ಆಯುಧ ಪೂಜೆಯಂದು ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿ ಇಕ್ಕಟ್ಟಿಗೆ ಸಿಲುಕಿದ್ದ ಜೈ ಕರ್ನಾಟಕ ಅಧ್ಯಕ್ಷ ಮುತ್ತಪ್ಪ ರೈಗೆ ರಿಲೀಫ್ ಸಿಕ್ಕಿದೆ.
ಬೆಂಗಳೂರು, [ನ.14]: ಜೈ ಕರ್ನಾಟಕ ಅಧ್ಯಕ್ಷ ಮುತ್ತಪ್ಪ ರೈ ಅವರ ಶಸ್ತ್ರಾಸ್ತ್ರ ಪೂಜೆ ಪ್ರಕರಣದ ತನಿಖೆಯನ್ನ ನಡೆಸದಂತೆ 63ನೇ ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಮುತ್ತಪ್ಪ ರೈ ಭದ್ರತೆ ನೀಡಿದ್ದ ಬ್ಲ್ಯಾಕ್ ಕ್ಯಾಟ್ ಸೆಕ್ಯೂರಿಟಿ ಏಜೆನ್ಸಿ, ಎಲ್ಲಾ ದಾಖಲೆಗಳು ಕಾನೂನು ಬದ್ದ ಎಂದು ತಿಳಿದು ಹಿನ್ನೆಲೆಯಲ್ಲಿ ಸಂಸ್ಥೆ ಮೇಲಿನ ತನಿಖೆಯನ್ನೂ ನಿಲ್ಲಿಸುವಂತೆ ನ್ಯಾಯಾಲಯ ಸಿಸಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
undefined
ಮುತ್ತಪ್ಪ ರೈ ಬೆನ್ನು ಬಿಡದ ‘ಆಯುಧ ಪೂಜೆ’ ಮತ್ತೊಂದು ಖಡಕ್ ದೂರು
ದಸರಾ ಆಯುಧ ಪೂಜೆ ದಿನ ಮುತ್ತಪ್ಪ ರೈ ಕತ್ತಿ, ಡ್ರ್ಯಾಗರ್, ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ಮುತ್ತಪ್ಪ ರೈ ಅವರನ್ನ ಕರಸಿ ವಿಚಾರಣೆ ನಡೆಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುತ್ತಪ್ಪ ರೈ ಕೋರ್ಟ್ ಮೆಟ್ಟಿಲೇರಿ, ತನಿಖೆಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು.