
ಬೆಂಗಳೂರು (ಮೇ. 11): ಇಂದು ಖ್ಯಾತ ಕ್ಲಾಸಿಕಲ್ ಡ್ಯಾನ್ಸರ್, ಪದ್ಮ ಭೂಷಣ ವಿಜೇತೆ ಮೃಣಾಲಿನಿ ಸಾರಾಬಾಯಿ ಅವರ 100 ನೇ ಜನ್ಮದಿನವಾಗಿದ್ದು ಗೂಗಲ್ ಡೂಡಲ್ ಮೃಣಾಲಿನಿಯವರನ್ನು ಸ್ಮರಿಸಿಕೊಳ್ಳುವ ಮೂಲಕ ಗೌರವಿಸಿದೆ.
ದೆಹಲಿ ಮೂಲದ ಗ್ರಾಫಿಕ್ ಡಿಸೈನರ್ ಸುದೀಪ್ತಿ ತುಕೇರ್ ಮೃಣಾಲಿನಿ ಸಹಿ ಇರುವ ಕಲಾಕೃತಿಯನ್ನು ನಿರ್ಮಿಸಿ ಗೌರವಿಸಿದ್ದಾರೆ. ಇದನ್ನು ಮೃಣಾಲಿನಿ ದಂಪತಿ ಸ್ಥಾಪನೆ ಮಾಡಿರುವ ದರ್ಪಣ ಅಕಾಡೆಮಿ ಆಫ್ ಆರ್ಟ್ಸ್ ಆಡಿಟೋರಿಯಂನಲ್ಲಿ ಇಡಲಾಗಿದೆ. ವಿದ್ಯಾರ್ಥಿಗಳು ನೃತ್ಯ ಪ್ರದರ್ಶನದ ಮೂಲಕ ನೆಚ್ಚಿನ ಗುರುಗಳಿಗೆ ನಮನ ಸಲ್ಲಿಸಲಿದ್ದಾರೆ.
ಅಹ್ಮದಾಬಾದ್ ನಲ್ಲಿರುವ ಇವರ ನೃತ್ಯ ಶಾಲೆಯಲ್ಲಿ ಸಂಗೀತ, ನೃತ್ಯ, ನಾಟಕಗಳನ್ನು ಕಲಿಸಲಾಗುತ್ತದೆ. ಮೃಣಾಲಿನಿಯವರು ಸುಮಾರು 18 ಸಾವಿರ ವಿದ್ಯಾರ್ಥಿಗಳಿಗೆ ಭರತ ನಾಟ್ಯ, ಕಥಕ್ಕಳಿ ಕಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.