ಭಾರತದಲ್ಲಿ ನಿತ್ಯ ಧೂಮಪಾನ ಮಾಡುವ ಮಕ್ಕಳ ಸಂಖ್ಯೆ, ಕಂಪನಿಗಳಿಗೆ ಬರುವ ವರಮಾನ ಎಷ್ಟು ಗೊತ್ತೆ? ಬೆಚ್ಚಿ ಬೀಳಿಸಿದೆ ಸುದ್ದಿ

By Suvarna Web DeskFirst Published Mar 17, 2018, 6:59 PM IST
Highlights

ಅಮೆರಿಕಾ ಮೂಲಕ ಸಂಸ್ಥೆಯೊಂದು ತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ 10ರಿಂದ 14 ವರ್ಷದೊಳಗಿನ ಮಕ್ಕಳು 6.25 ಲಕ್ಷ ಮಂದಿ ಧೂಮಪಾನ ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ.

ನವದೆಹಲಿ(ಮಾ.17): ಧೂಮಪಾನವನ್ನು ಶಾಶ್ವತವಾಗಿ ನಿಗ್ರಹಿಸಲು ಭಾರತ ಸರ್ಕಾರ ಏನೆಲ್ಲ ಕಸರತ್ತು ನಡೆಸುತ್ತಿದೆ. ಆದರೂ ಈ ಚಟವನ್ನು ಬಿಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಅಮೆರಿಕಾ ಮೂಲಕ ಸಂಸ್ಥೆಯೊಂದು ತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ 10ರಿಂದ 14 ವರ್ಷದೊಳಗಿನ ಮಕ್ಕಳು 6.25 ಲಕ್ಷ ಮಂದಿ ಧೂಮಪಾನ ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ. ಪ್ರತಿವರ್ಷ ಭಾರತದಲ್ಲಿ 9.32,600 ಕ್ಕೂ ಹೆಚ್ಚು ಮಂದಿ  ತಂಬಾಕು ಸಂಬಂಧಿತ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ.

ಪ್ರತಿ ವಾರ 17,887 ಮಂದಿ ಮರಣ ಹೊಂದುತ್ತಿದ್ದಾರೆ. 1.03 ಕೋಟಿ ಮಂದಿ 15 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಮಕ್ಕಳು ಧೂಮಪಾನ ಮಾಡುತ್ತಿದ್ದಾರೆ. 4,29,500 ಬಾಲಕರು ಹಾಗೂ 1.95,500 ಬಾಲಕಿಯರು ಧೂಮಪಾನಿಗಳಾಗಿದ್ದಾರೆ.ವರದಿಯ ಪ್ರಕಾರ 2016ರಲ್ಲಿ 8200 ಕೋಟಿ  ಸಿಗರೇಟ್'ಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂ. ವರಮಾನ ಬರುತ್ತಿದೆ. ಇದು ಒಟ್ಟು ರಾಷ್ಟ್ರೀಯ ಆದಾಯದ ಶೇ.15ರಷ್ಟಕ್ಕೆ ಸಮವಾಗಿದೆ' ಎನ್ನಲಾಗಿದೆ.

click me!