ಗೀತಾ ಶಿವರಾಜ್'ಕುಮಾರ್ ಕಾಂಗ್ರಸ್'ಗೆ ಸೇರ್ಪಡೆ? ಕಾಂಗ್ರೆಸ್ ಅಭ್ಯರ್ಥಿ ಎಂದು ರಾಹುಲ್'ಗೆ ಪರಿಚಯಿಸಿದ ಡಿಕೆಶಿ

Published : Jun 13, 2017, 10:06 AM ISTUpdated : Apr 11, 2018, 12:49 PM IST
ಗೀತಾ ಶಿವರಾಜ್'ಕುಮಾರ್ ಕಾಂಗ್ರಸ್'ಗೆ ಸೇರ್ಪಡೆ? ಕಾಂಗ್ರೆಸ್ ಅಭ್ಯರ್ಥಿ ಎಂದು ರಾಹುಲ್'ಗೆ ಪರಿಚಯಿಸಿದ ಡಿಕೆಶಿ

ಸಾರಾಂಶ

ಸೋಮವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸದಾಶಿವನಗರದ ಡಾ. ರಾಜ್'ಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಪಾರ್ವತಮ್ಮ ರಾಜ್'ಕುಮಾರ್ ನಿಧನದಿಂದ ದುಃಖಗೊಂಡಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಇಂದನ ಸಚಿವ ಡಿ.ಕೆ ಶಿವಕುಮಾರ್ ಅವರು ರಾಹುಲ್ ಗಾಂಧಿಯವರಿಗೆ ಗೀತಾ ಅವರನ್ನು ಕಾಂಗ್ರೆಸ್ ನಾಯಕ ಬಂಗಾರಪ್ಪ ಅವರ ಪುತ್ರಿ ಎಂದು ಪರಿಚಯಿಸಿದ್ದಾರೆ.

ಬೆಂಗಳೂರು(ಜೂ.13): ಹ್ಯಾಟ್ರಿಕ್ ಸ್ಟಾರ್ ಶಿವರಾಜ್'ಕುಮಾರ್ ಹಾಗೂ ಪತ್ನಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್'ನಿಂದ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದ ಗೀತಾ ಶಿವರಾಜ್'ಕುಮಾರ್ ಕಾಂಗ್ರೆಸ್'ಗೆ ಸೇರ್ಪಡೆಯಾಗಲಿದ್ದಾರಾ?

ಈ ಮಾತನ್ನು ಪುಷ್ಟೀಕರಿಸುವ ಘಟನೆ ಸೋಮವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದಿದೆ. ಸೋಮವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸದಾಶಿವನಗರದ ಡಾ. ರಾಜ್'ಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಪಾರ್ವತಮ್ಮ ರಾಜ್'ಕುಮಾರ್ ನಿಧನದಿಂದ ದುಃಖಗೊಂಡಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಇಂದನ ಸಚಿವ ಡಿ.ಕೆ ಶಿವಕುಮಾರ್ ಅವರು ರಾಹುಲ್ ಗಾಂಧಿಯವರಿಗೆ ಗೀತಾ ಅವರನ್ನು ಕಾಂಗ್ರೆಸ್ ನಾಯಕ ಬಂಗಾರಪ್ಪ ಅವರ ಪುತ್ರಿ ಎಂದು ಪರಿಚಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರಿ, ವರನಟ ಡಾ. ರಾಜ್'ಕುಮಾರ್ ಅವರ ಹಿರಿಯ ಸೊಸೆ ಹಾಗೂ ನಟ ಶಿವರಾಜ್'ಕುಮಾರ್ ಅವರ ಪತ್ನಿ ಗೀತಾ ಅವರನ್ನು ರಾಹುಲ್ ಅವರಿಗೆ ಪರಿಚಯಿಸಿದ ಶಿವಕುಮಾರ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಗೀತಾ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದರು ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಜತೆಗೆ, ಮುಂದಿನ ಚುನಾವಣೆಯಲ್ಲಿ ಗೀತಾ ಶಿವರಾಜ್'ಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದ್ದಾರೆ. ಈ ಮಾತಿಗೆ ಗೀತಾ ಶಿವರಾಜ್'ಕುಮಾರ್ ಹಾಗೂ ಅವರ ಕುಟುಂಬಸ್ಥರ್ಯಾರೂ ಪ್ರತಿಯಾಗಿ ಮಾತನಾಡಿಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಸಮ್ಮುಖದಲ್ಲೇ ಇಂತಹ ಹೇಳಿಕೆ ನೀಡಿರುವುದು ಹಾಗೂ ಇದಕ್ಕೆ ಕಾಂಗ್ರೆಸ್ ನಾಯಕರು ಹಾಗೂ ಗೀತಾ ಅವರು ಮೌನ ಸಮ್ಮತಿ ನೀಡಿದಂತೆ ವರ್ತಿಸಿರುವುದು ಕುತೂಹಲಕಾರಿಯಾಗಿದೆ.

2014ರ ಲೀಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್'ಕುಮಾರ್ 2.40 ಲಕ್ಷ ಮತಗಳನ್ನು ಗಳಿಸಿದ್ದರು. ಈ ಕ್ಷೇರತ್ರದಲ್ಲಿ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ 6.06 ಲಕ್ಷ ಮತಗಳನ್ನು ಪಡೆದು ಜಯಗಳಿಸಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಬಂಗಾರಪ್ಪ ಕುಟುಂಬಕ್ಕೆ ಈಗಲೂ ಮಹತ್ವವಿದೆ. ಇದುವರೆಗೂ ಕಾಂಗ್ರೆಸ್'ನಲ್ಲಿದ್ದ ಬಂಗಾರಪ್ಪ ಅವರ ಹಿರಿಯ ಪುತ್ರ ಕುಮಾರ ಬಂಗಾರಪ್ಪ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದಾದ ಬಳಿಕ ಬಂಗಾರಪ್ಪ ಅವರ ಕಿಉರಿಯ ಪುತ್ರ ಹಾಗೂ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಕೂಡಾ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಗೀತಾ ಅವರು ರಾಜಕೀಯಕ್ಕೆ ಬರುವಲ್ಲಿ ಮಧು ಬಂಗಾರಪ್ಪ ಅವರ ಒತ್ತಾಸೆಯೂ ಇದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯದಲ್ಲಿ ಸೆಮಿಕಂಡಕ್ಟರ್ ಕಂಪನಿಗೆ 100 ಎಕರೆ ಜಾಗ; ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ ಪತ್ರ
ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು