
ಫಿಲಿಪ್ಪೀನ್ಸ್(ಜ.31): ಫ್ರಾನ್ಸ್‌ನ ಸಣ್ಣ ಪಟ್ಟಣವೊಂದರ 23 ವರ್ಷದ ಚೆಲುವೆ ಐರಿಸ್ ಮಿಟ್ಟೆನೇರ್ ಅವರು ಈ ಬಾರಿಯ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುಶ್ಮಿತಾ ಸೇನ್ ತಂಡದಿಂದ ಆಯ್ಕೆಯಾಗಿದ್ದ ಬೆಂಗಳೂರಿನ ರೋಶ್ಮಿತಾ ಹರಿಮೂರ್ತಿ ಅಂತಿಮ 13ರ ಸುತ್ತು ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನಡೆದ ಸ್ಪರ್ಧೆಯಲ್ಲಿ ಐರಿಸ್ ಅವರು ಜಯಭೇರಿ ಬಾರಿಸುವ ಮೂಲಕ 64 ವರ್ಷಗಳ ಬಳಿಕ ಫ್ರಾನ್ಸ್‌ಗೆ ವಿಶ್ವ ಸುಂದರಿ ಕಿರೀಟ ತಂದುಕೊಟ್ಟರು.
2010ರ ಹೈಟಿ ಭೂಕಂಪದ ವೇಳೆ ಬದುಕುಳಿದ 25 ವರ್ಷದ ಸುಂದರಿ ರಖೇಲ್ ಪೆಲಿಸ್ಸೀರ್ ಅವರು ಮೊದಲ ರನ್ನರ್‌ಅಪ್ ಹಾಗೂ ಕೊಲಂಬಿಯಾದ 23 ವರ್ಷದ ಆ್ಯಂಡ್ರಿಯಾ ತೋವರ್ ಎರಡನೇ ರನ್ನರ್‌ಅಪ್ ಪ್ರಶಸ್ತಿಗೆ ಭಾಜನರಾದರು. ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರು ತೀರ್ಪುಗಾರರ ಪೈಕಿ ಒಬ್ಬರಾಗಿ ಕಾರ್ಯನಿರ್ವಹಿಸಿದರು.
ಉತ್ತರ ಫ್ರಾನ್ಸ್‌ನ ಲಿಲ್ಲೆ ಎಂಬ ಸಣ್ಣ ಪಟ್ಟಣದವರಾಗಿರುವ ಐರಿಸ್, ವಿಶ್ವ ಸುಂದರಿ ಗೆಲುವಿನ ವೇದಿಕೆಯನ್ನು ದಂತ ಹಾಗೂ ಬಾಯಿ ಸ್ವಚ್ಛತೆ ಅಭಿಯಾನಕ್ಕೆ ಬಳಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.