
ಚಿಕ್ಕಬಳ್ಳಾಪುರ (ಮಾ.08): ಬೈಕ್ ಓಡಿಸುವ ಮಹಿಳೆಯರನ್ನು ನೋಡಿದ್ದೀರಿ. ಕಾರ್ ಡ್ರೈವ್ ಮಾಡುವುದು ಕೂಡಾ ಸಾಮಾನ್ಯ. ಕೆಲ ಮಹಿಳೆಯರು ಪೈಲಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಮಹಿಳೆ ತಾನು ಪುರುಷನಗಿಂತ ಏನೇನು ಕಮ್ಮಿಯಿಲ್ಲ ಅಂತ ಟ್ರ್ಯಾಕ್ಟರ್'ನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಳೆ. ಮಹಿಳಾ ದಿನಾಚರಣೆಯ ವಿಶೇಷದಲ್ಲಿ ಚಿಕ್ಕಬಳ್ಳಾಪುರದ ಸಾಹಸಿ ಮಹಿಳೆಯ ವರದಿ ಇಲ್ಲಿದೆ.
ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದರೆ ತೋಟದಲ್ಲಿ ಕೆಲಸ ಮುಗಿಯುವವರೆಗೂ ಚಂದ್ರಕಲಾ ಎಂಬ ಸಾಹಸಿ ಮಹಿಳೆ ನಿಲ್ಲಿಸುವುದೇ ಇಲ್ಲ. ಎಲ್ಲಾ ವಾಹನಗಳಿಗಿಂತ ಕೃಷಿಗಾಗಿ ಕೆಲಸ ಮಾಡುವ ಈ ಟ್ಯ್ರಾಕ್ಟರ್ ಕೆಲಸ ತುಂಬಾನೇ ಕಷ್ಟ. ಆದರೆ, ಚಂದ್ರಕಲಾ ಮಾತ್ರ ಸರಾಗವಾಗಿ ಯಾರ ಸಹಾಯವಿಲ್ಲದೆಯೇ ಕೆಲಸ ಮುಗಿಸುತ್ತಾಳೆ.
ಚಂದ್ರಕಲಾ, ಚಿಕ್ಕಬಳ್ಳಾಪುರ ತಾಲೂಕಿನ ತಿರ್ನಹಳ್ಳಿ ಗ್ರಾಮದ ನಿವಾಸಿ. ಮೋಹನ್ ಬಾಬು ೆನ್ನುವುವರ ಪತ್ನಿಯಾದ ಈಕೆ ಪತಿಗೆ ಸಹಾಯ ಆಗಲಿ ಅಂತ ಡ್ರೈವಿಂಗ್ ಕಲಿತಿದ್ದಾರೆ. ತಮಗಿರುವ 4 ಎಕರೆ ದ್ರಾಕ್ಷಿ ತೋಟಕ್ಕೆ ಔಷಧಿ ಸಿಂಪಡಿಸುವ ಕೆಲಸ ಈಕೆಗೆ ನೀರು ಕುಡಿದಷ್ಟೇ ಸಲೀಸು. ಇನ್ನು ಯಾವುದೇ ಕೆಲಸದಲ್ಲೂ ಮಹಿಳೆಯರು ಯಾರಿಗಿಂತಲೂ ಕಮ್ಮಿ ಇಲ್ಲ. ಇದನ್ನ ನನ್ನ ಪತ್ನಿ ಚಂದ್ರಕಲಾ ಸಾಬೀತು ಮಾಡಿದ್ದಾರೆ ಅಂತ ಹಾಡಿ ಹೊಗಳಿದ್ದಾರೆ ಪತಿ ಮೋಹನ್ ಬಾಬು.
ಏನೇ ಆದರೂ ಗ್ರಾಮೀಣ ಪ್ರದೇಶದಲ್ಲೂ ಜನರ ಜೀವನ ಶೈಲಿ ಬದಲಾಗಿದೆ. ಆದರೂ ಈ ಗಟ್ಟಿಗತ್ತಿ ಪುರುಷನಿಗೆ ಜವಾಬು ಕೊಡಬಲ್ಲೆ ಅಂತ ತೋರಿಸಿ ಕೊಟ್ಟಿದ್ದಾಳೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಸಾಹಸಿ ಮಹಿಳೆ ಚಂದ್ರಕಲಾ ಅವರಿಗೂ ನಮ್ಮ ಕಡೆಯಿಂದ ಧ್ಯಾಂಕ್ಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.