ದಸರಾ ಉದ್ಘಾಟಿಸಲು ಸುಧಾಮೂರ್ತಿಗೆ ಬಂತು ಅಧಿಕೃತ ಆಹ್ವಾನ

Published : Oct 03, 2018, 10:43 AM ISTUpdated : Oct 03, 2018, 04:25 PM IST
ದಸರಾ ಉದ್ಘಾಟಿಸಲು ಸುಧಾಮೂರ್ತಿಗೆ ಬಂತು ಅಧಿಕೃತ ಆಹ್ವಾನ

ಸಾರಾಂಶ

ವಿಶ್ವ ಪ್ರಸಿದ್ಧ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ. ದಸರಾ ಉತ್ಸವದ ಉದ್ಘಾಟಕರಿಗೆ ರೆಡ್ ಕಾರ್ಪೆಟ್ ಸಿದ್ಧವಾಗಿದೆ.

ಬೆಂಗಳೂರು, [ಅ.03]: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಉದ್ಘಾಟನೆಗಾಗಿ ಇನ್ಫೋಸಿಸ್​ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.

ಇಂದು [ಬುಧವಾರ] ಮೈಸೂರು ಉಸ್ತುವಾರಿ ಸಚಿವ‌ ಜಿ.ಟಿ‌. ದೇವೇಗೌಡ ಹಾಗೂ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್‌ ಅವರು ಜಯನಗರದ ಇನ್ಫೋಸಿಸ್‌ ಫೌಂಡೇಶನ್‌ ಕಚೇರಿಗೆ ಆಗಮಿಸಿ ಆಮಂತ್ರಣ ನೀಡಿದ್ದಾರೆ. 

"

ದಸರಾ ಉದ್ಘಾಟನೆಗೆ ಸುಧಾ ಮೂರ್ತಿ: ಅಪಸ್ವರ ಎತ್ತಿದ ಚಿಂತಕಿಗೆ ಟಾಂಗ್

ಈ ವೇಳೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್​ ಹಾಗೂ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಸಾಥ್​ ನೀಡಿದರು. ಸರಳ ಸಜ್ಜನಿಕೆಗೆ ಹೆಸರಾದ ಸುಧಾಮೂರ್ತಿ ಅವರು ಸಾಮಾಜಿಕ ಕಾರ್ಯಗಳಗಳಲ್ಲಿ ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ