ಕೊತ್ತನೂರಲ್ಲಿ ಸೈಬರ್ ಕಳ್ಳರು; 10 ಲಕ್ಷಕ್ಕೂ ಹೆಚ್ಚು ಹಣ ಲೂಟಿ; 20 ಮಂದಿಯಿಂದ ದೂರು ದಾಖಲು

By Suvarna Web DeskFirst Published Jul 2, 2017, 4:38 PM IST
Highlights

ಭಾನುವಾರ ಬೆಳಗ್ಗೆಯಿಂದಲೇ ಸೈಬರ್ ಕ್ರೈಂ ಪೊಲೀಸ್ ವಿಭಾಗಕ್ಕೆ ದೂರುಗಳು ಬರಲು ಆರಂಭವಾಗಿದೆ. ಮಧ್ಯಾಹ್ನದಷ್ಟರಲ್ಲಿ 20ಕ್ಕೂ ಹೆಚ್ಚು ಸಂತ್ರಸ್ತರು ದೂರು ದಾಖಲಿಸಿದ್ದಾರೆ. ಕಳುವಾಗಿರುವ ಒಟ್ಟು ಹಣ 10 ಲಕ್ಷಕ್ಕೂ ಮೇಲ್ಪಟ್ಟಿದೆ.

ಬೆಂಗಳೂರು(ಜುಲೈ 02): ಒಂದೇ ಪ್ರದೇಶದಲ್ಲಿ ಎಟಿಎಂಗಳಿಂದ ಲಕ್ಷಾಂತರ ಹಣ ಲೂಟಿಯಾಗುವುದು ಸಣ್ಣ ವಿಷಯವೇ? ನಗರದ ಕೊತ್ತನೂರು ಮತ್ತು ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಕಳುವಾಗಿದೆ. 20 ಜನರು ಸೈಬರ್ ಕ್ರೈಮ್ ಪೊಲೀಸ್'ರಿಗೆ ದಾಖಲಿಸಿದ್ದಾರೆ. ಪಾಸ್'ವರ್ಡ್ ಹ್ಯಾಕ್ ಮಾಡಿ ನಗರದ ವಿವಿಧ ಎಟಿಎಂಗಳಿಂದ ಸೈಬರ್ ಕಳ್ಳರು ಹಣ ಡ್ರಾ ಮಾಡಿಕೊಂಡಿದ್ದಾರೆನ್ನಲಾಗಿದೆ. ನಿನ್ನೆ ತಡರಾತ್ರಿ ಕಳ್ಳರು ಈ ಕೈಚಳಕ ತೋರಿರುವುದು ಬೆಳಕಿಗೆ ಬಂದಿದೆ.

ಇಂದು ಭಾನುವಾರ ಬೆಳಗ್ಗೆಯಿಂದಲೇ ಸೈಬರ್ ಕ್ರೈಂ ಪೊಲೀಸ್ ವಿಭಾಗಕ್ಕೆ ದೂರುಗಳು ಬರಲು ಆರಂಭವಾಗಿದೆ. ಮಧ್ಯಾಹ್ನದಷ್ಟರಲ್ಲಿ 20ಕ್ಕೂ ಹೆಚ್ಚು ಸಂತ್ರಸ್ತರು ದೂರು ದಾಖಲಿಸಿದ್ದಾರೆ. ಕಳುವಾಗಿರುವ ಒಟ್ಟು ಹಣ 10 ಲಕ್ಷಕ್ಕೂ ಮೇಲ್ಪಟ್ಟಿದೆ.

click me!