JDS ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಗೆ ಬಿಗ್ ರಿಲೀಫ್

By Web DeskFirst Published Oct 29, 2018, 6:36 PM IST
Highlights

ಕರ್ನಾಟಕ ಹೈಕೋರ್ಟ್ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್  ಅವರಿಗೆ ಬಿಗ್ ರಿಲೀಫ್ ನೀಡಿದೆ. ಏನಿದು? ಇಲ್ಲಿದೆ ವಿವರ.

ಬೆಂಗಳೂರು, [ಅ.29]: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್  ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. 2014 ರಲ್ಲಿ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಎಚ್.ವಿಶ್ವನಾಥ್ ವಿರುದ್ಧ ದಾಖಲಾಗಿದ್ದ ಎಫ್ಐಆರ್  ರದ್ದಾಗಿದೆ.

ಎಚ್.ವಿಶ್ವನಾಥ್  ಮೇಲಿನ ಎಫ್ಐಆರ್  ರದ್ದು ಮಾಡಿ ಇಂದು [ಸೋಮವಾರ] ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಿದೆ. ಇದ್ರಿಂದ ವಿಶ್ವನಾಥ್ ನಿರಾಳರಾಗಿದ್ದಾರೆ.

2014 ರ ಲೋಕಸಭಾ ಎಲೆಕ್ಷನ್ ವೇಳೆ ಎಫ್ಐಆರ್ ದಾಖಲಾಗಿತ್ತು ಮೋದಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ವಿರೋಧಿ ಕಾನೂನು ಬರುತ್ತವೆ. 

ಹೀಗಾಗಿ ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕುವಂತೆ  ವಿಶ್ವನಾಥ್ ಪ್ರಚಾರ ಮಾಡಿದ್ದರು. ಈ ಸಂಬಂಧ ಸ್ಥಳೀಯ ಪತ್ರಿಕೆಯಲ್ಲಿ ವರದಿಯಾಗಿತ್ತು.  ವರದಿ ಆಧರಿಸಿ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು.

ದೂರು ದಾಖಲಿಸುವ ಮುನ್ನ ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯದೇ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಮ್ಯಾಜಿಸ್ಟ್ರೇಟ್ ಅನುಮತಿ ಪಡೆದಿಲ್ಲ ಎಂಬ ಕಾರಣದಿಂದ  ಹೈಕೋರ್ಟ್ ಪ್ರಕರಣ ರದ್ದು ಮಾಡಿದೆ.

 ವಿಶ್ವನಾಥ್ ಪರ ಹಿರಿಯ ವಕೀಲ ನಾಣಯ್ಯ ವಾದ ಮಂಡಿಸಿದ್ದರು.
 

click me!