಗಳಿಗೆ ಆಧಾರ್‌ ನಂಬರ್‌ ಜೋಡಿಸುವ ಆದೇಶದ ಬಳಿಕ ಈಗ ಮತದಾನ ಗುರುತಿನ ಚೀಟಿಗೂ ಆಧಾರ್‌ ಲಿಂಕ್‌ ಮಾಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ಮಾಡಿದೆ.

ಮತದಾರ ಪಟ್ಟಿಯಲ್ಲಿ ಹೊಸದಾಗಿ ನಕಲಿ ಹೆಸರು ನೋಂದಾಯಿಸಿಕೊಳ್ಳುವುದನ್ನು ತಡೆಯಲು ಹಾಲಿ ಇರುವ ಹಾಗೂ ಹೊಸ ವೋಟರ್‌ ಐಡಿಗಳಿಗೆ ಆಧಾರ್‌ ನಂಬರ್‌ ಜೋಡಣೆ ಮಾಡಬೇಕು ಎಂದು ಚುನಾವಣಾ ಅಯೋಗ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿತ್ತು.

ಆಯೋಗದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಕಾನೂನು ಸಚಿವಾಯ, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದೆ. ಆಗಸ್ಟ್‌ನಲ್ಲಿ ಈ ಬಗ್ಗೆ ಆಯೋಗ ಪತ್ರ ಬರೆದಿದ್ದು, ಇದಕ್ಕೆ ಕಾನೂನು ತಿದ್ದುಪಡಿ ಮಾಡಬೇಕು ಎಂದು ವಿನಂತಿಸಿಕೊಂಡಿತ್ತು.

ಈ ಹಿಂದೆ 2015 ಆಗಸ್ಟ್‌ನಲ್ಲಿ, ಮತದಾನ ಪಟ್ಟಿಯಲ್ಲಿ ನಕಲಿ ನೋಂವಣೆ ಹಾಗೂ ದೋಷ ರಹಿತ ಮತದಾನ ಪಟ್ಟಿಗಾಗಿ ಮತದಾನ ಗುರುತಿನ ಚೀಟಿಗೆ ಆಧಾರ್‌ ನಂಬರ್‌ ಜೋಡಣೆ ಮಾಡಬೇಕೆನ್ನುವ ಚುನಾವಣಾ ಆಯೋಗದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಬ್ರೇಕ್‌ ಹಾಕಿತ್ತು.

ಅಕ್ಟೋಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

click me!