
ಬೆಂಗಳೂರು(ಡಿ.16): ರಾಜ್ಯ ಹೆದ್ದಾರಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಎಸ್.ಸಿ.ಜಯಚಂದ್ರ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಅವರನ್ನು ರಾಜ್ಯ ಹೆದ್ದಾರಿ ಯೋಜನೆ ಮುಖ್ಯ ಯೋಜನಾಧಿಕಾರಿ ಹುದ್ದೆಗೆ ನೇಮಕ ಮಾಡಿರೋದ್ರಲ್ಲಿ ಲೋಪಗಳಿದ್ವು ಎಂಬ ಹೊಸ ಮಾಹಿತಿಯೊಂದು ಈಗ ಬೆಳಕಿಗೆ ಬಂದಿದೆ. ಆ ಹೊಸ ಮಾಹಿತಿಯಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ರಾಜ್ಯ ಹೆದ್ದಾರಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಹುದ್ದೆಗೆ ಎಸ್.ಸಿ.ಜಯಚಂದ್ರ ಅವರನ್ನು ನೇಮಕ ಮಾಡಿರೋ ಸರ್ಕಾರ ಲೋಪಗಳನ್ನು ಎಸಗಿರೋದು ಈಗ ಬೆಳಕಿಗೆ ಬಂದಿದೆ.
ಮುಖ್ಯ ಯೋಜನಾಧಿಕಾರಿ ಹುದ್ದೆಗೆ ಯಾರನ್ನು ನೇಮಿಸಬೇಕಿತ್ತು?
ಈ ಹುದ್ದೆಗೆ ಐಎಎಸ್ ಶ್ರೇಣಿ ಅಧಿಕಾರಿ ಅಥವಾ ಪ್ರಧಾನ ಇಂಜಿನಿಯರ್'ಗಳನ್ನು ನೇಮಿಸಬೇಕಿತ್ತು. ಆದರೆ ಮುಖ್ಯ ಇಂಜಿನಿಯರ್ ಹುದ್ದೆಗಷ್ಟೇ ಬಡ್ತಿ ಹೊಂದಿದ್ದ ಜಯಚಂದ್ರ ಅವರನ್ನು ನೇಮಿಸಲಾಗಿತ್ತು.
ಜಯಚಂದ್ರ ಅವರಿಗೆ ಸಿಕ್ಕಿದ್ದು 35ನೇ ರ್ಯಾಂಕ್ ಗಳಿಸಿದ್ದು 301 ಅಂಕಗಳು
ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ನೇರ ನೇಮಕಾತಿ ಮೂಲಕ 1992-93ರಲ್ಲಿ ಆಯ್ಕೆಯಾಗಿದ್ದ ಜಯಚಂದ್ರ ಅವರು, 301 ಅಂಕ ಗಳಿಸಿ 35ನೇ ರ್ಯಾಂಕ್‌ನಲ್ಲಿದ್ದರು. ನಿಯಮಾವಳಿಗಳ ಪ್ರಕಾರ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದ್ದ ಜೇಷ್ಠತಾ ಪಟ್ಟಿಯಲ್ಲಿನ 1ರಿಂದ 15ನೇ ಕ್ರಮಾಂಕದೊಳಗೆ ರ್ಯಾಂಕ್ ಪಡೆದಿರುವ ಇಂಜಿನಿಯರ್‌ಗಳನ್ನು ಮುಖ್ಯ ಯೋಜನಾಧಿಕಾರಿ ಹುದ್ದೆಗೆ ನೇಮಿಸಬೇಕಿತ್ತು.
ಲೋಕಾ ದಾಳಿ ನಡೆದಿದ್ದರೂ ಆಗಿದೆ ನೇಮಕಾತಿ: ವಿಚಾರಣೆಗೆ ಅನುಮತಿ ಕೊಡಲಿಲ್ಲ....ಮುಂಬಡ್ತಿ ಕೊಡುವುದನ್ನು ಮರೆಯಲಿಲ್ಲ
ಅಷ್ಟೇ ಅಲ್ಲ., 2008ರಲ್ಲಿ ಜಯಚಂದ್ರ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. 2012ರಲ್ಲಿ ಅಂತಿಮ ತನಿಖಾ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗಿತ್ತು. ದೋಷಾರೋಪ ಪಟ್ಟಿ ಸಲ್ಲಿಸಲು ಮತ್ತು ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸ್ ವಿಭಾಗ ಸರ್ಕಾರದ ಅನುಮತಿ ಕೋರಿತ್ತು. ಇಷ್ಟೆಲ್ಲಾ ಇದ್ದರೂ ಕಾಂಗ್ರೆಸ್ ಸರ್ಕಾರ 2013ರಲ್ಲಿ ರಾಜ್ಯ ಹೆದ್ದಾರಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಹುದ್ದೆಗೆ ಜಯಚಂದ್ರ ಅವರನ್ನೇ ನೇಮಿಸಿದ್ದು ಹಲವು ಸಂಶಯಗಳಿಗೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.