ತಮಾಷೆಯಲ್ಲ... ಭಾರೀ ದಂಡದ ಭೀತಿ: ಬೈಕ್ ಸಾಹಸ ತಡೆಯಲು ಮಗನ ಬಂಧಿಸಿಟ್ಟ ಅಪ್ಪ! ಎಲ್ಲಿ ನಡೆದ ಘಟನೆ? ಇಲ್ಲಿದೆ ವಿವರ
ಲಖನೌ[ಸೆ.12]: ಬೈಕ್ ಸಿಕ್ಕರೆ ಸಾಕು ಮಗ ಯದ್ವಾತದ್ವ ಗಾಡಿ ಓಡಿಸುತ್ತಾನೆ. ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ಮಗನನ್ನು ಮನೆಯ ಕೋಣೆಯಲ್ಲೇ ಕೂಡಿ ಹಾಕಿದ್ದ. ಕೊನೆಗೆ ಪೊಲೀಸರಿಗೆ ಕರೆ ಮಾಡಿದ ಆತನ ಮಗ, ಕೋಣೆಯಿಂದ ಹೊರಬಂದಿದ್ದಾನೆ.
undefined
ಇಂಥದ್ದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ. ಮಗನನ್ನು ಕೂಡಿಹಾಕಿದ್ದ ತಂದೆಯನ್ನು ಆಗ್ರಾದ ನಿವಾಸಿ ಜಲಂ ಸಿಂಗ್ ಎಂದು ಗುರುತಿಸಲಾಗಿದೆ. ತನ್ನ ಬೈಕ್ ತೆಗೆದುಕೊಂಡು ಮಗ ಸುತ್ತಾಡಲು ಹೋಗುತ್ತಿದ್ದ. ಹೀಗಾಗಿ ಆತನನ್ನು ತಡೆಯಲು ಕೂಡಿ ಹಾಕಿದ್ದಾಗಿ ಜಲಂ ಸಿಂಗ್ ಹೇಳಿಕೆ ನೀಡಿದ್ದಾನೆ.
ಟ್ರಾಫಿಕ್ ಪೊಲೀಸ್ ಆದ ಸಚಿವ: ನಿಮಿಷದಲ್ಲೇ ಕ್ಲಿಯರ್ ಆಯ್ತು ಟ್ರಾಫಿಕ್, ವಿಡಿಯೋ ವೈರಲ್
ನೂತನ ಕಾಯ್ದೆಯ ಪ್ರಕಾರ, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದರೆ 1000 ರು. ದಂಡ ಹಾಗೂ ಮೂರು ತಿಂಗಳು ಸಜೆ ವಿಧಿಸಲು ಅವಕಾಶ ಇದೆ.