
ಅಮರಾವತಿ[ಅ.05]: ಕೆಲ ದಿನಗಳ ಹಿಂದಷ್ಟೇ 1.26 ಲಕ್ಷ ಸಿಬ್ಬಂದಿ ನೇಮಿಸಿ ಇತಿಹಾಸ ಸೃಷ್ಟಿಸಿದ್ದ ಆಂಧ್ರಪ್ರದೇಶ ಸಿಎಂ ಜನನ್ ಮೋಹನ್ ರೆಡ್ಡಿ ಸದ್ಯ ಮತ್ತೊನಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಕ್ಯಾಬ್ ಚಾಲಕರಿಗೆ ದಸರಾ ಉಡುಗೊರೆ ನೀಡಿದ್ದಾರೆ.
ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಕ: ಸಿಎಂ ಜಗನ್ ಇತಿಹಾಸ!
ಹೌದು ಆಟೋ ಹಾಗೂ ಕ್ಯಾಬ್ ಚಾಲಕರಿಗಾಗಿ ಜಗನ್ ಮೋಹನ್ ರೆಡ್ಡಿ 'ವಾಹನ ಮಿತ್ರ' ಎಂಬ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಪ್ರತಿ ಆಟೋ, ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರಿಗೆ ವರ್ಷವೊಂದಕ್ಕೆ 10 ಸಾವಿರ ರೂಪಾಯಿ ಸಹಾಯಧನ ಸಿಗಲಿದೆ. ಈ ಹಣವನ್ನು ವಿಮೆ, ವಾಹನ ರಿಪೇರಿ ಸೇರಿದಂತೆ ವಾಹನ ನಿರ್ವಹಣೆಗೆ ಈ ಹಣವನ್ನ ಬಳಸಿಕೊಳ್ಳಬಹುದು. ಪ್ರತಿಯೊಬ್ಬ ಚಾಲಕರ ಬ್ಯಾಂಕ್ ಖಾತೆಗೆ ನೇರವಾಗಿ ಈ ಹಣ ಜಮಾವಣೆ ಮಾಡಲಾಗುತ್ತದೆ ಎಂದು ಆಂಧ್ರ ಸಿಎಂ ಜಗನ್ ಘೋಷಿಸಿದ್ದಾರೆ.
ದೇವಾಲಯಗಳಲ್ಲೂ SC/ST ಮೀಸಲು ಜಾರಿ, ಸರ್ಕಾರದ ಐತಿಹಾಸಿಕ ಕ್ರಮ!
ಈ ಯೋಜನೆ ಘೋಷಣೆ ಮಾಡಿದ ಸಿಎಂ ಜಗನ್ ಮೋಹನ್ ರೆಡ್ಡಿ 'ಆಟೋ ಹಾಗೂ ಕ್ಯಾಬ್ ಚಾಲಕರ ಕಷ್ಟವನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಪ್ರತಿ ದಿನ 200 ರಿಂದ 500 ರೂಪಾಯಿ ಹಣ ಸಂಪಾದಿಸುವ ಚಾಲಕರಿಗೆ ಸಂಸಾರ ನಿಭಾಯಿಸುವುದು ಬಹಳ ಕಷ್ಟ. ಹೀಗಾಗಿ 5 ವರ್ಷದಲ್ಲಿ 50 ಸಾವಿರ ಹಣ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಇಂತಹ ಯೋಜನೆ ಘೋಷಣೆ ಮಾಡಿರುವ ದೇಶದ ಏಕೈಕ ರಾಜ್ಯ ಆಂಧ್ರಪ್ರದೇಶ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.