ಬೆಂಗಳೂರಿನಲ್ಲಿ ಮತ್ತೆ ಪೊಲೀಸರ ರಿವಾಲ್ವರ್ ಸದ್ದು!: ಅತ್ಯಾಚಾರಿ ಆರೋಪಿ ಮೇಲೆ ಫೈರಿಂಗ್

Published : Mar 07, 2017, 10:16 PM ISTUpdated : Apr 11, 2018, 12:52 PM IST
ಬೆಂಗಳೂರಿನಲ್ಲಿ ಮತ್ತೆ ಪೊಲೀಸರ ರಿವಾಲ್ವರ್ ಸದ್ದು!: ಅತ್ಯಾಚಾರಿ ಆರೋಪಿ ಮೇಲೆ ಫೈರಿಂಗ್

ಸಾರಾಂಶ

ಬೆಂಗಳೂರಿನಲ್ಲಿ ಮತ್ತೆ ಪೊಲೀಸರ ರಿವಾಲ್ವರ್​ ಸದ್ದು ಮಾಡಿದೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದವನನ್ನು ಪೊಲೀಸರು ಹೆಡೆಮುರಿ ಕಟ್ಟಿ ಆಸ್ಪತ್ರೆ ಸೇರಿಸಿದ್ದಾರೆ. ಹಾಗಿದ್ದರೆ ಆ ಖರ್ತನಾಕ್ ಕಾಮುಕ ಯಾರು? ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೇ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು(ಮಾ.08): ಬೆಂಗಳೂರಿನಲ್ಲಿ ಮತ್ತೆ ಪೊಲೀಸರ ರಿವಾಲ್ವರ್​ ಸದ್ದು ಮಾಡಿದೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದವನನ್ನು ಪೊಲೀಸರು ಹೆಡೆಮುರಿ ಕಟ್ಟಿ ಆಸ್ಪತ್ರೆ ಸೇರಿಸಿದ್ದಾರೆ. ಹಾಗಿದ್ದರೆ ಆ ಖರ್ತನಾಕ್ ಕಾಮುಕ ಯಾರು? ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೇ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

1 ವಾರ.. 3 ಶೂಟೌಟ್: ಆತ್ಯಾಚಾರಿ ಆರೋಪಿಯ ಮೇಲೆ ಫೈರಿಂಗ್

ಕಳೆದ ಒಂದು ವಾರದೊಳಗೆ ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಂದ 3ನೇ ‌ಶೂಟೌಟ್ ನಡೆದಿದೆ. ಇದೀಗ HAL ಮತ್ತು ಬೊಮ್ಮನಹಳ್ಳಿ ಪೊಲೀಸರು ಆತ್ಮರಕ್ಷಣೆಗಾಗಿ ಆತ್ಯಾಚಾರ ಆರೋಪಿ ಶಿವರಾಮರೆಡ್ಡಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಶಿವರಾಮ ರೆಡ್ಡಿ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಮಹಿಳಾ ಪಿಜಿಯೊಂದಕ್ಕೆ ನುಗ್ಗಿ ಚಾಕು ತೋರಿಸಿದ್ದ. ಅಲ್ಲದೇ ಯುವತಿಯರ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ಹೀಗಾಗಿ, ಅರೋಪಿ ರೆಡ್ಡಿಯನ್ನ ಸೆರೆ ಹಿಡಿಯಲು ಹೆಚ್ ಎ ಎಲ್ ಇನ್ಸ್​​​ಪೆಕ್ಟರ್ ಸಾದಿಕ್ ಪಾಷ ಮತ್ತು ಬೊಮ್ಮನಹಳ್ಳಿ ಇನ್ಸ್ ಪೆಕ್ಟರ್ ಮಂಜುನಾಥ್ ಮತ್ತವರ ತಂಡ ನಿನ್ನೆ ಸಂಜೆ ಕಾರ್ಯಚರಣೆಗೆ ಮುಂದಾಗಿತ್ತು. ಈ ಟೈಮ್ನಲ್ಲಿ ಅರೋಪಿ ಶಿವರಾಮ ರೆಡ್ಡಿ ಇನ್ಸ್​​​​ಪೆಕ್ಟರ್​ ಸಾಧಿಕ್ ಗೆ ಡ್ರ್ಯಾಗರ್ ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಜೊತೆಯಲಿದ್ದ  ಮತ್ತೊಬ್ಬ ಇನ್ಸ್​​​​ಪೆಕ್ಟರ್ ಮಂಜುನಾಥ್, ಆತ್ಮರಕ್ಷಣೆಗೆ ತಮ್ಮ ಬಳಿಯಿದ್ದ ರಿವಾಲ್ವರ್​​​​ನಿಂದ ಅರೋಪಿಯ ಕಾಲುಗಳಿಗೆ ಎರಡು ಸುತ್ತು ಫೈರಿಂಗ್ ಮಾಡಿ ಅರೋಪೀನ ವಶಕ್ಕೆ ಪಡೆದಿದ್ದಾರೆ.

ಇನ್ನು ಫೈರಿಂಗ್'​​ನಲ್ಲಿ ಇನ್ಸ್​​​ಪೆಕ್ಟರ್​ಗಳಾದ ಸಾದಿಕ್ ಪಾಷ, ಮಂಜುನಾಥ್ ಮತ್ತು ಸಬ್ ಇನ್ಸ್​​​​ಪೆಕ್ಟರ್​ ಅನಂದ್​​ಗೆ ಕೈಗಳ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಸದ್ಯ ಮಾರತಹಳ್ಳಿಯ ಸಕ್ರ ಆಸ್ಪತ್ರೆಯಲ್ಲಿ ಪೊಲೀಸ್ ಅಧಿಕಾರಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಅರೋಪಿ ಶಿವರಾಮರೆಡ್ಡಿ ರಾಬರಿ ಪ್ರಕರಣದಲ್ಲಿ HSR ಲೇಔಟ್ ಪೊಲೀಸರು ಕಳೆದ ತಿಂಗಳುಗಳ ಹಿಂದೆ ಬಂಧಿಸಿ ಜೈಲಿಗೆ ಅಟ್ಟಿದ್ದರು. ಆದ್ರೆ, ರೆಡ್ಡಿ ಎರಡು ತಿಂಗಳ ಹಿಂದೆ ಜೈಲಿನಿಂದ ಹೊರಬಂದು, ಮತ್ತದೇ ಹಳೆ ಚಾಳಿಯನ್ನ ಶುರು ಮಾಡಿದ್ದರು.. ಅಲ್ದೆ ಪ್ರೇಮಿಗಳು ಪಾರ್ಕ್ ನಲ್ಲಿ ಕುಳಿತಿರುವುದನ್ನ ವೀಡಿಯೊ ಮಾಡಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ.

ಒಟ್ನಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮನೆ ದರೋಡೆ, ಕೊಲೆ ಯತ್ನ ಹೀಗೆ ಸಾಕಷ್ಟು ಪ್ರಕರಣಗಳಲ್ಲಿ ವಾಟೆಂಡ್ ಆಗಿದ್ದ ಅರೋಪಿ ಶಿವರಾಮರೆಡ್ಡಿಯನ್ನು ಪೊಲೀಸರು ಅಂದರ್ ಮಾಡಿದ್ದಾರೆ. ಇತ್ತೀಚೆಗೆ ಸೋಲದೇವನಹಳ್ಳಿ ಪೊಲೀಸರು ಮತ್ತು ರಾಜಗೋಪಾಲನಗರ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?