
ಬೆಂಗಳೂರು(ಎ.22): ಯಾರ ಕೈಗೂ ಸಿಗದ ನಾಗ ಅಲಿಯಾಸ್ ರೌಡಿ ನಾಗ ಸುವರ್ಣನ್ಯೂಸ್'ಗೆ ಸಿಕ್ಕಿದ್ದಾನೆ. ಶ್ರೀರಾಮ್ಪುರದ ನಾಗನ ಮನೆ ಮೇಲೆ ದಾಳಿ ಮಾಡಿದ ಪೊಲೀಸರು, 15 ಕೋಟಿ ಹಳೇ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ನಾಗ ಮಾತ್ರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಸುವರ್ಣ ನ್ಯೂಸ್ ಪ್ರತಿನಿಧಿ ಜೊತೆ ಮಾತನಾಡಿರುವ ರೌಡಿ ನಾಗ ತನ್ನ ಮನೆಯಲ್ಲಿ ಸಿಕ್ಕ ಹಣ ಪೊಲೀಸರಿಗೇ ಸೇರಿದ್ದು ಎಂದು ಹೇಳಿದ್ದಾನೆ.
ದಿನೇಶ್ ಗುಂಡೂರಾವ್ ವಿರುದ್ಧ ರೌಡಿ ನಾಗ ಮಾಡಿದ ಆರೋಪ
ಈ ವಿಡಿಯೋದಲ್ಲಿ ನಾಗ ರಾಜಕಾರಣಿಗಳು ಹಾಗೂ ಪೊಲೀಸರ ಹೆಸರನ್ನೂ ಬಿಚ್ಚಿಟ್ಟಿದ್ದು, ಪ್ರಮುಖವಾಗಿ ದಿನೇಶ್ ಗುಂಡೂರಾವ್ ನನ್ನ ಮೇಲೆ ರೌಡಿ ಶೀಟರ್ ಓಪನ್ ಮಾಡಿಸಿದ್ದರು ಹಾಗೂ ಸಂಸದ ಪಿ.ಸಿ. ಮೋಹನ್ ನನ್ನ ಮೇಲೆ ರೌಡಿ ಶೀಟರ್ ಓಪನ್ ಮಾಡಿಸಿದ್ದರು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ನನ್ನ ಮೇಲೆ 8 ಬಾರಿ ರೌಡಿ ಶೀಟರ್ ಹಾಕಿಸಿದ್ದರು ಎಂದು ಆರೋಪಿಸಿದ್ದಾರೆ.
ಸಚಿವರ ಪ್ರತಿಕ್ರಿಯೆ
ಆದರೆ ನಾಗನ ಈ ಆರೋಪವನ್ನು ತಳ್ಳಿ ಹಾಕಿರುವ ಸಚಿವ ಗುಂಡೂರಾವ್ 'ನನಗೂ ರೌಡಿ ನಾಗನಿಗೂ ಯಾವುದೇ ಸಂಬಂಧ ಇಲ್ಲ, ಆಧಾರ ರಹಿತ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿ. ಪ್ರಕರಣವನ್ನು ದಾರಿ ತಪ್ಪಿಸಲು ನಾಗ ಇಂತಹ ಹೇಳಿಕೆ ನೀಡಿದ್ದಾನೆ. ನಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿಸುವುದಕ್ಕೆ ನಾನೇ ವಿರೋಧಿಸಿದ್ದೆ' ಎಂದಿದ್ದಾರೆ
ಪೊಲೀಸರ ಹೆಸರೂ ಉಲ್ಲೇಖಿಸಿದ ನಾಗ
ಇನ್ನು ತನ್ನ ಬಳಿ ಪತ್ತೆಯಾದ ಹಣದ ಬಗ್ಗೆ ಮಾತೆತ್ತಿರುವ ನಾಗ ಹೆಣ್ಣೂರು ಪೊಲೀಸ್ ಇನ್ಸ್ಪೆಕ್ಟರ್ ಮತ್ತು ನಾಲ್ವರು ಐಪಿಸ್ ಅಧಿಕಾರಿಗಳಿಗೆ ಆ ಹಣ ಸೇರಿತ್ತು ಎಂದು ನಾಗ ಹೇಳಿಕೊಂಡಿದ್ದಾನೆ. ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡಿ ಎಂದು ಪೊಲೀಸರು ಎರಡು ತಿಂಗಳಿಂದ ನನ್ನ ಬೆನ್ನು ಬಿದ್ದಿದ್ದರು ಎಂದು ನಾಗ ಆರೋಪಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.