ಇಟಲಿಯಲ್ಲಿ ಸುಹಾಸಿನಿ ಪುತ್ರನಿಗೆ ಆಗಿದ್ದೇನು?

Published : Aug 30, 2017, 06:39 PM ISTUpdated : Apr 11, 2018, 01:08 PM IST
ಇಟಲಿಯಲ್ಲಿ ಸುಹಾಸಿನಿ ಪುತ್ರನಿಗೆ ಆಗಿದ್ದೇನು?

ಸಾರಾಂಶ

ಬಹುಬಾಷಾ ನಟಿ ಸುಹಾಸಿನಿ ಅವರ ಪುತ್ರ ನಂದನ್ ಉನ್ನತ ವ್ಯಾಸಂಗಕ್ಕಾಗಿ ಇಟಲಿಗೆ ತೆರೆಳಿದ್ದರು. ಅಲ್ಲಿ ನಂದನ್ ಕಳ್ಳರ ಕೈಗೆ ಸಿಕ್ಕಿ ದರೋಡೆಗೆ ಒಳಗಾಗಿದ್ದಾರೆ.  

ಬೆಂಗಳೂರು (ಆ.30):  ಬಹುಬಾಷಾ ನಟಿ ಸುಹಾಸಿನಿ ಅವರ ಪುತ್ರ ನಂದನ್ ಉನ್ನತ ವ್ಯಾಸಂಗಕ್ಕಾಗಿ ಇಟಲಿಗೆ ತೆರೆಳಿದ್ದರು. ಅಲ್ಲಿ ನಂದನ್ ಕಳ್ಳರ ಕೈಗೆ ಸಿಕ್ಕಿ ದರೋಡೆಗೆ ಒಳಗಾಗಿದ್ದಾರೆ.  

ಮಗನಿಗೆ ಸಹಾಯ ಮಾಡುವಂತೆ ನಟಿ ಸುಹಾಸಿನಿ ಟ್ವಿಟ್ಟರ್ 'ನಲ್ಲಿ  ಪರಿಪರಿಯಾಗಿ  ಬೇಡಿಕೊಂಡಿರೋ ಘಟನೆ ಆ. 27 ರಂದು ನಡೆದಿದೆ. ನಂದನ್  ಇಟಲಿಯ ವೆನಿಸ್ ನಗರದಿಂದ ಬೆಲ್ಲುನೋ ನಗರಕ್ಕೆ ತೆರೆಳುವಾಗ ಈ ಘಟನೆ ನಡೆದಿದೆ.  ರಾತ್ರಿ ಸುಮಾರು 7 ಗಂಟೆಗೆ ಬೆಲ್ಲುನೋ ನಗರದಲ್ಲಿ ದರೋಡೆಕೋರರು ನಂದನ್ ಹತ್ರ ಇದ್ದ ಹಣ,ಲಗ್ಗೇಜ್ ಎಲ್ಲವನ್ನ ದೋಚಿದ್ದಾರೆ . ಕೂಡಲೆ ತನ್ನ ಹತ್ತಿರವಿದ್ದ ಮೊಬೈಲ್ ನಿಂದ ತಾಯಿ ಸುಹಾಸಿನಿ ಅವರಿಗೆ ನಡೆದ ಅಷ್ಟು ವಿಚಾರವನ್ನ ನಂದನ್ ಹೇಳಿಕೊಂಡಿದ್ದಾನೆ. ಆ ಸಂರ್ದಭದಲ್ಲಿ ಸುಹಾಸಿನಿ ಏನ್ ಮಾಡ್ಬೇಕು ಎಂದು ತೋಚದೆ, ತಮ್ಮ ಟ್ವಿಟರ್ ಪೇಜ್ ನಲ್ಲಿ ಪುತ್ರ ನಂದನ್ ಗೆ ಸಹಾಯ ಮಾಡಿ ಅಂತ ಬರೆದುಕೊಂಡಿದ್ದಾರೆ.

ಪುತ್ರ ನಂದನ್ ಬಳಿ ದರೋಡೆ ಆಗಿದೆ. ಬೆಲ್ಲುನೊದಲ್ಲಿ ದುಷ್ಕರ್ಮಿಗಳು ದೋಚಿದ್ದಾರೆ. ಹೀಗಾಗಿ, ಏರ್ ಪೋರ್ಟ್‌ಗೆ ತಲುಪಲು ಕಷ್ಟಕರವಾಗಿದೆ. ಯಾರಾದರೂ ವೆನಿಸ್ ವಿಮಾನ ನಿಲ್ದಾಣದ ಸಮೀಪವಿದ್ದೀರಾ? ಅವನು ವಿಮಾನ ನಿಲ್ದಾಣವನ್ನು ತಲುಪಬೇಕಾಗಿದ್ದು, ಸಹಾಯ ಮಾಡಿ. ಭಾರತೀಯರಾರು ಸುಮ್ಮನೆ ಕಷ್ಟ ಸುಖ ವಿಚಾರಿಸಲು ಫೋನ್ ಮಾಡಬೇಡಿ. ಮಗನ ಫೋನ್ ಬ್ಯಾಟರಿ ಚಾರ್ಜಿಂಗ್ ಕಡಿಮೆ ಇದೆ. ಪದೇ ಪದೇ ಫೋನ್ ಮಾಡಿದ್ರೆ ಆತ ಸಂಪರ್ಕ ಸಿಗುವುದು ಕಷ್ಟ  ಅಂತ  ಸುಹಾಸಿನ  ಟ್ವೀಟ್ ಮಾಡಿ ಸಹಾಯ ಕೇಳಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಮೋಜಿಗಾಗಿ ನಂದನ್ ಗೆ ಕರೆ ಮಾಡಿದ್ದರಿಂದ ಈಗಾಗಲೇ ತೊಂದರೆಯಲ್ಲಿರುವವರಿಗೆ ಮತ್ತೆ ತೊಂದರೆ ನೀಡಬೇಡಿ ಎಂದು ಅವರು ಈ ಬಗ್ಗೆ ಟ್ವೀಟ್ ಮಾಡಿದ್ದರು.

ಸುಹಾಸಿನಿ ಟ್ವೀಟ್‌ಗೆ  ಸ್ಪಂದನೆ ಲಭಿಸಿದ್ದು ಅವರ ಪುತ್ರನಿಗೆ ನೆರವು ಲಭಿಸಿದೆ.  ಸಹಾಯ ಮಾಡಿದವರಿಗೆ ಸುಹಾಸಿನಿ ಕೃತಜ್ಞತೆ ಸಲ್ಲಿಸಿದ್ದಾರೆ.ತಮ್ಮ ಪುತ್ರ ಸುರಕ್ಷಿತವಾಗಿದ್ದಾರೆ. ಹೊಟೇಲ್ವೊಂದರಲ್ಲಿ ತಂಗಿದ್ದಾರೆ ಎಂದು ಸುಹಾಸಿನಿ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಸೋಷಿಯಲ್ ಮೀಡಿಯಾದಿಂದಲೂ ಕೆಲವೊಮ್ಮೆ ಸಹಾಯ ಸಿಗುತ್ತೆ ಎನ್ನುವುದಕ್ಕೆ ಸುಹಾಸಿನಿ ಮಣಿರತ್ನಂ ಪುತ್ರನ ಈ ಘಟನೆಯೇ ಸಾಕ್ಷಿ ಅನ್ನಬಹುದು.

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?