(ಸುಳ್ ಸುದ್ದಿ) ಭಾರತದಲ್ಲಿ ರುಪಾಯಿ ಬದಲು ಹೊಸ ಕರೆನ್ಸಿ : ಮೋದಿ ಮಹತ್ವದ ಘೋಷಣೆ?

By Web DeskFirst Published Sep 6, 2018, 12:23 PM IST
Highlights

ನೋಟು ಅಮಾನ್ಯ ಮಾಡಿ ಘೋಷಣೆ ಹೊರಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇದೀಗ ಮತ್ತೊಂದು ಮಹತ್ವದ ಘೋಷಣೆಯನ್ನು ಹೊರಡಿಸಿದೆ.

ನವದೆಹಲಿ : ಡಾಲರ್ ವಿರುದ್ಧ ರುಪಾಯಿ ಮೌಲ್ಯ ದಿನೇ ದಿನೇ ಕುಸಿ ಯುತ್ತಿರುವುದು ಸರ್ಕಾರದ ಚಿಂತೆಗೆ ಕಾರಣವಾಗಿದೆ.  ಹೀಗಾಗಿ ಭಾರತದಲ್ಲೂ ರುಪಾಯಿ ಬದಲು ಡಾಲರ್ ಅನ್ನೇ ಭಾರತದ ಕರೆನ್ಸಿಯನ್ನಾಗಿ ಜಾರಿಗೊಳಿಸಿ ಮೋದಿ ಅವರು ಇಂದು ಮಧ್ಯರಾತ್ರಿ ಘೋಷಿಸಲಿದ್ದಾರೆ. 

ಹೀಗಾಗಿ ನಾಳೆಯಿಂದ ಬ್ಯಾಂಕುಗಳಲ್ಲಿ ರುಪಾಯಿ ಹಿಂದಿರುಗಿಸಿ ಡಾಲರ್ ಪಡೆಯುವ ಪ್ರಕ್ರಿಯೆ ಆರಂಭವಾಗಲಿದೆ. ಇನ್ನು ಒಂದು ತಿಂಗಳಿನಲ್ಲಿ ದೇಶದಲ್ಲಿ ಡಾಲರ್ ಅಧಿಕೃತವಾಗಿ ಚಲಾವಣೆಗೆ ಬರಲಿದ್ದು, ಅಷ್ಟರ ಒಳಗಾಗಿ ಜನರು ತಮ್ಮ ಹಣವನ್ನು ಡಾಲರ್‌ಗೆ ಬದಲಾಯಿಸಿಕೊಳ್ಳಬೇಕು. 

ಅಪ ನದೀಕರಣದ ವೇಳೆ ನೋಟು ವಿನಿಮಯ ಮಾಡಿಕೊಂಡಂತೆ ಡಾಲರ್ ವಿನಿಮಯ ಮಾಡಿಕೊಳ್ಳಬೇಕು. ವಿಳಂಬ ಮಾಡಿದಷ್ಟೂ ಹೆಚ್ಚು ಹಣವನ್ನು ಜನರು ನೀಡಬೇಕಾಗು ತ್ತದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

click me!