
ನವದೆಹಲಿ : ಕಾಂಗ್ರೆಸ್ ಟ್ವಿಟರ್ ಪೋಲ್’ ಒಂದರಲ್ಲಿ ಸುಷ್ಮಾ ಸ್ವರಾಜ್ ಗೆದ್ದಿದ್ದು, ಅದನ್ನು ರೀ ಟ್ವೀಟ್ ಮಾಡಿದ್ದರು. ಇದೀಗ ಸುಷ್ಮಾ ಸ್ವರಾಜ್’ಗೆ ಟಾಂಗ್ ನೀಡುವ ಸಲುವಾಗಿ ಕಾಂಗ್ರೆಸ್ ಇನ್ನೊಂದು ಟ್ವಿಟರ್ ಪೋಲ್ ಕ್ರಿಯೇಟ್ ಮಾಡಿದೆ. ಅದರಲ್ಲಿ ಸುಷ್ಮಾ ಸ್ವರಾಜ್ ಅವರ ದೊಡ್ಡ ಮಿಸ್ಟೇಕ್ ಯಾವುದು ಎಂದು ಪ್ರಶ್ನೆ ಮಾಡಲಾಗಿದೆ. ಅದರಲ್ಲಿ ಆಪ್ಶನ್’ಗಳಾಗಿ
*39 ಭಾರತೀಯರು ಇರಾಕ್’ನಲ್ಲಿ ಹತ್ಯೆಯಾಗಿರುವುದು
*ಡೋಕ್ಲಾಂ ಸಮಸ್ಯೆಯನ್ನು ಬಗೆಹರಿಸದಿರುವುದು ಎಂದು ನೀಡಿದೆ.
ಅಲ್ಲದೇ ರೀ ಟ್ವೀಟ್ ಮಾಡಲು ಅಂಜದಿರಿ ಎಂದು ಹೇಳಿದೆ.
ಇದಕ್ಕೆ ಈಗಾಗಲೇ ಶೇ.53ರಷ್ಟು ಜನರು ಇರಾಕ್ ವಿಚಾರಕ್ಕೆ ಮತ ನೀಡಿದ್ದರೆ, ಶೇ 43ರಷ್ಟು ಜನರು ಡೋಕ್ಲಾಂ ವಿಚಾರ ದೊಡ್ಡ ಫೈಲ್ಯೂರ್ ಎಂದು ಮತ ಹಾಕಿದ್ದಾರೆ. ಈ ಟ್ವೀಟ್ ಬಗ್ಗೆ ಜನರ ಉತ್ತರವನ್ನು ರೀ ಟ್ವೀಟ್ ಮಾಡಿ ಎಂದು ಸುಷ್ಮಾ ಅವರಿಗೆ ಕಾಂಗ್ರೆಸ್ ಸವಾಲು ಹಾಕಿದೆ.
ಕಳೆದ ಕೆಲ ದಿನಗಳ ಹಿಂದೆ ಇರಾಕ್’ನಲ್ಲಿ ಭಾರತೀಯರ ಹತ್ಯೆ ವಿಚಾರದಲ್ಲಿ ಸುಷ್ಮಾ ತಪ್ಪಿದೆಯೇ ಎನ್ನುವ ಪ್ರಶ್ನೆ ಕೇಳಿ ಎಸ್ – ಆರ್ ನೋ ಆಫ್ಶನ್ ನೀಡಿತ್ತು. ಅದರಲ್ಲಿ 34 ಸಾವಿರ ಜನರ ವೋಟ್ ಮಾಡಿ ನೋ ಎನ್ನುವ ಉತ್ತರ ನೀಡಿದ್ದರು. ಶೇ.76ರಷ್ಟು ಮಂದಿ ಸುಷ್ಮಾ ಪರವಾಗಿ ಮತದಾನ ಮಾಡಿದ್ದರು.
Which of these two is Sushma Swaraj's biggest failure? #IndiaSpeaks
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.