ಅಂಬಿಡೆಂಟ್ ಡೀಲ್: ಜನಾರ್ದನ ರೆಡ್ಡಿ ಜೈಲು ವಾಸ ಅಂತ್ಯ..!

By Web DeskFirst Published Nov 14, 2018, 5:00 PM IST
Highlights

ಅಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಬೆಂಗಳೂರು, [ನ.14]: ಕೋಟ್ಯಾಂತರ ರುಪಾಯಿ ಅಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ಸಿಕ್ಕಿದೆ.  

ಇಂದು [ಬುಧವಾರ] ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ 1ನೇ ಸೆಷನ್ಸ್ ಕೋರ್ಟ್ ರೆಡ್ಡಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಜನಾರ್ದನ ರೆಡ್ಡಿ 4 ದಿನಗಳ ಜೈಲು ವಾಸ ಅಂತ್ಯವಾದಂತಾಗಿದೆ.

ಆಂಬಿಡೆಂಟ್ & ರೆಡ್ಡಿ: ಸುವರ್ಣನ್ಯೂಸ್‌ನಿಂದ Super Exclusive ವರದಿಗಳ ಸರಮಾಲೆ

ಅಂಬಿಡೆಂಟ್ ಕಂಪನಿಯಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಅವ್ಯವಹಾರದ ಕುರಿತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದ ರದ್ದತಿಗಾಗಿ ಡೀಲ್ ನಡೆದಿದೆ ಎನ್ನಲಾಗಿದೆ.

ಆ ಡೀಲ್ ಡೀಲ್‌ನಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಇದ್ರಿಂದ ಸಿಸಿಬಿ ಪೊಲೀಸ್ ರೆಡ್ಡಿಯನ್ನ ನವೆಂಬರ್ 11ರಂದು ಬಂಧಿಸಿ, ನ್ಯಾಯಾಧೀಶರ ಮುಮದೆ ಹಾಜರುಪಡಿಸಲಾಗಿತ್ತು.

ಬಳಿಕ 1ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ರೆಡ್ಡಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದರು.

click me!