
ಬೆಂಗಳೂರು( ಮಾ. 07) ಸೋಸಲೆ ಮಠದ ಪೀಠಾಧಿಪತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ವ್ಯಾಸರಾಯ ಮಠದ 41ನೇ ಪೀಠಾಧ್ಯಕ್ಷ ವಿದ್ಯಾಶ್ರೀಶ ಸ್ವಾಮೀಜಿ ಮೇಲೆ ಮೂಲ ಪ್ರತಿಮೆ ಬದಲು ಮಾಡಿದ ಆರೋಪ ಕೇಳಿ ಬಂದಿದ್ದು ಮಠದ ಭಕ್ತರು ಪೊಲೀಸರಿಗೆ ದೂರು ನೀಡಿದ್ದಾರೆ
ಆಂಧ್ರಪ್ರದೇಶದ ಅನಂತಪುರದಲ್ಲಿ ವಿದ್ಯಾ ಶ್ರೀಶ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಠದ ವೆಬ್‌ಸೈಟ್ ನಲ್ಲಿ ಪ್ರಕಟವಾದ ಪೋಟೋ ಮೂಲ ವಿಗ್ರಹಕ್ಕೂ ವ್ಯತ್ಯಾಸ ಇದೆ. ಮೂಲ ರೂಪದ ಡೂಬ್ಲಿಕೇಟ್ ವಿಗ್ರಹ ಮಾಡಿಟ್ಟಿರೋ ಶಂಕೆ ಇದೆ. ಸದಾ ಕಾಲ ಸ್ವಾಮೀಜಿ ಬಳಿಯೇ ಇರೋ ಮೂಲ ವಿಗ್ರಹಗಳು ಬದಲಾಗಿರಬಹುದು ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಕೋಡಿಮಠದ ಶ್ರೀಗಳು ಹೇಳಿದ ನಾಡಿನ ಭವಿಷ್ಯ
ಮೂಲ ವಿಗ್ರಹ ಬದಲಾವಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ 40 ನೇ ಪೀಠಾಧಿಪತಿ ವಿದ್ಯಾಮನೋಹರ ತೀರ್ಥ ಸ್ವಾಮೀಜಿ. ಮೂಲ ವಿಗ್ರಹ ಪರಿಶೀಲನೆಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ. ವಿಗ್ರಹ ಬದಲಾಣೆ ಬಗ್ಗೆ ಮೌನ ಮುರಿಯುವಂತೆ ಹಾಲಿ ಸ್ವಾಮೀಜಿಯನ್ನು ಕೇಳಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.