
ನವದೆಹಲಿ(ಜು.02): ಜಿಎಸ್‌ಟಿ ಜಾರಿಯಾಗಿದ್ದೇ ತಡ ದೇಶದಲ್ಲಿ ಬಿಕಾಂ ಪದವೀಧರರಿಗೆ ಭಾರಿ ಬೇಡಿಕೆ ಬಂದುಬಿಟ್ಟಿದೆ. ಹೆಚ್ಚು ಹೆಚ್ಚು ಸಂಬಳಕ್ಕೆ ಬಿಕಾಂ ಪದವೀಧರರನ್ನು ಸಂಸ್ಥೆಗಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್‌ಗಳು ನೇಮಕ ಮಾಡಿಕೊಳ್ಳುತ್ತಿದ್ದಾರೆ.
ಜಿಎಸ್‌ಟಿಗೆ ಮುಂಚೆ ಇದ್ದ ಪದ್ಧತಿಯಡಿ ಪ್ರತಿ ತ್ರೈಮಾಸಿಕಕ್ಕೆ ಒಬ್ಬ ಉದ್ಯಮಿ ಒಂದು ರಿಟರ್ನ್ ಸಲ್ಲಿಸಬೇಕಿತ್ತು. ಆದರೆ ಜಿಎಸ್‌ಟಿಯಡಿ 9 ರಿಟರ್ನ್‌ಗಳನ್ನು ಸಲ್ಲಿಸಬೇಕಾಗಿದೆ. ಹೀಗಾಗಿ ಗುಮಾಸ್ತ ಕೆಲಸ ಜಾಸ್ತಿಯಾಗಿದೆ. ಎಲ್ಲವನ್ನೂ ಚಾರ್ಟರ್ಡ್ ಅಕೌಂಟೆಂಟ್‌ಗಳೇ ಮಾಡಿಕೊಂಡು ಇರಲು ಸಾಧ್ಯವಿಲ್ಲ. ಹೀಗಾಗಿ ಬಿಕಾಂ ಪದವೀಧರರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಬಿಕಾಂ ಪದವಿ ಮುಗಿಸಿ ಹೊರಬಂದವರ ಪೈಕಿ ಶೇ.5ರಿಂದ ಶೇ.10ರಷ್ಟು ಮಂದಿಗಷ್ಟೇ ಈ ಹಿಂದೆ ಉತ್ತಮ ಉದ್ಯೋಗ ಲಭಿಸುತ್ತಿತ್ತು. ಇತರರು ಉನ್ನತ ಶಿಕ್ಷಣ ಹಾಗೂ ವಿಶೇಷ ತರಬೇತಿ ಪಡೆದು ಬೇರೆಡೆಗೆ ಹೋಗುತ್ತಿದ್ದರು. ಆದರೆ ಈಗ ಬಿಕಾಂ ಪದವೀಧರರಿಗೆ ಬೇಡಿಕೆ ಸೃಷ್ಟಿಯಾಗಿದೆ. 15 ಸಾವಿರ ರು. ಸಂಬಳಕ್ಕೆ ಸಿಗುತ್ತಿದ್ದ ಬಿಕಾಂ ಪದವೀಧರರ ಸಂಬಳ ದಿಢೀರನೇ 20ಸಾವಿರಕ್ಕೆ ಏರಿದೆ. ಜಿಎಸ್‌ಟಿಯನ್ನು ಚೆನ್ನಾಗಿ ಬಲ್ಲವರಿಗೆ 30 ಸಾವಿರ ರು. ವರೆಗೂ ವೇತನ ಸಿಗುತ್ತಿದೆ ಎಂದು ಲೆಕ್ಕಪರಿಶೋಧಕರೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.