
ಇಸ್ಲಮಾಬಾದ್(ಸೆ.26): ಮಹಾಭಾರತದಲ್ಲಿ ಬಂಡಿ ಅನ್ನ ತಿನ್ನುವ ಬಕಾಸುರನ ಬಗ್ಗೆ ಕೇಳಿದ್ದೀರಿ. ಆದ್ರೆ ಪಾಕಿಸ್ತಾನದಲ್ಲೊಬ್ಬ ಅಭಿನವ ಬಕಾಸುರನಿದ್ದಾನೆ.
ಖಾನ್ ಬಾಬಾನಿಗೆ 24 ವರ್ಷ ವಯಸ್ಸು. ಈತನ ತೂಕ ಬರೋಬ್ಬರಿ 436 ಕೆ.ಜಿ. ದಿನಕ್ಕೆ 4 ಕೋಳಿ, 5 ಲೀಟರ್ ಹಾಲು, 36 ಮೊಟ್ಟೆ ಸೇವಿಸುವ ಖಾನ್ ಬಾಬಾನಿಗೆ ರೆಸ್ಲಿಂಗ್ ಎಂದರೆ ಸಖತ್ ಇಷ್ಟ. ಚಿಕ್ಕಂದಿನಿಂದಲೂ ರೆಸ್ಲಿಂಗ್ ನೋಡುತ್ತಿದ್ದ ಖಾನ್, ತಾನೂ ಧಡೂತಿ ದೇಹ ಹೊಂದಬೇಕೆಂದು ದಿನಾಲೂ ಕಸರತ್ತು ನಡೆಸುತ್ತಾನೆ. ಜೊತೆಗೆ ಸಿಕ್ಕಾಪಟ್ಟೆ ಆಹಾರ ತಿಂದು ದೇಹವನ್ನು ಬೆಳೆಸಿಕೊಂಡಿದ್ದಾನೆ. ಒಂದೇ ಕೈಯಲ್ಲಿ ಒಬ್ಬ ಮನುಷ್ಯನನ್ನು ಅನಾಮತ್ತಾಗಿ ಎತ್ತಿಕೊಳ್ಳುವಷ್ಟು ಶಕ್ತಿಶಾಲಿ ಈ ಖಾನ್ ಬಾಬಾ.
2012 ರಲ್ಲಿ ಜಪಾನ್'ನಲ್ಲಿ ನಡೆದ ರೆಸ್ಲಿಂಗ್ ನಲ್ಲಿ ಭಾಗವಹಿಸಿದ್ದ ಖಾನ್, ಅಮೆರಿಕದಲ್ಲಿ ನಡೆಯುವ ಸ್ಪರ್ಧೆಗೆ ತಯಾರಿ ನಡೆಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.