ಹಿಂದು ಆಚರಣೆಗೆ ಮರುಳಾದ ವಿದೇಶಿ ಮಂದಿ:ಯಹೂದಿಗಳಿಂದ ಭಜನೆ, ರಷ್ಯನ್ನರಿಂದ ಹೋಮ

Published : Oct 28, 2017, 06:02 PM ISTUpdated : Apr 11, 2018, 12:47 PM IST
ಹಿಂದು ಆಚರಣೆಗೆ ಮರುಳಾದ ವಿದೇಶಿ ಮಂದಿ:ಯಹೂದಿಗಳಿಂದ ಭಜನೆ, ರಷ್ಯನ್ನರಿಂದ ಹೋಮ

ಸಾರಾಂಶ

ಗೋಕರ್ಣ ಕ್ಷೇತ್ರದಲ್ಲೀಗ ವೈದಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಿಯರ ಸಂಖ್ಯೆ ಹೆಚ್ಚಾಗಿದೆ. ವಿವಿಧ ದೇಶಗಳ ಕ್ರಿಶ್ಚಿಯನ್ನರು ಪೂಜೆ ನೆರವೇರಿಸುತ್ತಾರೆ. ಸ್ಪೇನ್‌ನವರು ಯೋಗ ಸಾಧನೆಯಲ್ಲಿ ತೊಡಗಿದ್ದಾರೆ. ಗೋಕರ್ಣದ ವಿವಿಧೆಡೆ ವಿದೇಶಿಯರು ಆಧ್ಯಾತ್ಮಿಕ ಸಾಧನೆಯಲ್ಲಿ ಮೈಮರೆತಿದ್ದಾರೆ.

ಕಾರವಾರ ಗೋಕರ್ಣ ವೈದಿಕ ಆಚರಣೆಗಳಿಗೆ ಹೆಸರಾದ ಪ್ರದೇಶ. ಇಲ್ಲಿ ಅಪರಕ್ರಿಯೆ ಮಾಡಿದರೆ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಇಲ್ಲಿ ಮೊದಲಿನಿಂದಲೂ ವಿದೇಶಿಗರ ಸಂಖ್ಯೆ ಹೆಚ್ಚು. ಈಗೀಗ ಇಲ್ಲಿಗಾಗಮಿಸುವ ವಿದೇಶಿಯರಿಗೆ ವೈದಿಕತೆಯ ಗಾಳಿ ಬೀಸಿದೆ.

ಅವರು ಹೋಮ, ಹವನ, ತಿಥಿಯಂಥ ಕಾರ್ಯಗಳನ್ನು ಭಕ್ತಿ ಶ್ರದ್ಧೆಯಿಂದ ಮಾಡಲಾರಂಭಿಸಿದ್ದಾರೆ. ವಿದೇಶಿಯರು ಹೋಮ, ತಿಥಿ ಮಾಡ್ತಾರೆ! ರಷ್ಯನ್ನರು ಹೋಮ ಮಾಡುತ್ತಿದ್ದಾರೆ. ಇಸ್ರೇಲಿನ ಯಹೂದಿ ಗಳು ಭಜನೆಯಲ್ಲಿ ನಿರತರಾಗುತ್ತಾರೆ. ವಿವಿಧ ದೇಶಗಳ ಕ್ರಿಶ್ಚಿಯನ್ನರು ಪೂಜೆ ನೆರವೇರಿಸುತ್ತಾರೆ. ಸ್ಪೇನ್‌ನವರು ಯೋಗ ಸಾಧನೆಯಲ್ಲಿ ತೊಡಗಿದ್ದಾರೆ. ಗೋಕರ್ಣದ ವಿವಿಧೆಡೆ ಸದ್ದುಗದ್ದಲ ಇಲ್ಲದೆ ಕೆಲವರು ಆಧ್ಯಾತ್ಮಿಕ ಸಾಧನೆಯಲ್ಲಿ ಮೈಮರೆತಿದ್ದಾರೆ. ಹಿಂದೂ ಪದ್ಧತಿಯ ಪ್ರಕಾರ ವಿವಾಹವನ್ನೂ ಆಗುತ್ತಿದ್ದಾರೆ.

ತಿಥಿಯನ್ನೂ ಮಾಡುತ್ತಾರೆ. ಪಿತೃಗಳಿಗೆ ತರ್ಪಣವನ್ನೂ ನೀಡುತ್ತಾರೆ. ಹಲವರು ಧ್ಯಾನದಲ್ಲಿ ನಿರತರರಾಗಿರುವುದು ಈಚೆಗೆ ಹೆಚ್ಚಾಗಿ ಕಡಲತೀರದಲ್ಲಿ ಕಂಡುಬರುತ್ತಿದೆ. ಕೆಲವರು ಸಂಸ್ಕೃತ, ಕನ್ನಡ ಕಲಿತಿದ್ದಾರೆ. ಹಿಂದೂ ಧರ್ಮದ ಆಚರಣೆಯ ಬಗ್ಗೆ ಇಲ್ಲಿನ ಜನರಿಂದ ಕಲಿತುಕೊಂಡಿದ್ದಾರೆ. ಹೀಗೆ ಕಲಿತವರು ಉಳಿದವರಿಗೆ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ. ಹಲವು ವಿದೇಶಿಗರು ಓಂ ಗಣೇಶಾಯ ನಮಃ, ಓಂ ಶಿವಾಯ ನಮಃ, ಓಂ ದೇವಿ ಭಗವತಿ ನಮಃ ಎಂದು ಉಚ್ಛರಿಸುತ್ತ ಇರುತ್ತಾರೆ.

ಶಿವರಾತ್ರಿಯಲ್ಲಿ ಶಿವದೇಗುಲಕ್ಕೆ ಪ್ರವೇಶ ಪಡೆಯಲು ನೂರಾರು ವಿದೇಶಿಗರು ಪ್ರಯತ್ನ ನಡೆಸಿದ್ದನ್ನು ಸ್ಮರಿಸಬಹುದು. ಗೋಕರ್ಣ ಸಮೀಪವೇ ಚರ್ಚ್ ಇದೆ. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಹುತೇಕರು ಪೂಜೆ, ಹೋಮ, ಹವನ, ಭಜನೆಯಲ್ಲಿ ನಿರತರಾಗಿರುತ್ತಾರೆ. ರಾತ್ರಿಯಾಯಿತೆಂದರೆ ತಾವಿರುವ ನಿವಾಸದಲ್ಲೆ ತಾಳ ಹಿಡಿದು ಭಜನೆಯಲ್ಲಿ ತೊಡಗುತ್ತಾರೆ. ವಿದೇಶಿಯರ ಪೂಜೆ, ಹೋಮ, ಹವನಗಳಿಗೆ ಬೇಕಾಗುವ ಹೂವು, ಹಣ್ಣು, ಮರದ ತೊಗಟೆಗಳು, ಸವಿಧ, ಬಿಲ್ವಪತ್ರೆ ಮತ್ತಿತರ ಧಾನ್ಯಗಳನ್ನು ಮಾರಾಟ ಮಾಡುವುದರಲ್ಲೂ ಕೆಲವು ಸ್ಥಳೀಯರು ತೊಡಗಿಕೊಂಡಿದ್ದಾರೆ.

ಸುತ್ತ ಹತ್ತೂರ ಸುದ್ದಿ ಸ್ವಾರಸ್ಯ ಹಿಂದೂ ಆಚರಣೆಗೆ ಮರುಳಾದ ಫಾರಿನ್ ಮಂದಿ ಬಂಕಿಕೊಡ್ಲದ ವಿದೇಶಿ ಸಂನ್ಯಾಸಿನಿ! ಇಲ್ಲಿನ ಬಂಕಿಕೊಡ್ಲದಲ್ಲೊಬ್ಬ ವಿದೇಶಿ ಸನ್ಯಾಸಿನಿ ಇದ್ದಾಳೆ. ಆಕೆಗೆ ವೈದಿಕ ಆಚರಣೆಗಳಲ್ಲಿ ಎಲ್ಲಿಲ್ಲದ ಆಸಕ್ತಿ. ಈಕೆ ತನ್ನ ಹೆಸರನ್ನು ಯೋಗರತ್ನಾಕರ ಎಂದು ಬದಲಿಸಿಕೊಂಡಿದ್ದಾಳೆ.

ಹಲವು ವೈದಿಕ ಆಚರಣೆಗಳನ್ನು ಕಲಿತಿರುವ ಈಕೆ ಪ್ರತಿ ಶನಿವಾರ ಹೋಮ ಕುಂಡದೆದುರು ಕುಳಿತು ಭಗವಂತನ  ಮಸ್ಮರಣೆ ಮಾಡುತ್ತಾಳೆ. ಹವಿಸ್ಸನ್ನು ಅಗ್ನಿಗೆ ಅರ್ಪಿಸು ತ್ತಾಳೆ. ಗಂಟೆಗಟ್ಟಲೆ ಕುಳಿತು ಹೋಮ ಮಾಡುತ್ತಾಳೆ. ರಷ್ಯನ್ ಭಾಷೆಯಲ್ಲಿ ಯಾಗದ ವಿವರ ಬೀಚ್‌ಗೆ ಸಾಗುವ ರಸ್ತೆಯಲ್ಲಿ ಸರ್ಗೇಯ್ ಎನ್ನುವ ರಷ್ಯಾದ ಪ್ರಜೆ ತನ್ನವರಿಗೆ ಭಜನೆ, ಹೋಮ, ಹವನದ ಮಹತ್ವ ತಿಳಿಸುತ್ತ, ಯಜ್ಞಕಾರ್ಯದಲ್ಲಿ ನಿರತರಾಗಿದ್ದಾರೆ. ಸೆರ್ಗೇಯ್ ರಷ್ಯನ್ ಭಾಷೆಯಲ್ಲಿ ಯಾಗದ ಮಹತ್ವ ಬರೆದು ಪ್ರಕಟಿಸಿದ್ದಾರೆ.

- ವಸಂತಕುಮಾರ್ ಕತಗಾಲ, ಕನ್ನಡಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?