ಜನಾರ್ದನ ರೆಡ್ಡಿ ಹಾಕಿದ ಸವಾಲನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ರೆಡ್ಡಿ ಪಂಥಾಹ್ವಾನಕ್ಕೆ ಸಿದ್ದು ಏನು ಹೇಳಿದ್ದಾರೆ ನೋಡಿ.
ಬಳ್ಳಾರಿ (ಅ.29): ನೀನಂತೂ ಬಳ್ಳಾರಿ, ಬೆಂಗಳೂರಿಗೆ ಬರುವ ಆಗಿಲ್ಲ. ಅದೆಲ್ಲಿ ಕರಿತಿಯೋ ಕರಿ ಅಲ್ಲಿಯೇ ಬಂದು ಬಹಿರಂಗ ಚರ್ಚೆ ಮಾಡುತ್ತೇನೆ ಎಂದು ಜನಾರ್ದನ ರೆಡ್ಡಿ ಸವಾಲನ್ನು ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ.
ಇಂದು [ಸೋಮವಾರ] ಬಳ್ಳಾರಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಅಕ್ರಮ ಗಣಿಗಾರಿಕೆ ಮಾಡಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಕಂಡಿದೆ. ಈ ಕುರಿತು ಅಂಕಿ ಅಂಶ ಸಹಿತ ಚರ್ಚೆಗೆ ನಾನು ಸಿದ್ದ ಎಂದು ಬಹಿರಂಗ ಪಡಿಸಿಸದರು.
ಜನಾರ್ದನ ರೆಡ್ಡಿ ಅವರು ಮೊಳಕಾಲ್ಮೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಅಕ್ರಮ ಗಣಿಗಾರಿಕೆ ಮಾಡಿಲ್ಲ ಎಂದರೆ ಕೋಟಿ, ಕೋಟಿ ಹಣ ಎಲ್ಲಿಂದ ಬಂತು. ಮನೆಯಲ್ಲಿ ಚಿನ್ನದ ಚೇರು, ಚಿನ್ನದ ಕಮೋಡು ಹೇಗೆ ಬಂತು. ಇವು ನಿಮ್ಮ ಪೂರ್ವರ್ಜಿತ ಆಸ್ತಿಯೇ ಎಂದು ಪ್ರಶ್ನಿಸಿದ್ದಾರೆ.