ಶ್ರವಣಬೆಳಗೊಳದಲ್ಲಿ ಗುಜರಾತಿ ಜಾನಪದ ನೃತ್ಯ ಮಾಡಿ ಅಚ್ಚರಿ ಮೂಡಿಸಿದ ವಾಜುಬಾಯಿ ವಾಲಾ

By Suvarna Web DeskFirst Published Jul 7, 2017, 7:51 PM IST
Highlights

ಮಿತಭಾಷಿಯೆಂದೇ ಜನಜನಿತರಾದ ಮೌನವನ್ನೇ ಹೆಚ್ಚು ಇಷ್ಟಪಡುವ ರಾಜ್ಯಪಾಲ ವಾಜುಬಾಯಿ ಆರ್ .ವಾಲಾ ಅವರು ತಮ್ಮೂರು ಗುಜರಾತಿನ ಜನಪದ ನೃತ್ಯ ಮಾಡಿ ಪ್ರೇಕ್ಷಕರಲ್ಲಿ ಆಚ್ಚರಿ ಮೂಡಿಸಿದರು.

ಶ್ರವಣಬೆಳಗೊಳ (ಜು.07): ಮಿತಭಾಷಿಯೆಂದೇ ಜನಜನಿತರಾದ ಮೌನವನ್ನೇ ಹೆಚ್ಚು ಇಷ್ಟಪಡುವ ರಾಜ್ಯಪಾಲ ವಾಜುಬಾಯಿ ಆರ್ .ವಾಲಾ ಅವರು ತಮ್ಮೂರು ಗುಜರಾತಿನ ಜನಪದ ನೃತ್ಯ ಮಾಡಿ ಪ್ರೇಕ್ಷಕರಲ್ಲಿ ಆಚ್ಚರಿ ಮೂಡಿಸಿದರು.
 
ಶುಕ್ರವಾರ ಶ್ರವಣಬೆಳಗೊಳದಲ್ಲಿ ನಡೆದ ಕಾರ್ಯಕ್ರಮದ ಮಧ್ಯೆ ವರ್ಣರಂಜಿತ ವೇಷಭೂಷಣ ತೊಟ್ಟಿದ್ದ ಯುವಕ- ಯುವತಿಯರು ಅತ್ಯಾಮೋಘವಾಗಿ ತಮ್ಮದೇ ಶೈಲಿಯಲ್ಲಿ ನರ್ತಿಸುತ್ತಿದ್ದರು. ಕೆಲ ನಿಮಿಷ ನೃತ್ಯ ನೋಡಿದ ರೋಮಾಂಚನರಾದ ರಾಜ್ಯಪಾಲರು, ಡ್ಯಾನ್ಸ್ ಕರ್ತಾ ವೂ (ನಾನು ಡ್ಯಾನ್ಯ್ ಮಾಡುತ್ತೇನೆ ) ಎಂದು ಹಿಂದಿ ಭಾಷೆಯಲ್ಲಿ ಹೇಳಿದರು. ಅದಕ್ಕೆ ವೇದಿಕೆಯಲ್ಲಿ ಶೀ ಕ್ಷೇತ್ರದ ಚಾರುಕೀರ್ತಿ ಸ್ವಾಮೀಜಿ ಮತ್ತಿತರರು.. ಕೀಜಿಯೇ .. ಎಂದರು.
ಹಾಗೆನ್ನುವ ಮೊದಲೇ ಎದ್ದು ನಿಂತಿದ್ದ 75 ರ ಹರೆಯದ ರಾಜ್ಯಪಾಲರು ಪೊಲೀಸ್ ಬೆಂಗಾವಲನ್ನು ದಾಟಿ ಕಲಾವಿದರ ಮಧ್ಯೆ ಸೇರಿಕೊಂಡು ಸುಮಾರು 4 ನಿಮಿಷ ನರ್ತಿಸಿದರು. 
 
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹಿರಿಯ ಸಾಹಿತಿ ಡಾ. ಹಂಪಾ ನಾಗರಾಜಯ್ಯ ಸಚಿವ ಎ.ಮಂಜು, ಶಾಸಕರಾದ ಸಿ.ಎನ್ .ಬಾಲಕೃಷ್ಣ, ಎ.ಎಂ.ಗೋಪಾಲಸ್ವಾಮಿ ಮತ್ತಿತರ ಗಣ್ಯರು ರಾಜ್ಯಪಾಲರ ಸುತ್ತ ನಿಂತು ಚಪ್ಪಾಲೆ ತಟ್ಟುತ್ತಾ ರಾಜ್ಯಪಾಲರ ನೃತ್ಯಕ್ಕೆ ಪ್ರೋತ್ಸಾಹ ನೀಡಿದರು.
click me!