
ಮಂಡ್ಯ(ಜ.31):‘ಹಿಂದೆ ಇಂದಿರಾ ಗಾಂಧಿ ಹತ್ಯೆ ಬಳಿಕ ಅನೇಕರು ಕಾಂಗ್ರೆಸ್ ನಿರ್ನಾಮ ಆಯಿತು ಎಂದರು. ಆದರೆ, ಪಕ್ಷ ಬೆಳೆದು ನಿಂತಿಲ್ವೇ? ಪಕ್ಷ ಕಟ್ಟುವ ಹೊಣೆಯನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಕೃಷ್ಣ ಬೆಂಬಲಿಗರಿಗೆ ಬೇಜಾರು ಆಗಿದೆ. ಕೃಷ್ಣ ಬದಲಿಗೆ ಬೇರೆ ನಾಯಕರು ಬರ್ತಾರೆ ಕಾದು ನೋಡಿ'
ಎಸ್.ಎಂ. ಕೃಷ್ಣ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಕುರಿತು ಮಾಜಿ ಸಚಿವ, ಶಾಸಕ ಅಂಬರೀಷ್ ನೀಡಿದ ಪ್ರತಿಕ್ರಿಯೆ ಇದು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮ ಗೌರವಕ್ಕೆ ಧಕ್ಕೆ ಬಂದಿದ್ದರಿಂದ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾಗಿ ಕೃಷ್ಣ ತಿಳಿಸಿದ್ದಾರೆ. ಸ್ವತಃ ಸೋನಿಯಾಗಾಂಧಿ ಅವರೇ ಮನವೊಲಿಸಿದರೂ ಬದಲಾಗದ ಅವರು, ನನ್ನ ಮಾತು ಕೇಳುತ್ತಾರೆಯೇ ಎಂದು ಅಂಬರೀಷ್ ಪ್ರಶ್ನಿಸಿದ್ದಾರೆ.
ಕೃಷ್ಣ ಸೀನಿಯರ್ ಲೀಡರ್. ನಮಗೆಲ್ಲ ನಾಯಕರೂ ಆಗಿದ್ದವರು. ಪಕ್ಷಕ್ಕೆ ಸಾಕಷ್ಟುಕೆಲಸ ಮಾಡಿದ್ದು, ಪಕ್ಷವೂ ಅವರಿಗೆ ಸಾಕಷ್ಟುನೀಡಿದೆ. ಆದರೂ, ‘ಗೌರ ವಕ್ಕೆ ಧಕ್ಕೆಯಾಗಿದೆ‘ ಎಂಬ ಮಾತನ್ನು ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ವಿಶ್ಲೇಷಿಸ ಬೇಕು. ಕಾಂಗ್ರೆಸ್‌ನಲ್ಲಿ ಒಕ್ಕಲಿಗ ನಾಯಕ ರನ್ನು ಕಡೆಗೆಣಿಸಲಾಗುತ್ತಿದೆ ಎನ್ನುವುದು ಒಪ್ಪುವ ಮಾತಲ್ಲ ಎಂದರು. ಕೃಷ್ಣ ಅವರನ್ನು ಸದ್ಯ ಭೇಟಿ ಮಾಡುವುದಿಲ್ಲ. ಮುಂದೆ ಸಂದರ್ಭಗಳು ಹೇಗೆ ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಭೇಟಿ ಮಾಡಿ ಚರ್ಚಿಸೋಣ. ನನ್ನ ರಾಜ ಕೀಯ ನಡೆ ಏನೆಂಬ ಬಗ್ಗೆ ಕುತೂಹಲ ಇದೆ. ಈಗಲೇ ಏನೂ ಹೇಳುವುದಿಲ್ಲ. ನನಗೂ ಜನ ಇದ್ದಾರೆ. ಜನಗಳ ಜೊತೆ ಇರುತ್ತೇನೆ. ಹೀಗಾಗಿ, ಅಧಿಕಾರವಿಲ್ಲ ಎಂದು ಬೇಜಾರು ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.