
ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಯೋಜನೆ ಸಾಕಾರಕ್ಕಾಗಿ ಪಕ್ಷಬೇಧ ಮರೆತು ಬೆಂಬಲ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಇದರ ಭಾಗವಾಗಿ ಗಾಂಧಿ ಜಯಂತಿಯಾದ ಮಂಗಳವಾರ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ತಮ್ಮ ಕೈಗೆ ಗ್ಲೋಸ್ ತೊಟ್ಟು, ಸಲಿಕೆ ಹಿಡಿದು ಚರಂಡಿ ದುರಸ್ತಿಗೊಳಿಸಿದ್ದಾರೆ. ಈ ವಿಡಿಯೋದಲ್ಲಿ ಬಿಳಿ ಅಂಗಿ, ಮೇಲೆತ್ತಿ ಕಟ್ಟಲಾಗಿರುವ ಬಿಳಿ ದೋತಿ ತೊಟ್ಟಿರುವ ಸಿಎಂ ನಾರಾಯಣಸ್ವಾಮಿ ಅವರು, ಹೊಲಸಿನಿಂದಾಗಿ ಕಂದು ಬಣ್ಣಕ್ಕೆ ತಿರುಗಿದ ಚರಂಡಿಯೊಳಕ್ಕೆ ಇಳಿದು, ಗಲೀಜನ್ನು ಸಲಿಕೆಯಲ್ಲಿ ಹೊರ ಹಾಕುತ್ತಿದ್ದಾರೆ.
ಪುದೆಚೆರಿಯಲ್ಲಿರುವ ಕನ್ನಡದ ಖ್ಯಾತ ನಿರ್ದೇಶಕಿ ಸುಮನಾ ಕಿತ್ತೂರು ಸಹ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿದ್ದು, ಸದಾ ರಾಜ್ಯಪಾಲೆ ಕಿರಣ್ ಬೇಡಿ ಅವರೊಂದಿಗೆ ಕಾದಾಡಿ ಬಳಲುವ ಸ್ವಾಮಿಯ ಈ ಕಾರ್ಯ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.