ಭಾರತೀಯ ಉಪಖಂಡದ ಅಲ್‌ಖೈದಾ ಮುಖ್ಯಸ್ಥ ಆಸಿಮ್‌ ಆಫ್ಘನ್‌ನಲ್ಲಿ ಬಲಿ!

By Web DeskFirst Published Oct 9, 2019, 7:56 AM IST
Highlights

ಭಾರತೀಯ ಉಪಖಂಡದ ಅಲ್‌ಖೈದಾ ಮುಖ್ಯಸ್ಥ ಆಸಿಮ್‌ ಆಫ್ಘನ್‌ನಲ್ಲಿ ಬಲಿ| ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಉತ್ತರಪ್ರದೇಶ ಮೂಲದ ಆಸಿಂ ಉಮರ್‌

ಕಾಬೂಲ್‌[ಅ.09]: ಭಾರತೀಯ ಉಪಖಂಡದಲ್ಲಿನ ಅಲ್‌ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಉತ್ತರಪ್ರದೇಶ ಮೂಲದ ಆಸಿಂ ಉಮರ್‌, ಇತ್ತೀಚೆಗೆ ಆಷ್ಘಾನಿಸ್ತಾನದಲ್ಲಿ ನಡೆದ ದಾಳಿಯೊಂದರಲ್ಲಿ ಹತನಾಗಿದ್ದಾನೆ ಎಂದು ಆಷ್ಘಾನಿಸ್ತಾನದ ಗುಪ್ತಚರ ಸಂಸ್ಥೆ ಖಚಿತಪಡಿಸಿದೆ.

ಉತ್ತರಪ್ರದೇಶದ ಸಂಬಾಲ್‌ ಜಿಲ್ಲೆಯವನಾದ ಉಮರ್‌ 1995ರಲ್ಲಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಹರ್ಕತ ಉಲ್‌ ಮುಜಾಹಿದೀನ್‌ ಸಂಘಟನೆ ಸೇರಿದ್ದ. 2014ರಲ್ಲಿ ಅಲ್‌ಖೈದಾ ಸಂಘಟನೆಯ, ಭಾರತೀಯ ಉಪಖಂಡದಲ್ಲಿನ ತನ್ನ ಕೃತ್ಯಗಳಿಗೆಂದೇ ಹೊಸ ವಿಭಾಗ ತೆರೆದಾಗ, ಉಮರ್‌ನನ್ನು ಆ ವಿಭಾಗದ ಮುಖ್ಯಸ್ಥನನ್ನಾಗಿ ನೇಮಕ ಮಾಡಿತ್ತು. ಅಂದಿನಿಂದಲೂ ಆತ ಆದೇ ಸ್ಥಾನದಲ್ಲಿ ಮುಂದುವರೆದಿದ್ದ. 2016ರಲ್ಲಿ ಈತನನ್ನು ವಿಶೇಷ ಘೋಷಿತ ಜಾಗತಿಕ ಉಗ್ರ ಎಂದು ಸ್ವತಃ ಅಮೆರಿಕ ಘೋಷಿಸಿತ್ತು.

ಈ ನಡುವೆ ಸೆ.23ರಂದು ಅಮೆರಿಕ ನೇತೃತ್ವದ ಪಡೆಗಳು ಹೆಲ್ಮೆಂಡ್‌ ಪ್ರಾಂತ್ಯದ ಮುಸಾ ಖಲಾ ಜಿಲ್ಲೆಯಲ್ಲಿನ ತಾಲಿಬಾನ್‌ ತಾಣವೊಂದರ ಮೇಲೆ ದಾಳಿ ನಡೆಸಿದ ವೇಳೆ ಇತರೆ 6 ಉಗ್ರರೊಂದಿಗೆ ಉಮರ್‌ ಕೂಡಾ ಹತನಾಗಿದ್ದಾನೆ ಎಂದು ಆಷ್ಘಾನಿಸ್ತಾನದ ಗುಪ್ತಚರ ಸಂಸ್ಥೆಯಾದ ಎನ್‌ಡಿಎಸ್‌, ಮಂಗಳವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

click me!