
ಭೋಪಾಲ್(ನ. 26) ನಿಮಗೆ ಹಿಂದಿ ಚಿತ್ರ ಹಮ್ ದಿಲ್ ದೆ ಚುಕೆ ಸನಮ್ ನೆನಪಿರಬಹುದು. ಐಶ್ವರ್ಯಾ ರೈ, ಅಜಯ್ ದೇವಗನ್, ಸಲ್ಮಾನ್ ಖಾನ್ ಅಭಿನಯದ ಚಿತ್ರ. ಐಶ್ವರ್ಯಾ ಮತ್ತು ಸಲ್ಮಾನ್ ಪ್ರೀತಿಯಲ್ಲಿ ಬಿದ್ದಿದ್ದರೆ ಐಶ್ವರ್ಯಾ ಅಪ್ಪ ಅವಳನ್ನು ಅಜಯ್ ಗೆ ಮದುವೆ ಮಾಡಿ ಕೊಡುತ್ತಾರೆ. ಸಲ್ಮಾನ್ ವಿಚಾರ ಅಜಯ್ ಗೆ ಗೊತ್ತಾದಾಗ ಐಶ್ವರ್ಯಾಳನ್ನು ಸಲ್ಮಾನ್ ಜತೆ ಸೇರಿಸಲು ತೀರ್ಮಾನ ಮಾಡುತ್ತಾನೆ. ಆದರೆ ಅಂತಿಮವಾಗಿ ಐಶ್ವರ್ಯಾ ತಾನು ಅಜಯ್ ನನ್ನೇ ಪ್ರೀತಿಸುತ್ತಿರುವುದನ್ನು ಅರಿತುಕೊಳ್ಳುತ್ತಾಳೆ.
1999 ರಲ್ಲಿ ತೆರೆಗೆ ಬಂದ ಚಿತ್ರ ಬ್ಲಾಕ್ ಬಾಸ್ಟರ್ ಹಿಟ್ ಸಾಲಿನಲ್ಲಿ ಸೇರಿಕೊಳ್ಳುತ್ತದೆ. ಇದೇ ವಿಚಾರ 2019ಕ್ಕೆ ಬಂದಾಗ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಿಜ ಜೀವನದಲ್ಲಿ ನಡೆದುಹೋಗಿದೆ. ಕನ್ನಡದಲ್ಲಿ ತೆರೆಗೆ ಬಂದ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಸಿನಿಮಾ ಸಹ ಇದೇ ತೆರನಾದ ಕತೆ ಹೊಂದಿತ್ತು.
ಧ್ರುವ ಸರ್ಜಾ ಮದುವೆ ಸಂಭ್ರಮ ಹೇಗಿತ್ತು?
ಸಿನಿಮಾದ ಕತೆಯೇ ತರವೇ ಇದ್ದರೂ ಮುಕ್ತಾಯ ಮಾತ್ರ ಕೊಂಚ ಭಿನ್ನಬವಾಗಿದೆ. ತನ್ನ ಹೆಂಡತಿಯನ್ನು ಆಕೆ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಲವರ್ ಜತೆ ಸೇರಿಸಬೇಕಾಗಿದ್ದು ನ್ಯಾಯಾಲಯ ವಿಚ್ಛೇದನ ನೀಡಬೇಕು ಎಂದು ವ್ಯಕ್ತಿಯೊಬ್ಬ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಭೋಪಾಲ್ ನ ಕೋಲಾರ್ ಏರಿಯಾದಿಂದ ಘಟನೆ ವರದಿಯಾಗಿದೆ. ಗಂಡ ಮಹೇಶ್(ಹೆಸರು ಬದಲಿಸಲಾಗಿದೆ) ಒಬ್ಬ ಸಾಫ್ಟ್ ವೇರ್ ಇಂಜಿನಿಯರ್. ಹೆಂಡತಿ ಸಂಗೀತಾ (ಹೆಸರು ಬದಲಿಸಲಾಗಿದೆ) ಒಬ್ಬ ಫ್ಯಾಷನ್ ಡಿಸೈನರ್. ಏಳು ವರ್ಷದ ಹಿಂದೆ ಮದುವೆಯಾದ ದಂಪತಿಗೆ ಇಬ್ಬರು ಮಕ್ಕಳು.
ದಂಪತಿ ಆರಂಭದಲ್ಲಿ ಸುಖವಾಗಿದ್ದರು. ಸಂಗೀತಾ ಹಿಂದೆ ವ್ಯಕ್ತಿಯೊಬ್ಬನ್ನನ್ನು ಪ್ರೀತಿಸುತ್ತಿದ್ದು ಆಕೆಯ ತಂದೆ ತನ್ನ ಜತೆಗೆ ಮದುವೆ ಮಾಡಿಕೊಟ್ಟ ವಿಚಾರ ಗಂಡನಿಗೆ ಗೊತ್ತಾಗಿದೆ.
ಇದಾದ ನಂತರ ಕೆಲ ವರ್ಷಗಳಲ್ಲಿ ಸಂಗೀತಾಗೆ ತನ್ನ ಹಳೆಯ ಲವರ್ ವಿಚಾರ ಗೊತ್ತಾಗಿದೆ. ತಾನು ಯಾರನ್ನು ಮದುವೆ ಆಗುವುದಿಲ್ಲ ಎಂದು ಆತ ಡಿಸೈಡ್ ಮಾಡಿರುವ ಶಾಕಿಂಗ್ ವಿಚಾರವೂ ಗೊತ್ತಾಗಿದೆ.
21 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಎಂದ ಸ್ಟಾರ್ ನಟ
ಈ ವಿಚಾರ ದಂಪತಿ ನಡುವೆ ಚರ್ಚೆಯಾಗಿದ್ದು ಸಂಗೀತಾ ತನ್ನ ಲವರ್ ಜತೆ ಸೇರುವ ತೀರ್ಮಾನ ಮಾಡುತ್ತಾರೆ. ಈ ವಿಚಾರ ಕೌಟಂಬಿಕ ನ್ಯಾಯಾಲಯದ ಮೆಟ್ಟಿಲು ಏರುತ್ತದೆ.
ಮಕ್ಕಳು ಇನ್ನು ಮುಂದೆ ಮಹೇಶ್ ಬಳಿ ಇರುತ್ತವೆ ಸಂಗೀತಾ ಯಾವಾಗ ಬೇಕಾದರೂ ಬಂದು ಮಕ್ಕಳನ್ನು ನೋಡಿಕೊಂಡು ಹೋಗಬಹುದು ಎಂದು ಮಹೇಶ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.