
ನವದೆಹಲಿ: ಚಾಲನಾ ಪರವಾನಿಗೆ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಪಡಿಸಲು ಕೇಂದ್ರ ಸಾರಿಗೆ ಅಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.
ಭಾರತದಲ್ಲಿ ಆರ್’ಟಿಓ ಮೂಲಕ ನೀಡಲಾಗಿರುವ ಶೇ.30 ಲೈಸೆನ್ಸ್’ಗಳು ಬೋಗಸ್ ಆಗಿವೆ. ಆದುದರಿಂದ ಭ್ರಷ್ಟಾಚಾರ-ಮುಕ್ತ ವ್ಯವಸ್ಥೆಯ ಅಗತ್ಯವಿದೆ. ದೇಶಾದ್ಯಂತ 2000 ಚಾಲನಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಕಂಪ್ಯೂಟರಿಕೃತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ 3 ದಿನಗಳಲ್ಲಿ ಲೈಸೆನ್ಸ್ ಸಿಗುವುದು, ಎಂದು ಎಎನ್’ಐಗೆ ತಿಳಿಸಿದ್ದಾರೆ.
ಜೊತೆಗೆ, ಸಾರಿಗೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲಾಗುವಂತಹ ವ್ಯವಸ್ಥೆಯನ್ನು ನಾವು ರೂಪಿಸಬಯಸುತ್ತೇವೆ. ಯಾರಾದರೂ ನಿಯಮ ಉಲ್ಲಂಘಿಸಿದರೆ, ತಕ್ಷಣ ದಂಡದ ಚಲನ್ ಅವರ ಮನೆಗೆ ತಲುಪುವಂತಾಗಬೇಕು, ಎಂದು ಗಡ್ಕರಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.