8 ದಿನ ತನ್ನ ಗುರುತು ಬಚ್ಚಿಟ್ಟ ಐಎಎಸ್ ಆಫೀಸರ್! 8ನೇ ದಿನ ಸತ್ಯ ಬಹಿರಂಗವಾದಾಗ ಆಗಿದ್ದೇನು?! ತಾನು ಯಾರೆಂದು ಹೇಳದೇ ಸಾಮಾನ್ಯನಂತೆ ಕೆಲಸ ಮಾಡಿದ ಡಿಸಿ! ಕೇರಳ ಜಲಪ್ರವಾಹದಲ್ಲಿ ಮೂಟೆ ಹೊತ್ತ ಜಿಲ್ಲಾಧಿಕಾರಿ! ದಾದರ್ ಮತ್ತು ನಗರ ಹವೇಲಿ ಜಿಲ್ಲಾಧಿಕಾರಿ ಕೆ. ಗೋಪಿನಾಥನ್
ಕೊಚ್ಚಿ(ಸೆ.6): ಟ್ರಕ್ಕುಗಳಲ್ಲಿ ಬಂದ ಟನ್‌ಗಟ್ಟಲೇ ಪರಿಹಾರ ಸಾಮಗ್ರಿಗಳನ್ನು ಆತ ಎಲ್ಲರ ಜೊತೆಗೂಡಿ ಇಳಿಸುತ್ತಿದ್ದ. ಕೆಲವರು ಗಡಿಬಿಡಿಯಲ್ಲಿ ಆತನ ಮೇಲೆ ಮೂಟೆ ಮೇಲೊಂದು ಮೂಟೆ ಹೊರಿಸಿ ಬೇಗ ಬೇಗ ಕೊಡಪ್ಪಾ ಅಂತಾ ಗದರಿಸಿದ್ದೂ ಉಂಟು. ಸತತ ಎಂಟು ದಿನಗಳ ಕಾಲ ಆ ವ್ಯಕ್ತಿ ಇದೇ ರೀತಿಯಾಗಿ ಕೇರಳ ಪ್ರವಾಹ ಪೀಡಿತ ಜನರಿಗಾಗಿ ಕೆಲಸ ಮಾಡುತ್ತಿದ್ದ.
8ನೇ ದಿನ ಇನ್ನೇನು ಆತ ಹೊರಡಬೇಕು ಎನಿಸುವಷ್ಟರಲ್ಲಿ ಕೆಂಪುಗೂಟದ ಕಾರೊಂದು ಆತನನ್ನು ಕರೆತರಲು ಬಂತು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು ಸಾಮಾನ್ಯನಂತೆ 8 ದಿನಗಳ ಕಾಲ ಪರಿಹಾರ ಕಾರ್ಯದರಲ್ಲಿ ನಿರತನಾಗಿದ್ದ ಆ ವ್ಯಕ್ತಿ ಜಿಲ್ಲಾಧಿಕಾರಿ ಎಂದು. ಹೌದು ದಾದರ್ ಮತ್ತು ನಗರ ಹವೇಲಿ ಜಿಲ್ಲಾಧಿಕಾರಿ ಕೆ. ಗೋಪಿನಾಥನ್, ಸತತ 8 ದಿನಗಳ ಕಾಲ ಕೇರಳ ಜಲಪ್ರವಾಹಕ್ಕೆ ಎದೆಯೊಡ್ಡಿ ಸಾಮಾನ್ಯನಂತೆ ಕೆಲಸ ಮಾಡಿದ್ದಾರೆ.
undefined
ಈ ಎಂಟು ದಿನಗಳ ಅವಧಿಯಲ್ಲಿ ಯಾರೋಬ್ಬರಿಗೂ ಆತನೊಬ್ಬ ಜಿಲ್ಲಾಧಿಕಾರಿ ಎಂಬ ಅರಿವು ಇರಲಿಲ್ಲ. ಕೊನೆಗೆ ಹೊರಡುವಾಗ ಈ ವ್ಯಕ್ತಿ ಜಿಲ್ಲಾಧಿಕಾರಿ ಕೆ. ಗೋಪಿನಾಥನ್ ಎಂಬುದು ಗೊತ್ತಾಗಿದೆ. ಕೂಡಲೇ ಗೋಪಿನಾಥನ್ ಅವರನ್ನು ಸಂಪರ್ಕಿಸಿದ ಮಾಧ್ಯಮಗಳು, ಯಾರಿಗೂ ತಿಳಿಯದಂತೆ ಕೆಲಸ ಮಾಡಿದ್ದೇಕೆ ಎಂದು ಪ್ರಶ್ನಿಸಿವೆ.
ಇದಕ್ಕೆ ನಗುತ್ತಲೇ ಉತ್ತರಿಸಿರುವ ಗೋಪಿನಾಥನ್, ಯಾರಿಗೂ ಗೊತ್ತಾಗಬಾರದೆಂದೇ ನಾನು ನನ್ನ ಗುರುತು ಮುಚ್ಚಿಟ್ಟಿದ್ದೆ ಎಂದು ತಿಳಿಸಿದ್ದಾರೆ. ಅಲ್ಲದೇ ನಾನೇನೂ ಮಹಾನ್ ಕಾರ್ಯ ಮಾಡಿಲ್ಲ. ಸುಮ್ಮನೇ ಪರಿಹಾತ ಸಾಮಗ್ರಿಗಳನ್ನು ಒಂದು ಕಡೆಯಿಂಧ ಮತ್ತೊಂದು ಕಡೆಗೆ ಸಾಗಿಸಲು ಹೆಗಲು ಕೊಟ್ಟಿದ್ದೇನೆ. ನಿಜವಾಗಿ ಪ್ರವಾಹದ ಮಧ್ಯೆ ನಿಂತು ಕೆಲಸ ಮಾಡಿದ ಅಧಿಕಾರಿಗಳೇ ನಿಜವಾದ ಹಿರೋಗಳು ಎಂದು ಹೇಳಿ ಕಾರು ಹತ್ತಿ ಹೊರಟು ಹೋಗಿದ್ದಾರೆ ಗೋಪಿನಾಥನ್.
ಪ್ರವಾಹ ಪೀಡಿತರ ನೆರವಿಗೆ ಅಕ್ಕಿ ಮೂಟೆ ಹೊತ್ತ ಐಎಎಸ್ ಆಫಿಸರ್
ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಉಪಹಾರ ಸೇವಿಸಿದ ಜಿಲ್ಲಾಧಿಕಾರಿ
Photo Courtsey: Hindustan Times