
ಬೆಂಗಳೂರು(ಜು.07): ಕುಮಾರ ಸ್ವಾಮಿ ಅವರಿಗೆ ಸೂಟ್'ಕೇಸ್ ಸಂಸ್ಕೃತಿ ಇಷ್ಟ. ಬೇರೆ ಪಕ್ಷದಲ್ಲಿರುವವರನ್ನು ಸೂಟ್'ಕೇಸ್ ತೆಗೆದುಕೊಂಡು ಬೆಳಸುತ್ತಾರೆ. ನಿಷ್ಠಾವಂತರನ್ನು ತುಳಿಯುತ್ತಾರೆ. ಪ್ರಜ್ವಲ್ ರೇವಣ್ಣ ಹೇಳಿರುವುದು ಅಕ್ಷರಶಃ ಸತ್ಯ ಎಂದು ಜೆಡಿಎಸ್'ನಿಂದ ಅಮಾನತ್ತುಗೊಂಡ ಶಾಸಕ ಬಿ.ಝಡ್. ಜಮೀರ್ ಅಹಮದ್ ಖಾನ್ ಹೆಚ್'ಡಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರು ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಸಂಪೂರ್ಣ ಸತ್ಯ. ಹಲವಾರು ವರ್ಷಗಳ ಕಾಲ ನಿಷ್ಟೆಯಿಂದ ದುಡಿದ ನಮ್ಮಂಥವರನ್ನೇ ಪಕ್ಷದಿಂದ ಆಚೆ ಕಳಿಸಿದ್ದಾರೆ. ಮುಂದೆ ನನಗೆ ರಾಜಕೀಯವಾಗಿ ಎಲ್ಲಿ ನನಗೆ ಅಡ್ಡಗಾಲಾಗುತಾನೋ ಎಂಬ ಕಾರಣದಿಂದ ಸ್ವಂತ ಅಣ್ಣನ ಮಗನನ್ನೇ ತುಳಿಯುತ್ತಿದ್ದಾರೆ. ಪ್ರಜ್ವಲ್ ಬಗ್ಗೆ ನನಗೆ ಹಲವು ವರ್ಷಗಳಿಂದ ಗೊತ್ತು. ಪಕ್ಷದಲ್ಲಿ ಆತ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಇದನ್ನು ಕುಮಾರ ಸ್ವಾಮಿಯವರಿಗೆ ಸಹಿಸಲು ಆಗುತ್ತಿಲ್ಲ' ಎಂದು ಕುಮಾರಸ್ವಾಮಿ ಅವರ ಬಗೆಗಿನ ಕೋಪ ಹೊರಹಾಕಿದರು.
ದೇವೇಗೌಡರ ಬಗ್ಗೆ ಗೌರವವಿದೆ
ದೇವೇಗೌಡರ ಬಗ್ಗೆ ನಮಗೆ ಈಗಲೂ ಗೌರವವಿದೆ. ಅವರ ಕಾಲದಲ್ಲಿ ಸೂಟ್'ಕೇಸ್ ಸಂಸ್ಕೃತಿಯಿರಲಿಲ್ಲ. ಕುಮಾರ'ಸ್ವಾಮಿಯವರು ಸೂಟ್'ಕೇಸ್ ಸಂಸ್ಕೃತಿಯ ಮೇಲಿನ ವ್ಯಾಮೋಹದಿಂದ ನಿಷ್ಠಾವಂತರನ್ನು ಕಡೆಗಣಿಸಿ ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಿ ನಮ್ಮಂಥವರನ್ನು ಹೊರ ಹಾಕಿದ್ದಾರೆ. ಮೂರು ಬಾರಿ ಶಾಸಕರಾದ ರೇವಣ್ಣ ಸಿಎಂ ಆಗಲಿಲ್ಲ. ಒಂದು ಬಾರಿ ಶಾಸಕರಾದ ಹೆಚ್'ಡಿಕೆ ಮುಖ್ಯಮಂತ್ರಿ ಆಗುತ್ತಾರೆಂದು ಯಾರೊಬ್ಬರು ನಿರೀಕ್ಷಿಸಿರಲಿಲ್ಲ. ನಾವೆಲ್ಲ ಬೆಂಬಲ ವ್ಯಕ್ತಪಡಿಸಿದ ಕಾರಣದಿಂದ ಅವರು ಮುಖ್ಯಮಂತ್ರಿಯಾದರು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.