
ನವದೆಹಲಿ: 2022ರ ವೇಳೆಗೆ ದೇಶದ ರೈತರ ಆದಾಯ ದ್ವಿಗುಣವಾಗಬೇಕಾದರೆ ಬೆಳೆ ವೈವಿಧ್ಯತೆ ಹಾಗೂ ಕುಲಾಂತರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಅಗತ್ಯವಿದೆ ಎಂದು ನೀತಿ ಆಯೋಗ ಅಧ್ಯಕ್ಷ ಅರವಿಂದ್ ಪನಗಾರಿಯಾ ಹೇಳಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸರ್ಕಾರ ಏನೇನು ಮಾಡಬಹುದು ಎಂಬುವುದರ ಬಗ್ಗೆ 3 ವರ್ಷದ ಕಾರ್ಯನೀತಿಯನ್ನು, ನೀತಿ ಆಯೋಗವು ಕಳೆದ ವಾರ ಸಿದ್ಧಪಡಿಸಿದೆ.
ಕುಲಾಂತರಿ ತಳಿಗಳ ಪರ-ವಿರೋಧ ಚರ್ಚೆಯನ್ನು ನಡೆಸಿದ ಬಳಿಕ ನೀತಿ ಆಯೋಗವು ಕುಲಾಂತರಿ ತಳಿಗಳ ಪರವಾಗಿ ನಿರ್ಧಾರ ತೆಗೆದುಕೊಂಡಿದೆಯೆಂದು ಪನಗಾರಿಯಾ ಹೇಳಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಭಾರತದಲ್ಲಿ ಬಿಟಿ ಹತ್ತಿ ಹೊರತು ಪಡಿಸಿ ಬೇರೆ ಯಾವುದೇ ಕುಲಾಂತರಿ ತಳಿಗಳಿಗೆ ಅವಕಾಶವಿಲ್ಲ. ಕುಲಾಂತರಿ ಸಾಸಿವೆಗಳಿಗೆ ಅನುವು ಮಾಡಿಕೊಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸರ್ಕಾರದ ಅನುಮತಿಗಾಗಿ ಬಾಕಿಯಿದೆ.
ಜತೆಗೆ, ಬೆಳೆಯಲ್ಲಿ ವೈವಿಧ್ಯತೆ, ಪಶುಸಂಗೋಪನೆ, ಮೀನುಗಾರಿಕೆ, ಬೆಳೆಗೆ ಉತ್ತಮ ದರಗಳು ಸಿಗುವಂತಾಗಲು ಪರಿಣಾಮಕಾರಿ ಮಾರ್ಕೆಟಿಂಗ್, ಮುಂತಾದವುಗಳ ಬಗ್ಗೆಯೂ ನೀತಿ ಆಯೋಗವು ಹಲವು ಮಹತ್ವದ ಕ್ರಮಗಳನ್ನು ಸೂಚಿಸಿದೆ.
ಕನಿಷ್ಠ ಬೆಂಬಲ ದರ (MSP) ಗಳಿಗೆ ಪರ್ಯಾಯವಾಗಿ ಕೊರತೆ ದರದ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆಯೂ ನೀತಿ ಆಯೋಗ ಚಿಂತನೆ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.