2018ಕ್ಕೆ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸ್ತಾರೆ?

Published : Apr 21, 2017, 06:02 AM ISTUpdated : Apr 11, 2018, 12:47 PM IST
2018ಕ್ಕೆ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸ್ತಾರೆ?

ಸಾರಾಂಶ

ಕಾಂಗ್ರೆಸ್‌ ವಲಯದಲ್ಲಿ ಇಂತಹದೊಂದು ಚರ್ಚೆ ಆರಂಭವಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾ​ವಣೆ ಗೆಲುವಿನ ನಂತರ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್‌ ಭರ್ಜರಿ ಸಾಧನೆ ಮಾಡಲಿದೆ ಎಂಬ ನಿರೀಕ್ಷೆ ಹೊಂದಿರುವ ಸಿದ್ದರಾಮಯ್ಯ, ಮುಂದಿನ ಅವಧಿಗೂ ಸಿಎಂ ಆಗುವ ಅಭಿಲಾಷೆ ಹೊಂದಿ​ರುವುದು ಸ್ಪಷ್ಟ. ಹೀಗಾಗಿ ಅವರು ಕೆಲವೇ ಸಾವಿರ ಮತಗಳ ಅಂತರದಿಂದ ಗೆಲುವು ನೀಡಿದ ವರುಣಾ ಕ್ಷೇತ್ರಕ್ಕಿಂತ ಸುರಕ್ಷಿತ ಅರ್ಥಾತ್‌ ಕುರುಬರು ಹೆಚ್ಚಿರುವ ಕ್ಷೇತ್ರಗಳತ್ತ ವಲಸೆ ಹೋಗುವ ಬಗ್ಗೆ ಗುಸು ಗುಸು ಕೇಳಿ ಬಂದಿದೆ.

ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗುವ ಒಳ ತುಡಿತ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಮೈಸೂರು ಜಿಲ್ಲೆಯಲ್ಲೇ ಇರುತ್ತಾರೋ ಅಥವಾ ಸುರಕ್ಷಿತ ತಾಣದ ಹುಡುಕಾಟ​ದಲ್ಲಿ ರಾಯಚೂರು ಅಥವಾ ಕೊಪ್ಪಳಕ್ಕೆ ವಲಸೆ ಹೋಗುತ್ತಾರೋ?

ಕಾಂಗ್ರೆಸ್‌ ವಲಯದಲ್ಲಿ ಇಂತಹದೊಂದು ಚರ್ಚೆ ಆರಂಭವಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾ​ವಣೆ ಗೆಲುವಿನ ನಂತರ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್‌ ಭರ್ಜರಿ ಸಾಧನೆ ಮಾಡಲಿದೆ ಎಂಬ ನಿರೀಕ್ಷೆ ಹೊಂದಿರುವ ಸಿದ್ದರಾಮಯ್ಯ, ಮುಂದಿನ ಅವಧಿಗೂ ಸಿಎಂ ಆಗುವ ಅಭಿಲಾಷೆ ಹೊಂದಿ​ರುವುದು ಸ್ಪಷ್ಟ. ಹೀಗಾಗಿ ಅವರು ಕೆಲವೇ ಸಾವಿರ ಮತಗಳ ಅಂತರದಿಂದ ಗೆಲುವು ನೀಡಿದ ವರುಣಾ ಕ್ಷೇತ್ರಕ್ಕಿಂತ ಸುರಕ್ಷಿತ ಅರ್ಥಾತ್‌ ಕುರುಬರು ಹೆಚ್ಚಿರುವ ಕ್ಷೇತ್ರಗಳತ್ತ ವಲಸೆ ಹೋಗುವ ಬಗ್ಗೆ ಗುಸು ಗುಸು ಕೇಳಿ ಬಂದಿದೆ.

ಈ ಪೈಕಿ ರಾಯಚೂರು ಹಾಗೂ ಕೊಪ್ಪಳ ಕ್ಷೇತ್ರಗಳ ಸ್ಥಳೀಯ ನಾಯಕರು ಅವರಿಗೆ ತಮ್ಮ ಕ್ಷೇತ್ರಕ್ಕೆ ಬಂದು ಸ್ಪರ್ಧಿಸುವಂತೆ ಕೋರಿದ್ದಾರೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಅವರು ಚಿಂತನೆ ಹೊಂದಿದ್ದಾರೆ ಎಂಬ ವದಂತಿಗಳಿವೆ.
ಆದರೆ, ಇದನ್ನು ಸ್ಪಷ್ಟವಾಗಿ ಅಲ್ಲಗಳೆಯುವ ಸಿಎಂ ಆಪ್ತ ವಲಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆ ತ್ಯಜಿಸುವುದಿಲ್ಲ. ಅವರು ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿ ರಾಯಚೂರು ಹಾಗೂ ಕೊಪ್ಪಳಕ್ಕೆ ಹೋಗುತ್ತಾರೆ ಎಂದು ಪ್ರತಿ ಚುನಾವಣೆ ಬಂದಾಗಲೂ ಹೇಳಲಾಗುತ್ತದೆ.

ಅಲ್ಲಿಗೆ ಬರುವಂತೆ ಅವರಿಗೆ ಆಹ್ವಾನವೂ ಇರುತ್ತದೆ. ಆದರೆ, ಯಾವ ಕಾರಣಕ್ಕೂ ಮೈಸೂರು ಜಿಲ್ಲೆಯಿಂದ ಹೊರಗೆ ಹೋಗುವು ದಿಲ್ಲ. ಜಿಲ್ಲೆಯಲ್ಲೇ ಸ್ಪರ್ಧಿಸುತ್ತಾರೆ ಎಂದು ಖಡಾಖಂಡಿತವಾಗಿ ಹೇಳುತ್ತದೆ.
ಆದರೆ, ಕಳೆದ ಬಾರಿ ಸ್ಪರ್ಧಿಸಿದ್ದ ವರುಣಾ ಕ್ಷೇತ್ರದಲ್ಲಿ ಸಿಎಂ ಸ್ಪರ್ಧಿಸುವರೇ ಎಂಬುದು ಖಚಿತವಿಲ್ಲ. ಬಹುತೇಕ ಅವರು ವರುಣಾ ಕ್ಷೇತ್ರದ ಬದಲಾಗಿ ಚಾಮುಂಡೇಶ್ವರಿ ಕ್ಷೇತ್ರ ದಿಂದ ಈ ಬಾರಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

2018ರ ಸಾರ್ವತ್ರಿಕ ಚುನಾವಣೆಯಲ್ಲಿ ವರುಣಾ ಅಥವಾ ಚಾಮುಂಡೇಶ್ವರಿ ಕ್ಷೇತ್ರಗಳ ಪೈಕಿ ಒಂದರಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿ ದ್ದಾರೆ. ಈ ಬಗ್ಗೆ ಸಂಶಯವೇ ಬೇಡ. ಅನ್ಯ ಕ್ಷೇತ್ರಗಳಿಗೆ ಅವರು ವಲಸೆ ಹೋಗಲಿದ್ದಾರೆ ಎಂಬುದು ಕೇವಲ ವದಂತಿ ಎಂದು ಸಿಎಂ ಆಪ್ತ ಮೂಲಗಳು ಸ್ಪಷ್ಟಪಡಿಸುತ್ತವೆ. (ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?