ತುಂಗಾ ಆರತಿ, ಈ ಹಾಡು ಕೇಳಿದರೆ ನೀ ಮೈ ಮರೆಯುತಿ..

By Web DeskFirst Published Sep 3, 2018, 10:27 PM IST
Highlights

ಗಂಗಾ ಆರತಿ ಕೇಳಿದ್ದೇವೆ, ಆದರೆ ಇದು ನಮ್ಮದೇ ರಾಜ್ಯದ ಜೀವನದಿಗೆ ಮಾಡಿರುವ ತುಂಗಾ ನದಿಗೆ ಮಾಡಿರುವ ಆರತಿ. ಹೌದು ನಮ್ಮದೇ ರಾಜ್ಯದ ಪ್ರತಿಭೆಗಳು ಮಾಡಿರುವ ಈ ಕಿವಿಗೆ ಇಂಪು ನೀಡುವ ಕಾರ್ಯಕ್ಕೆ ಒಂದು ಮೆಚ್ಚುಗೆ ನೀಡಲೇಬೇಕು.

ಶಿವಮೊಗ್ಗ[ಸೆ.3]  ನದಿಗಳಿಗೆ ಪೂಜ್ಯನೀಯ ಸ್ಥಾನ ನೀಡಿಕೊಂಡು ಬಂದಿರುವುದು ನಮ್ಮ ಪರಂಪರೆ. ಜಲಾಶಯಗಳು ತುಂಬಿದಾಗ ಪೂಜೆ ಮಾಡಿ ಬಾಗಿನ ಅರ್ಪಿಸುತ್ತೇವೆ. ಇದರ ಇನ್ನೊಂದು ರೂಪ ಅಥವಾ ಆಚರಣೆಯನ್ನೇ ಗಂಗಾ ಆರತಿ ಅಥವಾ ತುಂಗಾ ಆರತಿ ಎಂದು ಕರೆಯಬಹುದು.

ಪಶ್ಚಿಮ ಘಟ್ಟದಲ್ಲಿ ಜನಿಸಿ, ಶಿವಮೊಗ್ಗದಲ್ಲಿ ಹರಿದು, ಭದ್ರೆಯೊಂದಿಗೆ ಮಿಲನಗೊಳ್ಳುವ ತುಂಗೆಯೊಂದಿಗೆ ಮಲೆನಾಡ ಜನರಿಗೆ ಭಾವನಾತ್ಮಕ ಸಂಬಂಧ. ಜುಲೈ 27ರಂದು ಸಾಮಗಾನ ತಂಡದ ವತಿಯಿಂದ ‘ಸಕ್ಕರೆಯ ತುಂಗೆಗೆ ಅಕ್ಕರೆಯ ಆರತಿ’ ಅಂದರೆ ತುಂಗಾರತಿಯನ್ನು ನೆರವೇರಿಸಲಾಗಿದೆ.

ಸಾಮಗಾನ ತಂಡ ಕೇವಲ ಆರತಿ  ಮಾಡಿ ಸುಮ್ಮನಾಗಿಲ್ಲ. ಒಂದು ಸುಂದರ ಇಂಪಾದ ಗೀತೆಯನ್ನು ರಚಿಸಿ ಹಾಡಿದೆ. ಅದರ ಜತೆಗೆ ಇಡಿ ನಡಿಯ ಚಿತ್ರಣವನ್ನು ಕಣ್ಣ ಮುಂದೆ ಕಟ್ಟಿಕೊಟ್ಟಿದೆ. ಈ ಗೀತ ಚಿತ್ರವನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ..

 

click me!