ಕ್ಲೈಮ್ಯಾಕ್ಸ್ ಹಂತಕ್ಕೆ ಕೆಪಿಸಿಸಿ ಗದ್ದುಗೆ ಗುದ್ದಾಟ: ತಿಂಗಳಾಂತ್ಯದೊಳಗೆ ಕೆಪಿಸಿಸಿಗೆ ನೂತನ ಸಾರಥಿ

Published : May 10, 2017, 03:55 AM ISTUpdated : Apr 11, 2018, 12:47 PM IST
ಕ್ಲೈಮ್ಯಾಕ್ಸ್ ಹಂತಕ್ಕೆ  ಕೆಪಿಸಿಸಿ ಗದ್ದುಗೆ ಗುದ್ದಾಟ: ತಿಂಗಳಾಂತ್ಯದೊಳಗೆ ಕೆಪಿಸಿಸಿಗೆ ನೂತನ ಸಾರಥಿ

ಸಾರಾಂಶ

ಕೆಪಿಸಿಸಿ ಗದ್ದುಗೆ ಗುದ್ದಾಟ ಕೊನೆಯ ಹಂತ ತಲುಪಿದೆ. ತಿಂಗಳಾಂತ್ಯದೊಳಗೆ ಕೆಪಿಸಿಸಿಗೆ ನೂತನ ಸಾರಥಿ  ನೇಮಕವಾಗಲಿದೆ.  ನೂತನ ಅಧ್ಯಕ್ಷರ ಆಯ್ಕೆ ವಿಚಾರ ಮೇ ೨೦ರ ಒಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ ಅಧ್ಯಕ್ಷರು ಯಾರಾಗ್ಬೇಕು ಅನ್ನೋದರ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರಾಜ್ಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಅಭಿಪ್ರಾಯದ ವರದಿಯನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೆ ಇದೇ ೨೦ ರೊಳಗಾಗಿ ನೀಡಬೇಕು. ವರದಿ ಬಗ್ಗೆ ಸಿಎಂ ಸಿದ್ದರಾಮಯ್ಯರ ಅಭಿಪ್ರಾಯ ಕೇಳಿ ನೂತನ ಅಧ್ಯಕ್ಷರನ್ನ ಫೈನಲ್ ಮಾಡಲಾಗುತ್ತೆ ಎನ್ನಲಾಗಿದೆ. ಬಳಿಕ ಮೇ ೨೨ ಕ್ಕೆ ಮತ್ತೇ ಉಸ್ತುವಾರಿ ವೇಣುಗೋಪಾಲ ಬೆಂಗಳೂರಿಗೆ ಆಗಮಿಸಲಿದ್ದು, ಆ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು(ಮೇ.19): ಕೊನೆಗೂ ಕೆಪಿಸಿಸಿ ಗದ್ದುಗೆ ಗುದ್ದಾಟಕ್ಕೆ ತೆರೆ ಬೀಳುವ ಕಾಲ ಸನ್ನಿಹಿತವಾಗಿದೆ. ಈ ತಿಂಗಳಾಂತ್ಯದೊಳಗೆ ಕೆಪಿಸಿಸಿಗೆ ನೂತನ ಸಾರಥಿ ನೇಮಕವಾಗಲಿದ್ದಾರೆ. ಹಾಗಾದ್ರೆ ಯಾರಾಗ್ಬಹುದು ಕೈ ಪಕ್ಷದ ಅಧ್ಯಕ್ಷ ? ಈ ಕುರಿತಾದ ವರದಿ ಇಲ್ಲಿದೆ.

ಮೇ ೨೨ ರ ಬಳಿಕ  ಹೆಸರು ಘೋಷಣೆ

ಕೆಪಿಸಿಸಿ ಗದ್ದುಗೆ ಗುದ್ದಾಟ ಕೊನೆಯ ಹಂತ ತಲುಪಿದೆ. ತಿಂಗಳಾಂತ್ಯದೊಳಗೆ ಕೆಪಿಸಿಸಿಗೆ ನೂತನ ಸಾರಥಿ  ನೇಮಕವಾಗಲಿದೆ.  ನೂತನ ಅಧ್ಯಕ್ಷರ ಆಯ್ಕೆ ವಿಚಾರ ಮೇ ೨೦ರ ಒಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ ಅಧ್ಯಕ್ಷರು ಯಾರಾಗ್ಬೇಕು ಅನ್ನೋದರ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರಾಜ್ಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಸಂಗ್ರಹಿಸಿದ ಅಭಿಪ್ರಾಯದ ವರದಿಯನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೆ ಇದೇ ೨೦ ರೊಳಗಾಗಿ ನೀಡಬೇಕು. ವರದಿ ಬಗ್ಗೆ ಸಿಎಂ ಸಿದ್ದರಾಮಯ್ಯರ ಅಭಿಪ್ರಾಯ ಕೇಳಿ ನೂತನ ಅಧ್ಯಕ್ಷರನ್ನ ಫೈನಲ್ ಮಾಡಲಾಗುತ್ತೆ ಎನ್ನಲಾಗಿದೆ. ಬಳಿಕ ಮೇ ೨೨ ಕ್ಕೆ ಮತ್ತೇ ಉಸ್ತುವಾರಿ ವೇಣುಗೋಪಾಲ ಬೆಂಗಳೂರಿಗೆ ಆಗಮಿಸಲಿದ್ದು, ಆ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

೨೧ ಜಿಲ್ಲೆಯ ಅಧ್ಯಕ್ಷರ ಒಲವು ಡಿ ಕೆ ಶಿವಕುಮಾರ್ ಪರ  ಇದ್ದು, ಮಾಜಿ ಸಚಿವ ಎಸ್. ಆರ್ ಪಾಟೀಲ್ ಹಾಗೂ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಪರ 9 ಜಿಲ್ಲೆಯ ಅಧ್ಯಕ್ಷರು ಹಾಗೂ ಹಿರಿಯ ಮುಖಂಡರ ಒಲವು ಇದೆ ಎನ್ನಲಾಗಿದೆ. ಆದ್ರೆ ಅಂತಿಮ ತೀರ್ಮಾನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕೈಯಲ್ಲಿದ್ದು, ಹೆಸರು ಅಂತಿಮಗೊಳಿಸುವಾಗ ಸಿದ್ದರಾಮಯ್ಯ ನೀಡುವ ಸಲಹೆಗೆ ಮನ್ನಣೆ ನೀಡುವ ಸಾಧ್ಯತೆಯಿದೆ.

ಬಹುತೇಕ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸಚಿವ ಡಿ ಕೆ ಶಿವಕುಮಾರ್ ಪರ ವೇಣುಗೋಪಾಲ ಬಳಿ ಲಾಬಿ ಮಾಡಿರಬಹುದು. ಆದರೆ ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಡಿಕೆಶಿ ಬಗ್ಗೆ‌ ವಿರೋಧವಿಲ್ಲದಿದ್ದರೂ, ಉತ್ತರ ಕರ್ನಾಟಕ ಭಾಗಕ್ಕೂ ಆಧ್ಯತೆ ನೀಡಬೇಕಿರುವ ಹಿನ್ನಲೆಯಲ್ಲಿ ಎಂ ಬಿ ಪಾಟೀಲ್ ಗೆ ಅಧ್ಯಕ್ಷ ಸ್ಥಾನ ಸಿಗುವಂತೆ ನೋಡಿಕೊಳ್ಳಬಹುದು. ಆದ್ರೆ ಪಾಟೀಲ್ ಸಚಿವ ಸ್ಥಾನ ಬಿಟ್ಟು ಕೊಡವ ಬದಲು ಎರಡು ಹುದ್ದೆಗಳಲ್ಲಿ ಮುಂದೊರೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ, ಡಿಕೆಶಿ ಹಾಗೂ ಪರಮೇಶ್ವರ್ ಅಧ್ಯಕ್ಷ ಸ್ಥಾನ ನೀಡೋದಾದ್ರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಇರೋದಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗೆ ಒಂದು ಸ್ಪಷ್ಟ ಚಿತ್ರಣ ಸಿಗಬೇಕಾಕಾದರೆ ಇನ್ನೂ ೧೫ ದಿನ ಕಾಯಲೇಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದನದಲ್ಲಿ ಸಿದ್ದು vs ಬೆಲ್ಲದ್‌ ಒಳಮೀಸಲು ಹೆಚ್ಚಳ ಜಟಾಪಟಿ! ಯತ್ನಾಳ್‌ಗೆ ಸಿಎಂ ಸಂವಿಧಾನ ಪಾಠ
ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!