ನಾಟಿ ಮೇಟಿಯ ಮನೆ ಖಾಲಿ ಖಾಲಿ: ಪೇದೆ ಸುಭಾಷ್, ವಿಜಯಲಕ್ಷ್ಮೀ ನಾಪತ್ತೆ

By Suvarna Web DeskFirst Published Dec 16, 2016, 3:41 AM IST
Highlights

ಮಾಜಿ ಸಚಿವ ಮೇಟಿ ರಾಸಲೀಲೆ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಾಗಲಕೋಟೆಯಲ್ಲಿರುವ ಮೇಟಿ ಮನೆ ಖಾಲಿ ಖಾಲಿಯಾಗಿದೆ. ಪೇದೆ ಸುಭಾಷ್ , ಹಾಗೂ ವಿಜಯಲಕ್ಷ್ಮೀ ಇನ್ನೂ ಕೂಡ ಪತ್ತೆಯಾಗಿಲ್ಲ. ಈ ನಡುವೆ ಮೇಟಿ ರಾಸಲೀಲೆ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿವೆ.

ಬಾಗಲಕೋಟೆ(ಡಿ.16): ಮಾಜಿ ಸಚಿವ ಮೇಟಿ ರಾಸಲೀಲೆ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಾಗಲಕೋಟೆಯಲ್ಲಿರುವ ಮೇಟಿ ಮನೆ ಖಾಲಿ ಖಾಲಿಯಾಗಿದೆ. ಪೇದೆ ಸುಭಾಷ್ , ಹಾಗೂ ವಿಜಯಲಕ್ಷ್ಮೀ ಇನ್ನೂ ಕೂಡ ಪತ್ತೆಯಾಗಿಲ್ಲ. ಈ ನಡುವೆ ಮೇಟಿ ರಾಸಲೀಲೆ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿವೆ.

ರಾಸಲೀಲೆ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ  ರಾಜೀನಾಮೆ ನೀಡಿದ ಬಳಿಕ ಬಾಗಲಕೋಟೆಯ ನವನಗರದಲ್ಲಿರುವ ಹೆಚ್ ವೈ ಮೇಟಿ ಮನೆಗೆ ಬೀಗ ಬಿದ್ದಿದೆ.. ಅಲ್ಲೆಲ್ಲ ಬರೀ ಖಾಲಿ ಖಾಲಿ ಹೊಡೆಯುತ್ತಿದೆ. ಆದರೆ ಮನೆ ಮುಂದಿನ ಬೋರ್ಡ್ ಮಾತ್ರ ಹಾಗೇಯೇ ಇದೆ.

ಇತ್ತ  ಪ್ರಕರಣದಲ್ಲಿ ಕೇಳಿ ಬಂದಿರೋ ಸುಭಾಷ್​ ಮತ್ತು ವಿಜಯಲಕ್ಷ್ಮೀ ಸಿಡಿ ಬಿಡುಗಡೆ ಬಳಿಕ ನಾಪತ್ತೆಯಾದವರು ಇನ್ನು ಪತ್ತೆಯಾಗಿಲ್ಲ.. ಸುಭಾಷ್ ಮನೆಯಲ್ಲಿ ಅವರ ತಾಯಿ ಮತ್ತು ಪತ್ನಿ ಮಾತ್ರ ಇದ್ದಾರೆ. ಪೋಲಿಸ್ ಭದ್ರತೆ ಇದೆ.

ಮೇಟಿಯ ನಾಟಿ ಆಟಕ್ಕೆ ಜಿಲ್ಲೆಯಲ್ಲಿ ಆಕ್ರೋಶ: ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

ಮೇಟಿ ರಾಸಲೀಲೆ ಪ್ರಕರಣ ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು  ಬೀದಿಗಿಳಿದು ಮೇಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಪ್ರಕರಣದಿಂದ ಬೇಸತ್ತಿರೋ ಬಾಗಲಕೋಟೆ ಜನ್ರು ಇದೀಗ ನಾವೀಗ ತಲೆ ಎತ್ತಿ ಓಡಾಡದಂತಾಗಿದ್ದು, ಮೇಟಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಸಿಐಡಿ ಅಧಿಕಾರಿಗಳಿಂದ ವಿಚಾರಣೆ ಸಾಧ್ಯತೆ

ಇನ್ನು ಪ್ರಕರಣವನ್ನ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿರುವುದರಿಂದ ಯಾವುದೇ ಕ್ಷಣದಲ್ಲಾದರೂ ಅಧಿಕಾರಿಗಳು ಬಾಗಲಕೋಟೆಗೆ ಆಗಮಿಸಿ ವಿಚಾರಣೆ ನಡೆಸಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಮೇಟಿ ರಾಸಲೀಲೆ ರಹಸ್ಯ ಬಯಲಾದ ಬಳಿಕ ದಿನದಿಂದ ದಿನಕ್ಕೆ ಬೆಳವಣಿಗೆಗಳು ನಡೆಯುತ್ತಲೇ ಇವೆ.

 

click me!