ಕಟ್ಟಡದಲ್ಲಿ ಅವಿತಿದ್ದ ಉಗ್ರರ ಮೇಲೆ ಫೈರಿಂಗ್: ಉತ್ತರ ಪ್ರದೇಶದಲ್ಲೆಡೆ ಹೈ ಅಲರ್ಟ್

By Suvarna Web DeskFirst Published Mar 7, 2017, 9:45 PM IST
Highlights

ಇವತ್ತು ಉತ್ತರ ಪ್ರದೇಶದಲ್ಲಿ ಕೊನೆ ಹಂತದ ಮತದಾನ ನಡೆಯಲಿದೆ. ಆದರೆ ಮತದಾನಕ್ಕೂ ಮುಂಚೆ ಗುಂಡಿನ ಸದ್ದು ಮೊಳಗಿದೆ. ಲಖನೌ ಥಾಕೂರ್‌ ಗಂಜ್‌'‌ನಲ್ಲಿ ಭಯೋತ್ಪಾದನಾ ನಿಗ್ರಹ ದಳ ಹಾಗೂ ಉಗ್ರನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ನಿರಂತರವಾಗಿ ನಡೆದ ಆಪರೇಷನ್​ ಟೆರರ್​ ಮುಕ್ತಾಯಗೊಂಡಿದ್ದ ಓರ್ವ ಶಂಕಿತನನ್ನು ಹತ್ಯೆ ಮಾಡಲಾಗಿದೆ.

ಉತ್ತರಪ್ರದೇಶ(ಮಾ.08): ಇವತ್ತು ಉತ್ತರ ಪ್ರದೇಶದಲ್ಲಿ ಕೊನೆ ಹಂತದ ಮತದಾನ ನಡೆಯಲಿದೆ. ಆದರೆ ಮತದಾನಕ್ಕೂ ಮುಂಚೆ ಗುಂಡಿನ ಸದ್ದು ಮೊಳಗಿದೆ. ಲಖನೌ ಥಾಕೂರ್‌ ಗಂಜ್‌'‌ನಲ್ಲಿ ಭಯೋತ್ಪಾದನಾ ನಿಗ್ರಹ ದಳ ಹಾಗೂ ಉಗ್ರನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ನಿರಂತರವಾಗಿ ನಡೆದ ಆಪರೇಷನ್​ ಟೆರರ್​ ಮುಕ್ತಾಯಗೊಂಡಿದ್ದ ಓರ್ವ ಶಂಕಿತನನ್ನು ಹತ್ಯೆ ಮಾಡಲಾಗಿದೆ.

ಒಂದ್ ಕಡೆ ಉತ್ತರ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರುತ್ತಿದ್ರೆ ಇನ್ನೊಂದೆಡೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಲಖನೌ ಥಾಕೂರ್‌ಗಂಜ್‌‌ನಲ್ಲಿ ಭಯೋತ್ಪಾದನಾ ನಿಗ್ರಹ ದಳ ಹಾಗೂ ಉಗ್ರನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಕಟ್ಟಡದಲ್ಲಿ ಅವಿತಿದ್ದ ಉಗ್ರನಿಗಾಗಿ ನಿರಂತರ ಕಾರ್ಯಾಚರಣೆ ನಡೆದಿದ್ದು ಶಂಕಿತ ಐಸಿಸ್ ಭಯೋತ್ಪಾದಕ ಸೈಫುಲ್​ನನ್ನು ಹೊಡೆದುರುಳಿಸಲಾಗಿದೆ.

Latest Videos

ಇನ್ನು ಹತ್ಯೆಯಾದ ಸೈಫುಲ್​ ಐಸಿಸ್​ ಜೊತೆ ನಂಟು ಹೊಂದಿದ್ದ ಅಂತ ಶಂಕಿಸಲಾಗಿದೆ. ಅಲ್ಲದೆ ಈತ ಖಂಡಾವಾ ರೈಲು ಸ್ಫೋಟದಲ್ಲಿ ಭಾಗಿಯಾಗಿದ್ದ ಎಂದೂ ಹೇಳಲಾಗಿದೆ. ಕಟ್ಟಡದಲ್ಲಿ ಮೂವರು ಭಯೋತ್ಪಾದಕರು ಅಡಗಿ ಕುಳಿತಿರುವ ಮಾಹಿತಿ ಇದ್ದು ಎಟಿಎಸ್​ ಕಮಾಂಡೋಗಳು ಕಟ್ಟಡ ಸುತ್ತುವರೆದಿದ್ದಾರೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಪ್ರದೇಶದಲ್ಲಿ ಹೈಅಲರ್ಟ್​ ಘೋಷಣೆ ಮಾಡಲಾಗಿದೆ.

ಒಟ್ನಲ್ಲಿ ಉತ್ತರ ಪ್ರದೇಶದ ಕಡೆಯ ಹಂತದ ಮತದಾನದ ವೇಳೆ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಇವತ್ತಿನ ಮತದಾನದ ಮೇಲೆ ಉಗ್ರರ ಕರಿನೆರಳು ಜನರನ್ನು ಬೆಚ್ಚಿಬೀಳಿಸಿದೆ.

 

click me!