ಭೀಕರ ಭೂಕಂಪ : 7000 ಸಾವು

By Web DeskFirst Published Oct 8, 2018, 8:54 AM IST
Highlights

ಭಾರೀ ಪ್ರಮಾಣದಲ್ಲಿ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಗೆ ತುತ್ತಾಗಿರುವ ಇಂಡೋನೇಷ್ಯಾದ ಪಲು ನಗರದ 5000 ಜನ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಇವರೆಲ್ಲಾ ಭೂಕಂಪ ಮತ್ತು ಸುನಾಮಿಯಲ್ಲಿ ಸಾವಿಗೀಡಾಗಿರುವ ಆತಂಕ ಎದುರಾಗಿದೆ. 

ಜಕಾರ್ತ: ಭೀಕರ ಭೂಕಂಪ ಹಾಗೂ ಸುನಾಮಿಗೆ ತುತ್ತಾಗಿದ್ದ ಇಂಡೋನೇಷ್ಯಾದ ಪಲು ನಗರದ 5000 ಜನ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಇವರೆಲ್ಲಾ ಭೂಕಂಪ ಮತ್ತು ಸುನಾಮಿಯಲ್ಲಿ ಸಾವಿಗೀಡಾಗಿರುವ ಆತಂಕ ಎದುರಾಗಿದೆ. ಪ್ರಕೃತಿ ವಿಕೋಪದಲ್ಲಿ ಪೆಟೊಬೊ ಹಾಗೂ ಬಾಲಾರೊವಾ ಪ್ರದೇಶಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ. 

ಇದುವರೆಗೆ 1763 ಮೃತ ದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ದುರಂತ ನಡೆದು ಒಂದು ವಾರ ಕಳೆದರೂ 5000 ಮಂದಿ ಇದುವರೆಗೂ ಪತ್ತೆಯಾಗಿಲ್ಲ.

ಗುಡ್ಡದ ಮಣ್ಣು ಹಾಗೂ ಅವಶೇಷಗಳ ಅಡಿಯಲ್ಲಿ ಬಹುತೇಕ ಪ್ರದೇಶಗಳು ಹೂತುಹೋಗಿದ್ದು, ಸಾವು ನೋವಿನ ಸಂಖ್ಯೆಯನ್ನು ನಿಖರವಾಗಿ ಲೆಕ್ಕಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!