
ಗೋವಾ(ಅ.22): ಗೋವಾ ಕನ್ನಡಿಗರ ಮೇಲೆ ಗೋವಾ ಕೊಂಕಣಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕನ್ನಡಿಗರ ಮನೆಗಳನ್ನು ಸುಟ್ಟು ತಮ್ಮ ಪ್ರತಿಕಾರ ತೀರಿಸಿಕೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಘಟನೆ ನೋಡನೋಡುತ್ತಿದ್ದಂತೆ ಭಾಷಾ ವೈಷಮ್ಯಕ್ಕೆ ತಿರುವು ಪಡೆದಿದೆ. ವಿಕೋಪಕ್ಕೆ ತಿರುಗಿದ ಈ ಜಗಳ 'ನೀವು ಕನ್ನಡಿಗರು ಜಗಳಗಂಟರು ಎಂದು ನಿಮಗೆ ಮಹದಾಯಿ ನೀರು ಬೇಕೇ' ಎಂದು ಊರಿನ ಜನರೆಲ್ಲಾ ಸೇರಿ 7 ಕುಟುಂಬಗಳ ಮೇಲೆ ಹಲ್ಲೆ ಮಾಡಿ ಮನೆ ವಾಹನಗಳನ್ನು ಜಖಂ ಮಾಡಿದ್ದಾರೆ.
ಪೊಂಡಾದ ಟಿಸ್ ಉಸಗಾಂ ಪ್ರದೇಶದಲ್ಲಿ ಘಟನೆ ನಡೆದಿದ್ದು. ಪೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐ.ಪಿ.ಸಿ 143,147,148,504,506, (II) 323, 324, 307, 397, 354. 380, R/w 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೋವಾದಿಂದಲೇ ಊರು ಬಿಡಿಸಿದ ಗೋವಾ ಕೊಂಕಣಿ ಜನರ ಕಾಟಕ್ಕೆ ಬೆದರಿದ ಕನ್ನಡಿಗರು ಇಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.