ಫಲಿತಾಂಶ ಲೋಕಸಭಾ ಚುನಾವಣೆಗೆ ಮೂರು ಪಕ್ಷಗಳಿಗೂ ಎಚ್ಚರಿಕೆಯ ಸಂದೇಶ

Published : Sep 03, 2018, 09:29 PM ISTUpdated : Sep 09, 2018, 09:34 PM IST
ಫಲಿತಾಂಶ ಲೋಕಸಭಾ ಚುನಾವಣೆಗೆ ಮೂರು ಪಕ್ಷಗಳಿಗೂ ಎಚ್ಚರಿಕೆಯ ಸಂದೇಶ

ಸಾರಾಂಶ

ಇನ್ನು ಕೆಲವೇ ತಿಂಗಳಲ್ಲೇ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಅಂತ ವಿಶ್ಲೇಷಣೆ ಮಾಡಲಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಕ್ತಾಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪಮತಗಳ ಮುನ್ನಡೆ ದಾಖಲಿಸಿದ್ದು, ಪ್ರತಿಪಕ್ಷ ಬಿಜೆಪಿ ಎರಡನೇಯ ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಶೇಕಡಾ 36 ರಷ್ಟು ಮತ್ತು ಬಿಜೆಪಿ ಶೇ 34 ರಷ್ಟು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ.

ಬೆಂಗಳೂರು[ಸೆ.03]: ರಾಜ್ಯದಲ್ಲಿ ಇಂದು ಮುಕ್ತಾಯವಾದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಎಲ್ಲಾ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ.

ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ರಾಜಕೀಯ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಮುಂದಾಗಿದ್ದ ಎಲ್ಲಾ ಪಕ್ಷಗಳಿಗೂ ನಿರೀಕ್ಷಿತ ಲಾಭವಾಗಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷ ಬಿಜೆಪಿಗಿಂತ ಕೇವಲ ಶೇಕಡಾ 2 ರಷ್ಟು ಹೆಚ್ಚು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಕಾಂಗ್ರೆಸ್ ವೇಗಕ್ಕೆ ಜೆಡಿಎಸ್ ಅಡ್ಡಿಯಾಗಿದ್ದು ಸ್ಪಷ್ಟವಾಗಿದ್ದು, ಇದು ಸಹಜವಾಗಿಯೇ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಪ್ರತಿಕೂಲ ಪರಿಣಾಮವನ್ನುಂಟು ಮಾಡೋದು ಗ್ಯಾರಂಟಿಯಾಗಿದೆ. 

ನಗರದ ಮತದಾರರ ವಿಶ್ವಾಸ ಉಳಿಸಿಕೊಂಡಿತಾ ಆಡಳಿತಾರೂಢ ಕಾಂಗ್ರೆಸ್ ಪಕ್ಷ...?

ಇನ್ನು ಕೆಲವೇ ತಿಂಗಳಲ್ಲೇ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಅಂತ ವಿಶ್ಲೇಷಣೆ ಮಾಡಲಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಕ್ತಾಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪಮತಗಳ ಮುನ್ನಡೆ ದಾಖಲಿಸಿದ್ದು, ಪ್ರತಿಪಕ್ಷ ಬಿಜೆಪಿ ಎರಡನೇಯ ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಶೇಕಡಾ 36 ರಷ್ಟು ಮತ್ತು ಬಿಜೆಪಿ ಶೇ 34 ರಷ್ಟು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಶೇಕಡಾ 2 ರಷ್ಟು ಹೆಚ್ಚು ವಾರ್ಡ್ ಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಜೆಡಿಎಸ್ ವಿಫಲವಾಗಿದ್ದು, ಶೇಕಡಾ 14 ರಷ್ಟು ವಾರ್ಡ್ ಗಳಲ್ಲಿ ಮಾತ್ರ ಸಫಲವಾಗಿದ್ದು, ಪಕ್ಷೇತರರು ಶೇಕಡಾ 12 ರಷ್ಟು ವಾರ್ಡ ಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. 

ಶೇಕಡಾ 50 ರಡಿ ಗಡಿ ದಾಟದ ಕಾಂಗ್ರೆಸ್, ನಿರೀಕ್ಷಿತ ಸಾಧನೆ ಮಾಡದ ಜೆಡಿಎಸ್

ಈ ಬಾರಿಯ ಚುನಾವಣೆಯಲ್ಲಿ ಶೇಕಡಾ 36 ರಷ್ಟು ಮಾತ್ರ ಗೆಲುವು ಸಾಧಿಸಿರುವ ಕಾಂಗ್ರೆಸ್ ಶೇಕಡಾ 50 ರ ಗಡಿ ದಾಟುವ ಪ್ರಯತ್ನದಲ್ಲಿ ಸಫಲವಾಗಿಲ್ಲ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಗರದ ಮತದಾರರ ಪೈಕಿ ಪೂರ್ಣ ಪ್ರಮಾಣದ ಬೆಂಬಲ ಕಾಂಗ್ರೆಸಿಗೆ ಲಭ್ಯವಾಗೋದಿಲ್ಲ ಅನ್ನೋದು ಬಹಳ ಸ್ಪಷ್ಟವಾಗಿದೆ. ಇನ್ನು ಬಿಜೆಪಿ ಕಳೆದ ಬಾರಿಯ ಚುನಾವಣೆಯ ಫಲಿತಾಂಶಕ್ಕಿಂತ ಶೇಕಡಾ 14 ರಷ್ಟು ಉತ್ತಮ ಸಾಧನೆ ಮಾಡಿದೆ. ಇದರಿಂದಾಗಿ ನಗರ ಪ್ರದೇಶಗಳಲ್ಲೂ ಬಿಜೆಪಿ ಪ್ರಾಬಲ್ಯ ಮುಂದುವರಿಯಲಿದೆ. 

ಆದರೆ ಹೆಚ್ಚು ಶಾಸಕರಿರುವ ಬಿಜೆಪಿಯ ಈ ಬಾರಿಯ ಸಾಧನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಈ ಬಾರಿ  ಕಾಂಗ್ರೆಸ್ ಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸುವ ಪ್ರಯತ್ನ ಯಶಸ್ವಿಯಾಗಲಿಲ್ಲ.  ಇನ್ನು ಜೆಡಿಎಸ್ ಈ ಬಾರಿ ಒಳ ಒಪ್ಪಂದದ ಲಾಭ ಮಾಡಿಕೊಂಡು  ಶೇಕಡಾ 12 ರಷ್ಟು ವಾರ್ಡ್ ಗಳಲ್ಲಿ ಗೆಲವು ಸಾಧಿಸಿದೆ. ನಗರ ಪ್ರದೇಶಗಳಲ್ಲಿ ಕಾಂಗ್ರೆಸ್, ಬಿಜೆಪಿಯಂತೆ ಹೆಚ್ಚು ಮತದಾರರನ್ನು ತಲುಪಲು ಜೆಡಿಎಸ್ ಗೆ ಸಾಧ್ಯವಾಗಿಲ್ಲ. 

ಗುಟ್ಟು ಬಿಟ್ಟು ಕೊಡದ ನಗರದ ಮತದಾರ 

ನಗರ ಪ್ರದೇಶಗಳ ಮತದಾರರನ್ನು ಈ ಚುನಾವಣೆಯಲ್ಲಿ ಸೆಳೆಯಲು ರಾಜಕೀಯ ಪಕ್ಷಗಳು ಪ್ರಯತ್ನ ಪಟ್ಟರೂ ಯಾವುದೇ ಸ್ಪಷ್ಟವಾದ ನಿರ್ಧಾರವನ್ನು ಮತದಾರ ನೀಡಿಲ್ಲ. ಇದು ಲೋಕಸಭಾ ಚುನಾವಣೆಯಲ್ಲಿ ಮರುಕಳಿಸುವ ಆತಂಕ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಲ್ಲಿ ಕಂಡುಬಂದಿದೆ. ನಗರ ಮತದಾರರನ್ನು ಸೆಳೆಯುವಲ್ಲಿ ಜೆಡಿಎಸ್ ಮತ್ತೇ ವಿಫಲವಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲ ಜೆಡಿಎಸ್ ಗೆ ಸಿಗೋ ಸಾಧ್ಯತೆ ಕಡಿಮೆ.
 
ಸಾಂಪ್ರದಾಯಿಕ ಮತದಾರರನ್ನು ನೆನಪಿಸಿದ ಚುನಾವಣೆ

ಈ ಬಾರಿಯ ಚುನಾವಣೆಯಲ್ಲಿ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಬಂದಿರುವುದನ್ನು ಗಮನಿಸಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೇ ಇದೇ ರೀತಿಯ ಒಲವು ವ್ಯಕ್ತವಾಗುವ ಸಾಧ್ಯತೆಗಳಿವೆ. ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಪರವಾದ ಒಲವು ವ್ಯಕ್ತವಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗುವ ಅಭಿಪ್ರಾಯವೂ ಕೇಳಿಬಂದಿದೆ. ಅದೇ ರೀತಿಯಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ನಿರೀಕ್ಷೆಯಂತೆ ಹೆಚ್ಚು ಸ್ಥಾನಗಳು ಲಭಿಸಿರುವುದರಿಂದ ಆ ಭಾಗದಲ್ಲಿ ಎಂದಿನಂತೆ ಸಾಂಪ್ರದಾಯಿಕ ಮತದಾರರನ್ನು ಜೆಡಿಎಸ್ ನೆಚ್ಚಿಕೊಳ್ಳಬೇಕಾಗುತ್ತದೆ ಅನ್ನುವ ಮಾತು ಕೇಳಿಬಂದಿದೆ.

ಸಂಸದರಿಗೆ ಎಚ್ಚರಿಕೆಯ ಸಂದೇಶ

ಈ ಬಾರಿಯ ಚುನಾವಣೆಯಲ್ಲಿ ನಗರದ ಮತದಾರರನ್ನು ದೃಷ್ಟಿಯಲ್ಲಿರಿಸಿಕೊಂಡು ಚುನಾವಣೆ ನಡೆಸಿದ್ದ ಸಂಸದರಿಗೆ ರಾಜಕೀಯ ಚಿತ್ರಣ ಲಭ್ಯವಾಗಿದೆ. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಹೆಚ್ಚು ಸ್ಥಾನಗಳನ್ನು ಪಡೆಯಲು ಮುಂದಾಗಿದ್ದ ಬಹುತೇಕ ಹಾಲಿ ಸಂಸದರಿಗೆ ನಗರ ಮತದಾರರ ಒಲವು ಸ್ಪಷ್ಟವಾಗಿ ಗೊತ್ತಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸಂಘಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. 

ಮೈತ್ರಿಯಿಂದ ಕಾಂಗ್ರೆಸ್ ಗೆ ಹಿನ್ನಡೆ

ಕಳೆದ ಬಾರಿಯ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಕಾಂಗ್ರೆಸ್ ಈ ಬಾರಿಯೂ ಮೇಲುಗೈ ಸಾಧಿಸಿದೆ. ಆದರೆ ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡ ಕಡೆ ಅಲ್ಪ ಮಟ್ಟಿನ ಲಾಭ ಮಾತ್ರ ಕಾಂಗ್ರೆಸ್ ಗೆ ಆಗಿದೆ. ವಿಧಾನಸೌಧದಲ್ಲಿ ಆಗಿರುವ ಮೈತ್ರಿಯನ್ನು ಕೆಳ ಹಂತದಲ್ಲಿ ಒಪ್ಪಿಕೊಂಡಿಲ್ಲ ಅನ್ನೋ ಮಾತು ಕಾಂಗ್ರೆಸ್ ಪಡಶಾಲೆಯಲ್ಲೇ ಕೇಳಿಬಂದಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡುವ ಮಾತಡುತ್ತಿರುವ ಕಾಂಗ್ರೆಸ್ ಜೆಡಿಎಸ್ ಗೆ ಎಚ್ಚರಿಕೆಯ ಸಂದೇಶವೊಂದು ರವಾನೆಯಾದಂಗಿದೆ.

ಒಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನುಂಟು ಮಾಡದಿದ್ದರೂ, ಎಲ್ಲಾ ರಾಜಕೀಯ ಪಕ್ಷಗಳಿಗೆ ಸಂದೇಶಗಳನ್ನು ನೀಡಿದೆ ಅನ್ನೋ ಮಾತು ಬಲವಾಗಿ ಕೇಳಿಬಂದಿದೆ. 

 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!