ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ಆಘಾತ: 'ಕೈ' ತೊರೆದ ಮಾಜಿ ರಾಜ್ಯಾಧ್ಯಕ್ಷ

By Web Desk  |  First Published Oct 5, 2019, 4:18 PM IST

ಹರಿಯಾಣದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಎಲೆಕ್ಷನ್ ರಂಗೇರುತ್ತಿದೆ. ಆದ್ರೆ ಕಾಂಗ್ರೆಸ್‌ಗೆ ಆರಂಭಿಕ ಆಘಾತವಾಗಿದೆ.


ನವದೆಹಲಿ (ಅ.05): ಹರಿಯಾಣ ವಿಧಾನಸಭೆ ಚುನಾವಣೆ ಗಲಾಟೆಯೇ ಕಾಂಗ್ರೆಸ್‌ ಆರಂಭಿಕ ಹಿನ್ನಡೆಯಾಗಿದೆ. ಹರಿಯಾಣ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಶೋಕ್ ತನ್ವರ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಟಿಕೆಟ್ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಚುನಾವಣಾ ಸಮಿತಿಯಿಂದ ಹೊರ ನಡೆದಿದ್ದ ಮರುದಿನವೇ ಹರಿಯಾಣ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷ, ರೆಬೆಲ್ ನಾಯಕ ಅಶೋಕ್ ತನ್ವರ್ ಇಂದು (ಶುಕ್ರವಾರ) ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಮಾತೃ ಪಕ್ಷಕ್ಕೆ ಆಘಾತ ನೀಡಿದ್ದಾರೆ.

Tap to resize

Latest Videos

undefined

ಲೋಕಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕ ಆತ್ಮಹತ್ಯೆ!

ರಾಹುಲ್‌ ಗಾಂಧಿಯವರ ಆಪ್ತರಾಗಿದ್ದ ತನ್ವರ್‌ 2014ರಿಂದಲೂ ಪಿಸಿಸಿ ಅಧ್ಯಕ್ಷರಾಗಿದ್ದರು. ಸೋನಿಯಾ ಗಾಂಧಿಯವರು ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ತನ್ವರ್‌ ಅವರನ್ನು ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿತ್ತು.

Ashok Tanwar: The people who are well established in system, the way they exploit people,they sit in AC rooms, go for foreign trips&earn money for 5 years. But right before polls they appear, as if they are Gods&Goddesses lekin karam devi-devta wale nahi hain, karam rakshasi hain https://t.co/2BQ2F5nQGR

— ANI (@ANI)

ತನ್ವರ್‌ ಜಾಗಕ್ಕೆ ಕುಮಾರಿ ಸೆಲ್ಜಾ ಅವರನ್ನು ನೇಮಕ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ಪದಚ್ಯುತಗೊಳಿಸಿದ್ದು ತನ್ವರ್‌ ಅವರಿಗೆ ತೀವ್ರ ಅಸಮಾಧಾನಗೊಂಡಿದ್ದರು. 

ಕಾಂಗ್ರೆಸ್‌ನಲ್ಲಿ ಸೋನಿಯಾ ವರ್ಸಸ್‌ ರಾಹುಲ್‌?

ಇನ್ನು, 2004ರಿಂದ 2014ರವರೆಗೆ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್‌ ಸಿಂಗ್‌ ಹೂಡಾ ಅವರನ್ನು ಚುನಾವಣಾ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿದ್ದು ಮತ್ತಷ್ಟು ಕೆರಳಿಸಿದೆ. ಟಿಕೆಟ್‌ ಹಂಚಿಕೆಯಲ್ಲಿತಮ್ಮ ಮಾತು ನಡೆಯುವುದಿಲ್ಲಎನ್ನುವುದು ಮನವರಿಕೆ ಆಗುತ್ತಿದ್ದಂತೆ ತನ್ವರ್‌ ಅವರು ಸೋನಿಯಾ ಮನೆ ಮುಂದೆ ಪ್ರತಿಭಟನೆ ಮಾಡಿದ್ದರು. 

ಅ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ; 

click me!