'ರೈತರ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಪರಮೇಶ್ವರ, ಸಿದ್ದರಾಮಯ್ಯ ಮಾತಾಡ್ಬೇಕು'

By Web DeskFirst Published Nov 18, 2018, 6:57 PM IST
Highlights

ಕಬ್ಬು ಬೆಳಗಾರ ಹೋರಾಟಗಾರರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು ಹೀಗೆ.

ಧಾರವಾಡ, [ನ.18]: ಬೆಳಗಾವಿಯಲ್ಲಿ ಕಬ್ಬು ಬೆಳಗಾರ ಹೋರಾಟ ತಾರಕ್ಕೇರಿದೆ. ರೈತರ ಪ್ರತಿಭಟನೆ ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ದೂರು ದಾಖಲಿಸುವ ಹೆಸರಿನಲ್ಲಿ ರೈತರ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದ್ದಾರೆ.

ಈಗಾಗಲೇ ಹತ್ತು ರೈತರ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಮಾಜಿ ಸಿಎಂ ಜಗದಿಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿಂದು ಪ್ರತಿಕ್ರಿಯಿಸಿದ ಅವರು,  ಹೇಗಾದರೂ ಮಾಡಿ ಅಧಿಕಾರ ಮಾಡಬೇಕು ಅಂತಾ ಸಿಎಂ ಏನೆನೋ‌ ಹೇಳುತ್ತಿದ್ದು, ರೈತರಿಗೆ ಮೋಸದ ಹೇಳಿಕೆ ಕೊಟ್ಟು ದಾರಿ ತಪ್ಪಿಸ್ತಾ ಇದಾರೆ. 

ನಾನು ಹತ್ತು ತಿಂಗಳ ಸಿಎಂ ಇದ್ದೇ. ನಾನು ಆಗ ಕನಿಷ್ಠ ದರ ನಿಗದಿ ಮಾಡಲು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದಿದ್ದೆ. ಕುಮಾರಸ್ವಾಮಿ ಮೊದಲೇ ಫ್ಯಾಕ್ಟರಿ ಮಾಲೀಕರ ಸಭೆ ಮಾಡಬೇಕಿತ್ತು. ಈಗ ರೈತರು ಬೀದಿಗಿಳಿದ ಮೇಲೆ ಸಭೆ ಮಾಡೋಕೆ ಮುಂದಾಗಿರೋದು ಸರಿಯಲ್ಲ ಎಂದರು.

ರೈತರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕೋದ, ಬೀಗ ಹಾಕೋದು ಎಲ್ಲವೂ ಹೋರಾಟದ  ಒಂದು ಭಾಗ. ಈ ಹೋರಾಟವನ್ನೇ ಕಾನೂನು ಉಲ್ಲಂಘನೆ ಅಂತಾ ಕೇಸ್ ಹಾಕೋದು‌ ಎಷ್ಟು ಸರಿ ಶೆಟ್ಟರ್ ಎಂದು ಪ್ರಶ್ನಿಸಿದರು.

ರೈತ ಮಹಿಳೆ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ರೈತರನ್ನು ಜೈಲಿಗೆ ಹಾಕೊದನ್ನು ನಿಲ್ಲಿಸಬೇಕು. ಇಷ್ಟೆಲ್ಲ ಆದ್ರೂ ಕಾಂಗ್ರೆಸ್‌ನವರು ಸುಮ್ಮನೆ ಕುಳಿತಿದ್ದೇಕೆ. ರೈತರ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಪರಮೇಶ್ವರ, ಸಿದ್ದರಾಮಯ್ಯ ಮಾತನಾಡಬೇಕು ಎಂದು ಆಗ್ರಹಿಸಿದರು.

ರೈತರ ಹೋರಾಟಕ್ಕೆ ಬಿಜೆಪಿಯಿಂದ ಬೆಂಬಲ ಕೊಡುವ ಬಗ್ಗೆ ಚಿಂತನೆ ನಡೆಸಿದೆ. ಆಡಳಿತ, ಪ್ರತಿಪಕ್ಷದವರು ಯಾರೇ ಶುಗರ್ ಫ್ಯಾಕ್ಟರಿ ಮಾಲೀಕರಿರಲಿ ಅವರ ಮೇಲೆ ಕ್ರಮ ಕೈಗೊಂಡು ರೈತರ ಪರ ನಿಲ್ಲಬೇಕು ಎಂದು ಸಿಎಂಗೆ ಶೆಟ್ಟರ್ ಸಲಹೆ ನೀಡಿದರು.

click me!