ಇತ್ತೀಚಿನ ದಿನಗಳಲ್ಲಿ ಭೂಮಿಯಲ್ಲಿ ಭಾರೀ ಪ್ರಮಾಣದಲ್ಲಿ ಅವಘಡಗಳು ಸಂಭವಿಸುತ್ತಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಕೆಲವು ಪ್ರದೇಶಗಳು ಸಂಪೂರ್ಣ ಮುಳುಗಲಿವೆ ಎಂದು ಅಧ್ಯಯನವೊಂದು ತಿಳಿಸಿದೆ.
ವಾಷಿಂಗ್ಟನ್: ಒಂದು ವೇಳೆ ವಾತಾವರಣಕ್ಕೆ ಸೇರುತ್ತಿರುವ ಹಸಿರುಮನೆ ಅನಿಲದ ಪ್ರಮಾಣ ಇದೇ ಪ್ರಮಾಣದಲ್ಲಿ ಮುಂದುವರೆದರೆ, 2100ನೇ ಇಸವಿಯ ವೇಳೆಗೆ ಜಾಗತಿಕ ಸಮುದ್ರ ಮಟ್ಟ 8 ಅಡಿಯಷ್ಟುಹಾಗೂ 2300ರ ವೇಳೆಗೆ 50 ಅಡಿಗಳಷ್ಟುಏರಿಕೆಯಾಗಲಿದೆ.
ಕರಾವಳಿ ಪ್ರದೇಶದ ಜನರು ಹಾಗೂ ವಿಶ್ವದ ಪರಿಸರ ವ್ಯವಸ್ಥೆ ಭಾರೀ ಅಪಾಯಕ್ಕೆ ಸಿಲುಕಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.
undefined
ಈ ಶತಮಾನದ ಆರಂಭದಿಂದಲೂ ಜಾಗತಿಕ ಸಮುದ್ರ ಮಟ್ಟ0.2 ಅಡಿಯಷ್ಟುಏರಿಕೆಯಾಗಿದೆ ಎಂದು ಅಮೆರಿಕದ ರೊಟ್ಜರ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ಹಸಿರು ಮನೆ ಅನಿಲದ ಹೊರಸೂಸುವಿಕೆಯ ಪ್ರಮಾಣ ಸಾಮಾನ್ಯವಾಗಿದ್ದರೂ 2100ನೇ ಇಸವಿಯ ವೇಳೆಗೆ ಸಮುದ್ರ ಮಟ್ಟ1.4 ಅಡಿಯಿಂದ 2.8 ಅಡಿಗಳಷ್ಟುಏರಿಕೆಯಾಗಲಿದೆ.
2150ನೇ ಇಸವಿಯ ವೇಳೆಗೆ ಸಮುದ್ರ ಮಟ್ಟ2.8 ರಿಂದ 5.4 ಅಡಿಗಳಷ್ಟುಹಾಗೂ 2300ನೇ ಇಸವಿಯ ವೇಳೆಗೆ 6ರಿಂದ 14 ಅಡಿಗಷ್ಟುಏರಿಕೆಯಾಗಲಿದೆ. ಸಮುದ್ರ ಮಟ್ಟಕ್ಕಿಂತ 33 ಅಡಿಗಳಿಗಿಂತ ಕಡಿಮೆ ಎತ್ತರದಲ್ಲಿ ವಾಸಿಸುತ್ತಿರುವ ಜನರು ಅಪಾಯಕ್ಕೆ ಸಿಲುಕಲಿದ್ದಾರೆ ಎಂದು ವರದಿ ತಿಳಿಸಿದೆ.