
'ಗ್ರ್ಯಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್' (ಗೇಟ್) ಪರೀಕ್ಷೆಯ ರಸಾಯನ ಶಾಸ್ತ್ರ ವಿಷಯದಲ್ಲಿ ರೈತನ ಮಗನೊಬ್ಬ ದೇಶಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾನೆ.
ಲಖನೌ ಮೂಲದ ಪ್ರಶಾಂತ್ ಗುಪ್ತಾ ಎಂಬ ವಿದ್ಯಾರ್ಥಿ ಶೇ.71.67 ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾನೆ. ಹತ್ತರೊಳಗೆ ಯಾವುದಾದರೂ ಒಂದು ರ್‍ಯಾಂಕ್ ಪಡೆಯಬೇಕೆಂಬ ಗುರಿ ಹೊಂದಿದ್ದೆ ಆದರೆ ಟಾಪ್ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ' ರಾಸಾಯನ ಶಾಸ್ತ್ರ ವಿಷಯದಲ್ಲಿ ಪುಸ್ತಕಗಳ ಸಂಖ್ಯೆ ತೀರ ಕಡಿಮೆಯಿದೆ ಹಾಗಾಗಿ ಪುಸ್ತಕ ಬರೆಯುವ ಆಸಕ್ತಿಯಿದೆ ಎಂದು ತಿಳಿಸಿದ್ದಾನೆ.
ಉತ್ತರಪ್ರದೇಶ ಬೋರ್ಡ್ ಶಾಲೆಯಲ್ಲಿ ಕಲಿತ ಪ್ರಶಾಂತ್ 2015ರಲ್ಲಿ ಬಿಎಚ್‍ಯುನಿಂದ ಪದವಿ ಮತ್ತು 2017ರಲ್ಲಿ ಐಐಟಿ ದೆಹಲಿಯಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.