
ಬೆಂಗಳೂರು (ಜೂ.26) ರೈತರ ಸಾಲ ಮನ್ನಾ ಹೊರೆ ಸರಕಾರದ ಮೇಲಿದ್ದು ರೈತರಿಗಾಗಿ ಇರುವ ಕಾರನ್ನು ಬಿಡಲು ಸಿದ್ಧ, ಹೀಗೆಂದು ಹೇಳಿದ್ದು ಸಚಿವ ಜಮೀರ್ ಅಹಮದ್ ಖಾನ್.
ಹೊಸ ಫಾರ್ಚುನರ್ ಕಾರ್ ಗೆ ಜಮೀರ್ ಬೇಡಿಕೆಯಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು.
ಸಚಿವರೊಬ್ಬರು ಇನ್ನೋವಾದಲ್ಲಿ ತಿರುಗಾಡಲು ಸಾಧ್ಯವೇ?
ಇದೀಗ ಯು ಟರ್ನ್ ತೆಗೆದುಕೊಂಡಿರುವ ಸಚಿವ ಮಾತಿನ ವರಸೆ ಬದಲಾಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿಡದ ಸಚಿವರು ಬಜೆಟ್ ನಲ್ಲಿ ರೈತರ ಸಾಲಮನ್ನಾ ವೇ ಪ್ರಮುಖವೇ ವಿಚಾರ . ಸಾಲ ಮನ್ನಾ ಪರಿಣಾಮ ಉಳಿದ ಇಲಾಖೆಗೆ ಹಣಕಾಸಿನ ಕೊರತೆಯಾಗುವುದು ಸಹಜ. ಸರಕಾರದ ಖಜಾನೆಯಲ್ಲಿ ಹಣವೇ ಇಲ್ಲ. ಹಾಗಾಗಿ ನಾವೆಲ್ಲರೂ ನಮ್ಮ ಇಲಾಖೆಗೆ ಹೆಚ್ಚಿನ ಹಣ ನಿರೀಕ್ಷೆ ಮಾಡೋದು ಕಷ್ಟ ನಮ್ಮ ಬೇಡಿಕೆಯಲ್ಲಿ ಶೇ. 10 ರಷ್ಟು ಹಣ ಸಿಕ್ಕಿದರೂ ಸಾಕು ಎಂದು ಹೇಳಿದರು.
ಮಂತ್ರಿಗಿರಿ ತೋರಿಸಲು ಜಮೀರ್‌ಗೆ ಫಾರ್ಚುನರ್ ಬೇಕಂತೆ!
ರೈತರ ಸಾಲಮನ್ನಾದ ವಿಚಾರ ಇರುವುದುದರಿಂದಲೇ ಬಳಕೆ ಮಾಡಿರುವ ಕಾರನ್ನು ನಾನು ಕೇಳಿದ್ದು. ನಾನೇನು ಹೊಸ ಕಾರು ಕೇಳಿಲ್ಲ. ನಾನೇನು ಬೆಂಝ್ ಕಾರು ಕೇಳಿರಲಿಲ್ಲ. ಮಾಧ್ಯಮಗಳು ಇದನ್ನೇ ದೊಡ್ಡ ಸುದ್ದಿ ಮಾಡಿವೆ ಎಂದರು. ರೈತರಿಗಾಗಿ ಈಗೀರುವ ಇನ್ನೋವಾ ಕಾರನ್ನು ಬೇಕಾದರೂ ಬಿಡಲು ಸಿದ್ಧವಿದ್ದೇನೆ ಎಂದು ಸಚಿವರು ಹೇಳಿದರು.
ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾವ ಬಂದಿದೆ ಎಂದು ಮಾತ್ರ ಹೇಳಿದ್ದೆ. ಹೆಸರಿಡುವ ಸಂಬಂಧ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯವನ್ನು ಪಡೆದುಕೊಳ್ಳುತ್ತೆನೆ. ಯಡಿಯೂರಪ್ಪ ಕಲಾಂ ಹೆಸರಿಡಲು ಹೇಳಿದ್ದಾರೆ ಅದನ್ನು ವಿಮರ್ಶೆಗೆ ತೆಗೆದುಕೊಳ್ಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.